IPL 2021: ಸಿಕ್ಸರ್ ದಾಖಲೆ ಬರೆಯಲು ರೋಹಿತ್‌ಗೆ ಬೇಕು ಕೇವಲ 3 ಸಿಕ್ಸ್!

Published : Sep 18, 2021, 09:41 PM IST
IPL 2021: ಸಿಕ್ಸರ್ ದಾಖಲೆ ಬರೆಯಲು ರೋಹಿತ್‌ಗೆ ಬೇಕು ಕೇವಲ 3 ಸಿಕ್ಸ್!

ಸಾರಾಂಶ

ಐಪಿಎಲ್ 2021 ಎರಡನೆ ಭಾಗ ಆರಂಭಕ್ಕೆ ಕೌಂಟ್‌ಡೌನ್ ದುಬೈನಲ್ಲಿ ಆರಂಭವಾಗಲಿದೆ 2ನೇ ಭಾಗ, ಮುಂಬೈ, ಚೆನ್ನೈ ಹೋರಾಟ ಸಿಕ್ಸರ್ ದಾಖಲೆ ಬರೆಯಲು ಸಜ್ಜಾದ ನಾಯಕ ರೋಹಿತ್ ಶರ್ಮಾ

ದುಬೈ(ಸೆ.18): ಐಪಿಎಲ್ ಟೂರ್ನಿ ಮತ್ತೆ ಬಂದಿದೆ. ಕೊರೋನಾ ಕಾರಣ ಭಾರತದಲ್ಲಿ ಆಯೋಜನೆಗೊಂಡಿದ್ದ ಐಪಿಎಲ್ 2021 ದಿಢೀರ್ ಸ್ಥಗಿತಗೊಂಡಿತ್ತು. ಇದೀಗ ಮುಂದುವರಿದ ಭಾಗ ದುಬೈನಲ್ಲಿ ನಾಳೆಯಿಂದ(ಸೆ.19) ಆರಂಭಗೊಳ್ಳುತ್ತಿದೆ. 2ನೇ ಭಾಗದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಹೋರಾಟ ನಡೆಸಲಿದೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಸಿಕ್ಸರ್ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

IPL 2021: ಮತ್ತೆ ಜತೆಯಾದ ಎಬಿಡಿ-ವಿರಾಟ್ ಕಿಲಾಡಿ ಜೋಡಿ..!

ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 397 ಸಿಕ್ಸರ್ ಸಿಡಿಸಿದ್ದಾರೆ. 400 ಗಡಿ ದಾಟಲು 3 ಸಿಕ್ಸರ್ ಅವಶ್ಯಕತೆ ಇದೆ. ಚೆನ್ನೈ ವಿರುದ್ದದ ಮೊದಲ ಪಂದ್ಯದಲ್ಲಿ ಈ ಸಾಧನೆ ಮಾಡುವ ಎಲ್ಲಾ ಸಾಧ್ಯತೆ ಇದೆ. ಹೀಗಾದಲ್ಲಿ 400 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಲಿದ್ದಾರೆ. ರೋಹಿತ್ ನಂತರದಲ್ಲಿ ಸುರೇಶ್ ರೈನಾ, ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿ ಸ್ಥಾನ ಪಡೆದಿದ್ದಾರೆ.

ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತೀಯ ಕ್ರಿಕೆಟರ್ಸ್
ರೋಹಿತ್ ಶರ್ಮಾ: 397 ಸಿಕ್ಸರ್
ಸುರೇಶ್ ರೈನಾ: 324 ಸಿಕ್ಸರ್
ವಿರಾಟ್ ಕೊಹ್ಲಿ: 315 ಸಿಕ್ಸರ್
ಎಂ.ಎಸ್.ಧೋನಿ:303 ಸಿಕ್ಸರ್

ಐಪಿಎಲ್‌ 2021: ಪ್ರತಿ ತಂಡದ ಪ್ಲೇ-ಆಫ್‌ ಲೆಕ್ಕಾಚಾರ ಹೇಗೆ?

ಚುಟುಕು ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಕೀರನ್ ಪೊಲಾರ್ಡ್, ಆ್ಯಂಡ್ರೆ ರಸೆಲ್ ಮೊದಲ ಮೂರು ಸ್ಥಾನ ಅಲಂಕರಿಸಿದ್ದಾರೆ. ಇನ್ನು ಬ್ರೆಂಡೆನ್ ಮೆಕಲಮ್, ಶೇನ್ ವ್ಯಾಟ್ಸನ್, ಎಬಿ ಡಿವಿಲಿಯರ್ಸ್ ಸ್ಥಾನ ಪಡೆದಿದ್ದಾರೆ.

ಗರಿಷ್ಠ ಸಿಕ್ಸರ್ ಸಿಡಿಸಿದ ಸಾಧಕರು:
ಕ್ರಿಸ್ ಗೇಲ್: 1,042 ಸಿಕ್ಸರ್
ಕೀರನ್ ಪೋಲಾರ್ಡ್: 755 ಸಿಕ್ಸರ್
ಆ್ಯಂಡ್ರೆ ರಸೆಲ್: 509 ಸಿಕ್ಸರ್
ಬ್ರೆಂಡನ್ ಮೆಕಲಮ್: 485 ಸಿಕ್ಸರ್
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ