Latest Videos

ಅನಂತ್ ಅಂಬಾನಿ ಮದುವೆಯಲ್ಲಿ ಧೋನಿ ಮಿಂಚು..! ಮಹಿ ನೋಡಿ ದಂಗಾದ ಫ್ಯಾನ್ಸ್

By Suvarna NewsFirst Published Mar 3, 2024, 3:11 PM IST
Highlights

ಎಂಎಸ್ ಧೋನಿ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದ ಐದು ವರ್ಷಗಳು ಕಳೆದಿದೆ.. ಆದ್ರೂ ಅವರ ಖದರ್ ಮಾತ್ರ ಒಂಚೂರು ಕಮ್ಮಿಯಾಗಿಲ್ಲ.. ಪಾಪ್ಯುಲಾರಿಟಿಯಲ್ಲೂ ಹಿಂದೆ ಬಿದ್ದಿಲ್ಲ.. ಇನ್ನು ಸ್ಟೈಲ್ ಮತ್ತು ಫಿಟ್ನೆಸ್ನಲ್ಲೂ ಯಂಗ್ ಕ್ರಿಕೆಟರ್ಸ್ಗೆ ಸೆಡ್ಡು ಹೊಡೆಯುತ್ತಿದ್ದಾರೆ.

ಮುಂಬೈ(ಮಾ.03) ಆತನಿಗೆ 42 ವರ್ಷ ಇಂಟರ್ ನ್ಯಾಷನಲ್ ಕ್ರಿಕೆಟ್ನಿಂದ ರಿಟೈರ್ಡ್ ಆಗಿ ಐದು ವರ್ಷವಾಗಿದೆ.. ಆದರೂ ಐಪಿಎಲ್ ಆಡ್ತಿದ್ದಾನೆ.. ಆದ್ರೀಗ ಅವರ ಹೊಸ ಸ್ಟೈಲ್ ನೋಡಿ ಫ್ಯಾನ್ಸ್ ದಂಗಾಗಿದ್ದಾರೆ.. 42ನೇ ವಯಸ್ಸಿನಲ್ಲೂ ಅವರ ಫಿಟ್ನೆಸ್ ನೋಡಿ ಫಿದಾ ಆಗಿದ್ದಾರೆ. ಮದುವೆ ಗಂಡಿಗಿಂತ ಮದುವೆಯಲ್ಲಿ ಭಾಗವಹಿಸಿರುವ ಈ ಕ್ರಿಕೆಟಿಗನೇ ಮೇನ್ ಅಟ್ರ್ಯಾಕ್ಷನ್ ಆಗಿದ್ದಾನೆ. ಹಾಗಾದ್ರೆ ಯಾರಾತ ಅನ್ನೋದನ್ನ ನೀವೇ ನೋಡ್ಬಿಡಿ.

ಲುಕ್, ಸ್ಟೈಲ್ಗೆ ಫ್ಯಾನ್ಸ್ ಫಿದಾ..!

ಎಂಎಸ್ ಧೋನಿ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದ ಐದು ವರ್ಷಗಳು ಕಳೆದಿದೆ.. ಆದ್ರೂ ಅವರ ಖದರ್ ಮಾತ್ರ ಒಂಚೂರು ಕಮ್ಮಿಯಾಗಿಲ್ಲ.. ಪಾಪ್ಯುಲಾರಿಟಿಯಲ್ಲೂ ಹಿಂದೆ ಬಿದ್ದಿಲ್ಲ.. ಇನ್ನು ಸ್ಟೈಲ್ ಮತ್ತು ಫಿಟ್ನೆಸ್ನಲ್ಲೂ ಯಂಗ್ ಕ್ರಿಕೆಟರ್ಸ್ಗೆ ಸೆಡ್ಡು ಹೊಡೆಯುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನನ್ನೊಮ್ಮೆ ನೋಡಿದ್ರೆ 20 ವರ್ಷಗಳ ಹಿಂದೆ ಇಂಟರ್ ನ್ಯಾಷನಲ್ ಕ್ರಿಕೆಟ್ಗೆ ಡೆಬ್ಯು ಮಾಡಬೇಕಾದ್ರೆ ಹೇಗಿದ್ದರೂ ಹಾಗೆಯೇ ಇದ್ದಾರೆ. ಅದೇ ಲುಕ್, ಅದೇ ಸ್ಟೈಲ್, ಅದೇ ಫಿಟ್ನೆಸ್. ಅದೇ ಹೇರ್ಸ್ಟೈಲ್.

Mukesh Ambani and Nita Ambani meets MS Dhoni at the Pre-wedding celebrations.

- This is beautiful moments...!!!! 👌pic.twitter.com/dTRwF7Yzz3

— CricketMAN2 (@ImTanujSingh)

ಇಶಾನ್ ಕಿಶನ್‌ಗೆ ಅದೆಷ್ಟು ಸೊಕ್ಕು..? BCCI ನೀಡಿದ ಆಫರ್ ತಿರಸ್ಕರಿಸಿದ ಮುಂಬೈ ಇಂಡಿಯನ್ಸ್ ಕ್ರಿಕೆಟಿಗ..!

ಧೋನಿ, ತಮ್ಮ ನೋಟ ಮತ್ತು ಸ್ಟೈಲ್ನಿಂದ ಯಾವಾಗ್ಲೂ ಸುದ್ದಿಯಲ್ಲಿರ್ತಾರೆ. ಪ್ರತಿ ವರ್ಷ ಅವರು ಹೊಸ ಹೊಸ ಲುಕ್ನಲ್ಲಿ ಕಾಣಿಸಿಕೊಳ್ತಾರೆ. ಅದರಲ್ಲೂ ಐಪಿಎಲ್ ಬಂತು ಅಂದ್ರೆ ಮುಗೀತು. ಧೋನಿ ಲುಕ್ ನೋಡಲು ಫ್ಯಾನ್ಸ್ ಕಾಯ್ತಿರ್ತಾರೆ. ಯಾಕೆ ಗೊತ್ತಾ. ಪ್ರತಿ ವರ್ಷ ಒಂದಲ್ಲ ಒಂದು ಹೊಸ ಲುಕ್ನಲ್ಲಿ ಕಾಣಿಸಿಕೊಳ್ತಾರೆ. ಇದೀಗ ಮಹಿ ಮತ್ತೊಮ್ಮೆ ತಮ್ಮ ಲುಕ್ ಬದಲಾಯಿಸಿದ್ದಾರೆ, ಹಿಂದಿನ ಶೈಲಿಗೆ ಮರಳಿದ್ದಾರೆ. ಮಹಿಯ ಲುಕ್ ಹಾಗೂ ಫಿಟ್ ನೆಸ್ ಕಂಡು ಅಭಿಮಾನಿಗಳಂತು ಖುಷಿಯಾಗಿದ್ದಾರೆ.

| Cricketer Mahendra Singh Dhoni and his wife Sakshi arrive in Jamnagar, Gujarat for the three-day pre-wedding celebrations of Anant Ambani and Radhika Merchant. pic.twitter.com/3TuAa9YZl1

— ANI (@ANI)

ಅಂಬಾನಿ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಧೋನಿ ಪಾಲ್ಗೊಂಡಿದ್ದಾರೆ. ಗುಜರಾತ್ನಲ್ಲಿ ನಡೆಯುತ್ತಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮಹಿ ಫೋಟೋ ಹಾಗೂ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋದಲ್ಲಿ ಕೂಲ್ ಕ್ಯಾಪ್ಟನ್, ಹಿಂದೆಂದಿಗಿಂತಲೂ ಹೆಚ್ಚು ಸ್ಟೈಲಿಶ್ & ಫಿಟ್ ಆಗಿ ಕಾಣ್ತಿದ್ದಾರೆ.

ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಹಿಡಿಶಾಪ ಹಾಕಿದ ಫ್ಯಾನ್ಸ್

ಮದುವೆ ಸಮಾರಂಭದಲ್ಲಿ ಧೋನಿ, ಪತ್ನಿ ಸಾಕ್ಷಿ ಜೊತೆಯಲ್ಲಿ ಪಾಲ್ಗೊಂಡಿದ್ದಾರೆ. ವೈರಲ್ ಆಗಿರುವ ಫೋಟೋಗಳಲ್ಲಿ ಮಹಿ, ಸಿಂಪಲ್ ಲುಕ್‌ನಲ್ಲಿಯೂ ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋದಲ್ಲಿ, ಧೋನಿ ಮರೂನ್ ಬಣ್ಣದ ಹಾಫ್ ಟೀ ಶರ್ಟ್ ಮತ್ತು ಕಪ್ಪು ಕಾರ್ಗೋ ಪ್ಯಾಂಟ್ ಧರಿಸಿದ್ದಾರೆ. ವಿಶೇಷ ಎಂದರೆ ಧೋನಿ ಭಾರತ ಕ್ರಿಕೆಟ್ ತಂಡಕ್ಕೆ ಕಾಲಿಡುವ ಸಂದರ್ಭ ಕಾಣಿಸಿಕೊಂಡ ರೀತಿಯಲ್ಲಿ ಮತ್ತೊಮ್ಮೆ ಉದ್ದ ಕೂದಲು ಬೆಳೆಸಿದ್ದಾರೆ. ಇದರೊಂದಿಗೆ ಹಾಫ್ ಟೀ ಶರ್ಟ್ನಲ್ಲಿ ಬೈಸೆಪ್ಸ್ ಕೂಡ ತೋರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಧೋನಿಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

ಡೋಂಟ್ ವರಿ, ಧೋನಿ ಈ ವರ್ಷ ನಿವೃತ್ತಿಯಾಗಿಲ್ಲ..!

2019ರಲ್ಲೇ ಇಂಟರ್ ನ್ಯಾಷನಲ್ ಕ್ರಿಕೆಟ್ಗೆ ಗುಡ್ ಬೈ ಹೇಳಿರುವ ಧೋನಿ, ಐಪಿಎಲ್ನಲ್ಲಿ ಆಡ್ತಿದ್ದಾರೆ. ಕಳೆದ ಮೂರು ವರ್ಷದಿಂದ ಧೋನಿಗೆ ಇದು ಲಾಸ್ಟ್ ಐಪಿಎಲ್ ಅಂತ ಹೇಳಿದ್ದೇ ಬಂತು. ಅವರು ಮಾತ್ರ ರಿಟೈರ್ಡ್ ಆಗಿಲ್ಲ. ಆಡ್ತಲೇ ಇದ್ದಾರೆ. ಧೋನಿ ಹೇರ್ ಸ್ಟೈಲ್ ನೋಡಿ, ಅವರಿಗೆ ಇದು ಕೊನೆ ಐಪಿಎಲ್. ಹಳೆಯ ಸ್ಟೈಲ್ನೊಂದಿಗೆ ಕ್ರಿಕೆಟ್ಗೆ ವಿದಾಯ ಹೇಳ್ತಾರೆ ಅಂತ ಎಲ್ಲರೂ ಹೇಳ್ತಿದ್ದಾರೆ. ಆದ್ರೆ ಸತ್ಯವೇ ಬೇರೆ ಇದೆ.

ಈ ವರ್ಷದ ಐಪಿಎಲ್ ಮಾತ್ರವಲ್ಲ, ಮುಂದಿನ ಐಪಿಎಲ್ನಲ್ಲೂ ಧೋನಿ  ಆಡುವ ಭರವಸೆ ಇದೆ ಎಂದು ಧೋನಿ ಬಾಲ್ಯ ಸ್ನೇಹಿತ ಪರಮಜಿತ್ ಸಿಂಗ್ ಹೇಳಿದ್ದಾರೆ. ಇದು ಧೋನಿಯ ಕೊನೆಯ ಐಪಿಎಲ್ ಸೀಸನ್ ಎಂದು ನಾನು ಅಂದುಕೊಳ್ಳುವುದಿಲ್ಲ. ಅವರು ಇನ್ನೂ ಫಿಟ್ ಆಗಿದ್ದಾರೆ. ಹಾಗಾಗಿ ಅವರು ಇನ್ನೊಂದು ಅಥವಾ ಎರಡು ಸೀಸನ್ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದಕ್ಕೆ ಒಂದೇ ಒಂದು ಕಾರಣವೆಂದರೆ ಅವರು ಇನ್ನೂ ಫಿಟ್ ಆಗಿರುವುದು ಎಂದು ಹೇಳಿಕೊಂಡಿದ್ದಾರೆ. ಅಲ್ಲಿಗೆ ಧೋನಿ ಕ್ಯಾಪ್ಟನ್ಸಿ, ಸಿಕ್ಸರ್, ಮ್ಯಾಚ್ ಫಿನಿಶ್ ಮಾಡೋದನ್ನ ನೋಡುವ ಅವಕಾಶ ಫ್ಯಾನ್ಸ್ಗೆ ಸಿಗಲಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!