ಕಾರು ಅಪಘಾತದಿಂದ ಪ್ರಯಾಣಿಕನ ಜೀವ ಉಳಿಸಿದ ಮೊಹಮ್ಮದ್ ಶಮಿ..! ವಿಡಿಯೋ ವೈರಲ್‌

By Naveen KodaseFirst Published Nov 26, 2023, 1:51 PM IST
Highlights

ಅನುಭವಿ ವೇಗಿ ಶಮಿ ಇತ್ತೀಚೆಗಷ್ಟೇ ತವರಿನಲ್ಲಿ ಜರುಗಿದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದರು.ಶಮಿಯ ಅದ್ಭುತ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿತ್ತಾದರೂ, ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ 6 ವಿಕೆಟ್ ಸೋಲು ಅನುಭವಿಸಿ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತು. 

ನೈನಿತಾಲ್(ನ.26): ಟೀಂ ಇಂಡಿಯಾ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ, ಕಾರು ಅಪಘಾತಕ್ಕೊಳಗಾದ ವ್ಯಕ್ತಿಯೊಬ್ಬನನ್ನು ರಕ್ಷಿಸಿ ಗಮನ ಸೆಳೆದಿದ್ದಾರೆ. ನೈನಿತಾಲ್‌ನಲ್ಲಿ ನಡೆದ ಈ ಅವಘಡದಲ್ಲಿ ಶಮಿ, ಸಂತ್ರಸ್ಥರಿಗೆ ನೆರವಾಗಿದ್ದಾರೆ. ಈ ಕುರಿತಂತೆ ಶಮಿ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ಈ ಕುರಿತಂತೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಶಮಿ, "ಅವರು ತುಂಬಾ ಅದೃಷ್ಟವಂತರು, ಯಾಕೆಂದರೆ ದೇವರು ಅವರಿಗೆ ಎರಡನೇ ಜೀವನ ಕೊಟ್ಟಿದ್ದಾನೆ. ನನ್ನ ಕಾರಿನ ಮುಂದೆ ಅವರ ಕಾರು ನೈನಿತಾಲ್‌ ರಸ್ತೆಯ ಪರ್ವತದ ಬಳಿ ಅಪಘಾತಕ್ಕೊಳಗಾಯಿತು. ನಾನು ಅವರನ್ನು ಸುರಕ್ಷಿತವಾಗಿ ಕಾಪಾಡಿದೆ ಎಂದು ಬರೆದುಕೊಂಡಿದ್ದಾರೆ.

ಅನುಭವಿ ವೇಗಿ ಶಮಿ ಇತ್ತೀಚೆಗಷ್ಟೇ ತವರಿನಲ್ಲಿ ಜರುಗಿದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದರು.ಶಮಿಯ ಅದ್ಭುತ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿತ್ತಾದರೂ, ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ 6 ವಿಕೆಟ್ ಸೋಲು ಅನುಭವಿಸಿ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತು. 

'ತಲೆ ಮೇಲೆ ಇಟ್ಟು ಕೊಳ್ಳಬೇಕಾದ ವಿಶ್ವಕಪ್ ಟ್ರೋಫಿ ಮಿಚೆಲ್ ಕಾಲ ಕೆಳಗಿದ್ದಿದ್ದು ನೋಡಿ ನೋವಾಯಿತು': ಶಮಿ

ಶಮಿ ಪಾಲಿಗೆ ಸ್ಮರಣೀಯವಾದ ವಿಶ್ವಕಪ್: ಅನುಭವಿ ವೇಗಿ ಮೊಹಮ್ಮದ್ ಶಮಿ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಸಾಧನೆ ಮಾಡುವ ಮೂಲಕ ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆಡಿದ ಕೇವಲ 7 ಪಂದ್ಯಗಳಲ್ಲಿ ಶಮಿ 24 ವಿಕೆಟ್ ಕಬಳಿಸಿ ಭಾರತ ತಂಡವು ಫೈನಲ್‌ ಪ್ರವೇಶಿಸಲು ಮಹತ್ವದ ಪಾತ್ರ ವಹಿಸಿದ್ದರು. 

ಲೀಗ್ ಹಂತದ ಆರಂಭಿಕ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಶಮಿ, ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದ ಬಳಿಕ ತಂಡದ ಪ್ರಮುಖ ವೇಗಿಯಾಗಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಇದಾದ ಬಳಿಕ ಶಮಿ ಮಾರಕ ದಾಳಿ ನಡೆಸಿ ತಾವೆಷ್ಟು ಅಪಾಯಕಾರಿ ಬೌಲರ್ ಎನ್ನುವುದನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಅನಾವರಣ ಮಾಡುವಲ್ಲಿ ಯಶಸ್ವಿಯಾದರು. ಶಮಿ ಅದ್ಭುತ ಪ್ರದರ್ಶನದ ಹೊರತಾಗಿಯೂ ಭಾರತ ಈ ಬಾರಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗದೇ ಹೋದದ್ದು ಮಾತ್ರ ವಿಪರ್ಯಾಸವೇ ಸರಿ.
 

click me!