ಟಿ ಶರ್ಟ್‌ನಲ್ಲಿ ಧೂಳು ಒರೆಸಿ ಅಭಿಮಾನಿ ಬೈಕ್‌ ಮೇಲೆ ಆಟೋಗ್ರಾಫ್ ಹಾಕಿದ ಧೋನಿ!

By Suvarna News  |  First Published Nov 26, 2023, 4:25 PM IST

ಮೂರು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ಮಾಜಿ ನಾಯಕ ಎಂಎಸ್ ಧೋನಿ ತುಂಬಾನೇ ಸಿಂಪಲ್. ಸಾರ್ವಜನಿಕ ಕಾರ್ಯಕ್ರಮ, ಭೇಟಿ ಸೇರಿದಂತೆ ಯಾವುದೇ ಕಡೆ ಧೋನಿ ಅತ್ಯಂತ ಸರಳ ವ್ಯಕ್ತಿ. ಇದೀಗ ಅಭಿಮಾನಿಯೊಬ್ಬ ಹೊಸ ಬೈಕ್ ಖರೀದಿಸಿ ಧೋನಿ ಆಟೋಗ್ರಾಫ್ ಹಾಕಲು ಹೇಳಿದ್ದಾನೆ.ಧೋನಿ ತನ್ನ ಟಿ ಶರ್ಟ್‌ನಲ್ಲೇ ಧೂಳು ಒರೆಸಿ ಸಹಿ ಹಾಕಿದ ವಿಡಿಯೋ ವೈರಲ್ ಆಗಿದೆ.


ನವದೆಹಲಿ(ನ.26) ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕೂಲ್ ಕ್ಯಾಪ್ಟನ್ ಎಂದೇ ಗುರುತಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಧೋನಿ ಅತ್ಯಂತ ಸರಳ ವ್ಯಕ್ತಿ. ಎಲ್ಲೇ ಹೋದರೂ ತಾನೊಬ್ಬ ದಿಗ್ಗಜ ಕ್ರಿಕಟಿಗ, ಸೆಲೆಬ್ರೆಟಿ ಅನ್ನೋ ಯಾವುದೇ ತೋರ್ಪಡಿ ಧೋನಿಗಿಲ್ಲ. ಇದೀಗ ಧೋನಿ ಸಿಂಪಲ್ ವ್ಯಕ್ತಿತ್ವ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಅಭಿಮಾನಿಯೊಬ್ಬ ಹೊಸ ಬೈಕ್ ಖರೀದಿಸಿದ್ದಾನೆ. ಬಳಿಕ ಧೋನಿ ಬಳಿ ಆಟೋಗ್ರಾಫ್‌ಗೆ ಮನವಿ ಮಾಡಿದ್ದಾರೆ. ಅಭಿಮಾನಿಗಳ ಬೇಡಿಕೆಗೆ ಇಲ್ಲ ಅನ್ನೋ ಮಾತೇ ಇಲ್ಲ. ಧೋನಿ ಸಹಿ ಹಾಕಲು ಮಾರ್ಕರ್ ಪೆನ್ನು ತೆಗೆದು ಆಟೋಗ್ರಾಫ್ ಹಾಕಲು ಮುಂದಾಗಿದ್ದಾರೆ. ಆದರೆ ಡೂಮ್ ಮೇಲೆ ಧೂಳಿಕಣಗಳ ಕಾರಣ ಧೋನಿ ತಕ್ಷಣವೇ ತಮ್ಮ ಟಿ ಶರ್ಟ್‌ನಲ್ಲಿ ಧೂಳು ಒರೆಸಿ ಸಹಿ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಧೋನಿ ತನ್ನ ಅಭಿಮಾನಿಗಳ ವಾಹನದ ಮೇಲೆ  ಆಟೋಗ್ರಾಫ್ ಹಾಕುವುದು ಇದೇ ಮೊದಲಲ್ಲ. ಆದರೆ ಈ ಆಟೋಗ್ರಾಫ್ ಕೆಲ ವಿಶೇಷತೆಗಳಿಂದ ಕೂಡಿದೆ. ಅಭಿಯಾನಿ ದುಬಾರಿ ಬೈಕ್ ಖರೀದಿಸಿದ್ದಾರೆ. ಈ ಬೈಕ್ ಮೇಲೆ ಧೋನಿ ಆಟೋಗ್ರಾಫ್ ಹಾಕಿಸಬೇಕು ಅನ್ನೋದು ಬಯಕೆಯಾಗಿತ್ತು. ಇದಕ್ಕಾಗಿ ಪ್ರಯಾಸ ಪಟ್ಟು ಧೋನಿ ಬಳಿಕ ಇತರರ ಮುಖಾಂತರ ಮನವಿ ಮಾಡಿದ್ದರು.

Latest Videos

undefined

 

ಮೊಣಕಾಲು ಗಾಯದಿಂದ ಬಳಲುತ್ತಿದ್ದಾರೆ ಧೋನಿ, ಈ ಬಾರಿಯ ಐಪಿಎಲ್‌ಗೆ ಡೌಟ್!

ಅಭಿಮಾನಿಯ ಮನವಿ ಕೇಳಿದ್ದೇ ತಡ, ಧೋನಿ ಪ್ರತ್ಯಕ್ಷರಾಗಿದ್ದಾರೆ. ಬೈಕ್ ಡೂಮ್ ಮೇಲಿದ್ದ ಧೂಳಿನ ಕಣಗಳನ್ನು ತನ್ನ ಟಿಶರ್ಟ್‌ನಿಂದ ಒರೆಸೆ ಸಹಿ ಹಾಕಿದ್ದಾರೆ. ಹೇಳಿ ಕೇಳಿ ಧೋನಿಗೆ ವಾಹನಗಳ ಕ್ರೇಜ್ ಸ್ವಲ್ಪ ಹಚ್ಚೇ ಇದೆ. ಸಹಿ ಹಾಕಿ ಬಳಿಕ ಧೋನಿ ಅಭಿಮಾನಿಯ ಬೈಕ್ ಸ್ಟ್ರಾಟ್ ಮಾಡಿದ್ದಾರೆ. ಬೈಕ್ ಕುರಿತ ಮಾಹಿತಿಯನ್ನು ಪಡೆದಿದ್ದಾರೆ. 

 

MS Dhoni and his love for bikes 💛
🎥 Sumeet Kumar pic.twitter.com/veGbBS16UO

— WhistlePodu Army ® - CSK Fan Club (@CSKFansOfficial)

 

ಧೋನಿ ಬಳಿಕ ಯಮಹಾ ಆರ್‌ಎಕ್ಸ್ 100ನಿಂದ ಹಿಡಿದು ಸೂಪರ್ ಬೈಕ್, ಹ್ಯಾಲ್‌ಕಟ್ ಬೈಕ್ ವರೆಗೂ ಕಲೆಕ್ಷನ್ ಇದೆ. ವಿಂಟೇಜ್ ಕಾರುಗಳು,ಐಷಾರಾಮಿ ಕಾರುಗಳನ್ನು ಧೋನಿ ಹೊಂದಿದ್ದಾರೆ. ರಾಂಚಿಯಲ್ಲಿ ಧೋನಿ ಬೈಕ್ ಏರಿ ದಿಢೀರ್ ಸುತ್ತಾಟ ನಡೆಸುವುದು ಸಾಮಾನ್ಯ. ಟೀಂ ಇಂಡಿಯಾ ನಾಯಕನಾಗಿರುವಾಗಲೇ ಧೋನಿ, ಯಾರಿಗೂ ಹೇಳದಂತೆ ಧೋನಿ ಬೈಕ್ ಏರಿ ಸುತ್ತಾಡುತ್ತಿದ್ದರು. ರಾಂಚಿ ಪೊಲೀಸರು ಈ ಕುರಿತು ಹಲವು ಬಾರಿ ಧೋನಿಗೆ ಎಚ್ಚರಿಕೆಯನ್ನೂ ನೀಡಿದ್ದರು.

 

ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಐಪಿಎಲ್ ನಿವೃತ್ತಿ ಮಾತು ತಳ್ಳಿಹಾಕಿದ ಧೋನಿ !

ಧೋನಿ ಭದ್ರತೆ ಕುರಿತು ರಾಂಚಿ ಪೊಲೀಸರು ಆತಂಕಗೊಂಡಿದ್ದರು. ಯಾವುದೇ ಭದ್ರತೆ ಇಲ್ಲದೆ ಧೋನಿ ಸುತ್ತಾಡುವುದು ಅಪಾಯ. ಹೀಗಾಗಿ ಎಲ್ಲೇ ಸುತ್ತಾಡುವ ಯೋಜನೆಗಳಿದ್ದರೆ ಪೊಲೀಸರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕಿತ್ತು. ಆದರೆ ಧೋನಿ ಯಾವುದೇ ಮಾಹಿತಿ ನೀಡದೇ ಸುತ್ತಾಡುತ್ತಿದ್ದರು

click me!