ನಿನ್ನೆ ಹುಟ್ಟು ಹಬ್ಬ ಆಚರಿಸಿಕೊಂಡ ಧೋನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಧೋನಿ ಆಪ್ತರು, ಟೀಂ ಇಂಡಿಯಾ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವರು ಧೋನಿಗೆ ಶುಭಕೋರಿದ್ದಾರೆ. ಹಲವರು ಧೋನಿಗಾಗಿ ಪಾರ್ಟಿ ಆಯೋಜಿಸಲು ರೆಡಿಯಾಗಿದ್ದರು. ಆದರೆ ಧೋನಿ ಮಾತ್ರ ಯಾವುದಕ್ಕೂ ಒಲ್ಲೆ ಎಂದಿದ್ದರು. ಎಲ್ಲರಿಂದ ತಪ್ಪಿಸಿಕೊಂಡ ಧೋನಿ ತಮ್ಮ ಹಟ್ಟು ಹಬ್ಬವನ್ನು ಮನೆಯ ಸಾಕು ನಾಯಿಗಳ ಜೊತೆ ಆಚರಿಸಿದ್ದಾರೆ.
ರಾಂಚಿ(ಜು.07) ಎಂ.ಎಸ್.ಧೋನಿ ತುಂಬಾ ಡಿಫರೆಂಟ್. ಅದು ಆನ್ ಫೀಲ್ಡ್ ಆಗಿರಲಿ, ಆಫ್ ದಿ ಫೀಲ್ಡ ಆಗಿರಲಿ, ಧೋನಿ ನಡೆ ಭಿನ್ನ. ಆಲೋಚನೆಗಳು ಭಿನ್ನ. ಹೀಗಾಗಿಯೇ ಧೋನಿ ಕ್ರಿಕೆಟ್ ಚಾಣಾಕ್ಷ ಎಂದು ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ದೂರ ದೂರ, ಹಮ್ಮ ಬಿಮ್ಮು ಧೋನಿಗಿಲ್ಲ. ನಿನ್ನೆ ಧೋನಿ 2ನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ದಾರೆ. ಎಲ್ಲರೂ ಧೋನಿ ಹುಟ್ಟುಹಬ್ಬವನ್ನು ಪಾರ್ಟಿ ಮೂಲಕ, ಅಥವಾ ಆಪ್ತರೊಂದಿಗೆ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರ ಜೊತೆ ಆಚರಿಸಿಕೊಂಡಿರಬುಹುದು ಎಂದುಕೊಂಡರೆ ತಪ್ಪು. ಎಲ್ಲರ ಆಹ್ವಾನ ತಿರಸ್ಕರಿಸಿದ್ದ ಧೋನಿ, ತಮ್ಮ ಹುಟ್ಟು ಹಬ್ಬವನ್ನು ಮನೆಯ ನಾಯಿಗಳೊಂದಿಗೆ ಆಚರಿಸಿದ್ದಾರೆ.
ರಾಂಚಿಯ ಹೊರವಲಯದಲ್ಲಿರುವ ಧೋನಿ ಫಾರ್ಮ್‌ಹೌಸ್‌ನಲ್ಲಿ ಹುಟ್ಟು ಹಬ್ಬ ಆಚರಿಸಿದ್ದಾರೆ. ಆದು ವಿಶೇಷ ಅತಿಥಿಗಳ ಜೊತೆ ಹುಟ್ಟು ಹಬ್ಬ ಆಚರಣೆ ವಿಡಿಯೋ ವೈರಲ್ ಆಗಿದೆ. ಕಾರಣ ಧೋನಿ ತಮ್ಮ ಸಾಕು ನಾಯಿಗಳ ಜೊತೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
undefined
ಧೋನಿ ತಮ್ಮ ಮನೆಯ ಆವರಣದಲ್ಲಿ ಪುಟ್ಟ ಟೇಬಲ್ ಹಾಕಿ ತಮ್ಮ ಸಾಕು ನಾಯಿಗಳನ್ನು ಕರೆದಿದ್ದಾರೆ. ಬಳಿಕ ಕ್ಯಾಂಡಲ್ ಹಚ್ಚಿ ಕೇಕ್ ಕತ್ತರಿಸಿದ್ದಾರೆ. ಬಳಿಕ ನಾಲ್ಕು ನಾಯಿಗಳಿಗೆ ಹಂಚಿದ್ದಾರೆ. ಎರಡು ಬಿಳಿ ಬಣ್ಣದ ನಾಯಿಗಳಾದರೆ, ಒಂದು ಕಪ್ಪು ಹಾಗೂ ಮತ್ತೊಂದು ಕಪ್ಪು ಮಿಶ್ರಿತ ಬಣ್ಣ. ಕೇಕ್ ಕತ್ತರಿಸಿ ನಾಯಿಗೆ ನೀಡಿದ ಬಳಿಕ ಧೋನಿ, ತಾವು ತಿಂದಿದ್ದಾರೆ.
Thala's birthday gift 🎥💛 🦁 pic.twitter.com/ElFnwf6PoS
— Chennai Super Kings (@ChennaiIPL)
ನಾಯಿ ಜೊತೆ ತಾವು ಕೇಕ್ ತಿನ್ನುತ್ತಾ ಹರಟೆ ಹೊಡೆದಿದ್ದಾರೆ. ಒಂದೊಂದೆ ಸೂಚನೆಗಳನ್ನು ನೀಡುತ್ತಾ ಧೋನಿ ಕೇಕ್ ನಾಯಿಗೆ ನೀಡಿದ್ದಾರೆ. ಈ ವಿಡಿಯೋ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಲವರು ಧೋನಿಗೆ ಶುಭಾಶಯ ಕೋರಿ, ಇಂತಹ ನಾಯಕನನ್ನು ಪಡೆದ ನಾವೇ ಧನ್ಯರು ಎಂದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಇದು ನನ್ನ ಕೊನೆಯ ಬರ್ತ್‌ಡೆ ವಿಶ್, ಧೋನಿ ಹುಟ್ಟುಹಬ್ಬಕ್ಕೆ ಅಶ್ವಿನ್ ಗೂಗ್ಲಿ ಶುಭಾಶಯ!
ಇದೀಗ ಅಭಿಮಾನಿಗಳು ಮತ್ತೊಂದು ಬಾರಿ ಧೋನಿಯನ್ನು ಐಪಿಎಲ್ ಟೂರ್ನಿಯಲ್ಲಿ ನೋಡಲು ಕಾತರರಾಗಿದ್ದಾರೆ. ಕಾರಣ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಆಡುವ ಇಂಗಿತವನ್ನು ಧೋನಿ ವ್ಯಕ್ತಪಡಿಸಿದ್ದರು. ಆದರೆ ಇತ್ತೀಚೆಗೆ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಧೋನಿ ಜನವರಿ-ಫೆಬ್ರವರಿವರೆಗೆ ಆಡುವುದಿಲ್ಲ ಎಂದು ಐಪಿಎಲ್ನ ಚೆನ್ನೈ ತಂಡದ ಸಿಇಒ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ‘ಧೋನಿ ಐಪಿಎಲ್ ಪೂರ್ತಿ ಮಂಡಿ ನೋವಿನಿಂದ ಬಳಲುತ್ತಿದ್ದರೂ ಒಮ್ಮೆಯೂ ಈ ಬಗ್ಗೆ ನಮ್ಮಲ್ಲಿ ಹೇಳಲಿಲ್ಲ. ವಿಶ್ರಾಂತಿಯನ್ನೂ ಪಡೆದುಕೊಳ್ಳಲಿಲ್ಲ. ಅವರು ಟೂರ್ನಿಯುದ್ದಕ್ಕೂ ಸಂಕಷ್ಟಅನುಭವಿಸಿದರು. ಆದರೆ ತಂಡದ ಮೇಲಿನ ಬದ್ಧತೆ ಅವರನ್ನು ಆಡುವಂತೆ ಮಾಡಿತು. ಆದರೆ ಫೈನಲ್ ಬಳಿಕ ಮಂಡಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ತಿಳಿಸಿದರು. 3-4 ವಾರ ವಿಶ್ರಾಂತಿ ಪಡೆದು, ಬಳಿಕ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.