IPL 2024: ಕಲರ್‌ ಫುಲ್ ಲೀಗ್‌ಗೆ ಇಂಜುರಿ ಕಾಟ..! ಈಗಾಗಲೇ ಮೂವರು ಟೂರ್ನಿಯಿಂದ ಔಟ್

Published : Mar 03, 2024, 04:19 PM IST
IPL 2024: ಕಲರ್‌ ಫುಲ್ ಲೀಗ್‌ಗೆ ಇಂಜುರಿ ಕಾಟ..! ಈಗಾಗಲೇ ಮೂವರು ಟೂರ್ನಿಯಿಂದ ಔಟ್

ಸಾರಾಂಶ

ಕ್ರಿಕೆಟ್ ಜಗತ್ತಿನ ಕಲರ್ಫುಲ್ ಲೀಗ್ IPLಗೆ ಕೌಟ್‌ಡೌನ್ ಶುರು ವಾಗಿದೆ. ಮಾರ್ಚ್ 22ರಿಂದ ಲೀಗ್ ಕಿಕ್ ಸ್ಟಾರ್ಟ್ ಆಗಲಿದೆ. ಈಗಾಗಲೇ ಎಲ್ಲಾ 10 ತಂಡಗಳು ಸೀಸನ್ 17ರ ಚಾಂಪಿಯನ್ ಪಟ್ಟ ಅಲಂಕರಿಸಲು ತಯಾರಿ ನಡೆಸಿವೆ. ಆದ್ರೆ, ಟೂರ್ನಿಗೆ ಆರಂಭವಾಗೋ ಮೊದಲೇ ಇಂಜುರಿ ಸಮಸ್ಯೆ ಶುರುವಾಗಿದೆ.

ಬೆಂಗಳೂರು(ಮಾ.03) IPL ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಎಲ್ಲಾ ತಂಡಗಳು ಈಗಾಗ್ಲೇ ಟೂರ್ನಿಗೆ ಭರ್ಜರಿ ಪ್ರಿಪರೇಷನ್ ನಡೆಸ್ತಿವೆ. ಆದ್ರೆ, ಈ ನಡುವೆ ಈ ಮೆಗಾ ಲೀಗ್‌ಗೆ ಹೊಸ ಕಾಟ ಶುರುವಾಗಿದೆ. ಅಲ್ಲದೇ, ಈ ಸಮಸ್ಯೆ  ದಿನೇ ದಿನೇ ಜಾಸ್ತಿಯಾಗ್ತಿದೆ. ಅಷ್ಟಕ್ಕೂ ಮಿಲಿಯನ್ ಡಾಲರ್ ಲೀಗ್‌ಗೆ  ಕಾಡ್ತಿರೋ ಆ ಸಮಸ್ಯೆ ಏನು ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ಕಲರ್ಫುಲ್ ಲೀಗ್‌ಗೆ ಇಂಜುರಿ ಕಾಟ..! 

ಕ್ರಿಕೆಟ್ ಜಗತ್ತಿನ ಕಲರ್ಫುಲ್ ಲೀಗ್ IPLಗೆ ಕೌಟ್‌ಡೌನ್ ಶುರು ವಾಗಿದೆ. ಮಾರ್ಚ್ 22ರಿಂದ ಲೀಗ್ ಕಿಕ್ ಸ್ಟಾರ್ಟ್ ಆಗಲಿದೆ. ಈಗಾಗಲೇ ಎಲ್ಲಾ 10 ತಂಡಗಳು ಸೀಸನ್ 17ರ ಚಾಂಪಿಯನ್ ಪಟ್ಟ ಅಲಂಕರಿಸಲು ತಯಾರಿ ನಡೆಸಿವೆ. ಆದ್ರೆ, ಟೂರ್ನಿಗೆ ಆರಂಭವಾಗೋ ಮೊದಲೇ ಇಂಜುರಿ ಸಮಸ್ಯೆ ಶುರುವಾಗಿದೆ. 

ಅನಂತ್ ಅಂಬಾನಿ ಮದುವೆಯಲ್ಲಿ ಧೋನಿ ಮಿಂಚು..! ಮಹಿ ನೋಡಿ ದಂಗಾದ ಫ್ಯಾನ್ಸ್

ಮೆಗಾ ಟೂರ್ನಿಯಿಂದ ಶಮಿ ದೂರ..! 

ಯೆಸ್, ಈವರೆಗು ಇಂಜುರಿ ಕಾರಣದಿಂದಾಗಿ ಒಟ್ಟು  ಮೂವರು ಆಟಗಾರರು IPLನಿಂದ ಹೊರಗುಳಿಯೋದು ಪಕ್ಕಾ ಆಗಿದೆ. ಅದರಲ್ಲೂ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಮೊಹಮ್ಮದ್ ಶಮಿ ಈ ಬಾರಿಯ IPLನಲ್ಲಿ ಆಡ್ತಿಲ್ಲ. ಇದ್ರಿಂದ ಹಾಲಿ ರನ್ನರ್ ಅಪ್ ಗುಜರಾತ್ ಟೈಟಾನ್ಸ್‌ಗೆ ಹೊಡೆತ ಬಿದ್ದಿದೆ. ಮೊಹಮ್ಮದ್ ಶಮಿ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಸಮರದಲ್ಲಿ ಖತರ್ನಾಕ್ ಪ್ರದರ್ಶನ ನೀಡಿದ್ರು. 

ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮಾರ್ಕ್ ವುಡ್ ಕೂಡ IPLನಿಂದ ಹೊರಗುಳಿದಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಇಂಗ್ಲೆಂಡ್ ವೇಗಿ IPLನಿಂದ ಹಿಂದೆ ಸರಿದಿದ್ದಾರೆ. ಅವರ ಬದಲಿಗೆ ವೆಸ್ಟ್ ಇಂಡೀಸ್‌ನ ಶಮರ್ ಜೋಸೆಫ್ ತಂಡಕ್ಕೆ ಆಯ್ಕೆಯಾಗಿದ್ದಾರೆ. 

BJP ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಯುವಿ ಸ್ಪರ್ಧೆ..? ವಿಶ್ವಕಪ್ ಹೀರೋ ಹೇಳಿದ್ದೇನು?

RCB ತಂಡದಲ್ಲಿರುವ ಇಂಗ್ಲೆಂಡ್ ಆಲ್ರೌಂಡರ್ ಟಾಮ್ ಕರನ್ ಸಹ ಈ ಬಾರಿಯ IPLನಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ. ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಕರನ್, ಇನ್ನೂ ಚೇತರಿಸಿಕೊಂಡಿಲ್ಲ. ಇನ್ನು ಅಪ್ಘಾನ್ ಸ್ಪಿನ್ನರ್ ರಶೀದ್ ಖಾನ್ ಮತ್ತು ಟೀಂ ಇಂಡಿಯಾದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್  ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಇವರಿಬ್ಬರು ಐಪಿಎಲ್ನಿಂದ ಹೊರಬಿದ್ರೂ ಅಚ್ಚರಿ ಇಲ್ಲ. ಒಟ್ಟಿನಲ್ಲಿ ಪ್ರಮುಖ ಆಟಗಾರರೇ IPLಗೆ ಅಲಭ್ಯರಾಗ್ತಿ ರೋದ್ರಿಂದ ಕೆಲ  ತಂಡಗಳಿಗೆ ದೊಡ್ಡ ಹೊಡೆತ ನೀಡಿದೆ.

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ