
ನವದೆಹಲಿ(ಏ.19): 2006ರ ವರೆಗೂ ಮಹಿಳಾ ಕ್ರಿಕೆಟಿಗರನ್ನು (Indian Women's Cricket Team) ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಪುರುಷರ ತಂಡದ ಸಮವಸ್ತ್ರವನ್ನೇ ಕತ್ತರಿಸಿ ಮರು ಹೊಲಿಗೆ ಹಾಕಲಾಗುತ್ತಿತ್ತು ಎಂಬುದನ್ನು ಬಿಸಿಸಿಐ ಆಡಳಿತಗಾರರ ಸಮಿತಿ(ಸಿಒಎ) ಮಾಜಿ ಮುಖ್ಯಸ್ಥ ವಿನೋದ್ ರೈ (Vinod Rai) ತಮ್ಮ ಹೊಸ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ. Not just a Nightwatchman ಎನ್ನುವ ಪುಸ್ತಕದಲ್ಲಿ ವಿನೋದ್ ರೈ ಹಲವಾರು ಹೊಸ ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
‘ಮಹಿಳಾ ಕ್ರಿಕೆಟ್‌ಗೆ ಅರ್ಹವಾದ ಪ್ರೋತ್ಸಾಹ ಯಾರೂ ನೀಡುತ್ತಿರಲಿಲ್ಲ. ಅವರಿಗೆ ಬೇಕಿದ್ದ ಸೂಕ್ತ ತರಬೇತಿ, ಪ್ರಯಾಣ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ, ಸಂಭಾವನೆ ಕೂಡಾ ಸರಿಯಾಗಿ ಸಿಗುತ್ತಿರಲಿಲ್ಲ. ಪರಿಸ್ಥಿತಿ ಹೀಗಿದ್ದರೆ ತಂಡ ದೊಡ್ಡ ದೊಡ್ಡ ತಂಡಗಳನ್ನು ಸೋಲಿಸಿ ಟ್ರೋಫಿ ಗೆಲ್ಲಲು ಹೇಗೆ ಸಾಧ್ಯ?. 2017ರ ವಿಶ್ವಕಪ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಹರ್ಮನ್‌ಪ್ರೀತ್ ಕೌರ್ (Harmanpreet Kaur) 175 ರನ್ ಸಿಡಿಸಿದ ಬಳಿಕ ಮಹಿಳಾ ಕ್ರಿಕೆಟ್ ಬಗ್ಗೆ ಹೆಚ್ಚಿನವರು ತಿಳಿದುಕೊಂಡರು. ಆದರೆ ಆ ಪಂದ್ಯದ ದಿನ ಬೆಳಗ್ಗೆ ಅವರಿಗೆ ಊಟ ಸಿಗದೆ ಕೊನೆಗೆ ಸಮೋಸಾ ಮಾತ್ರ ತಿಂದಿದ್ದರು’ ಎಂದು ರೈ ಉಲ್ಲೇಖಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಟಿ20: ರಾಜ್ಯಕ್ಕೆ ಹೀನಾಯ ಸೋಲು
ರಾಜ್‌ಕೋಟ್: ರಾಷ್ಟ್ರೀಯ ಮಹಿಳಾ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಸೋಲಿನ ಆರಂಭ ಪಡೆದಿದೆ. ಸೋಮವಾರ ಚಂಡೀಗಢ ವಿರುದ್ಧದ ಮೊದಲ ಪಂದ್ಯದಲ್ಲಿ ರಾಜ್ಯ ತಂಡ 6 ವಿಕೆಟ್ ಸೋಲನುಭವಿಸಿತು. ಮೊದಲು ಬ್ಯಾಟ್ ಮಾಡಿದ ರಾಜ್ಯ ತಂಡ 17.1 ಓವರ್‌ಗಳಲ್ಲಿ ಕೇವಲ 65 ರನ್‌ಗೆ ಆಲೌಟಾಯಿತು. ಆರಂಭದಿಂದಲೇ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ತಂಡ ಯಾವ ಕ್ಷಣದಲ್ಲೂ ಚೇತರಿಸಲಿಲ್ಲ.
IPL 2022: ಲಖನೌ ಸೂಪರ್ ಜೈಂಟ್ಸ್ ಸವಾಲು ಗೆಲ್ಲುತ್ತಾ ಆರ್‌ಸಿಬಿ..?
ನಾಯಕಿ ವೇದಾ ಕೃಷ್ಣಮೂರ್ತಿ 11 ರನ್ ಗಳಿಸಿದರೆ, ನಿಕಿ ಪ್ರಸಾದ್ ಅಜೇಯ 26 ರನ್ ಬಾರಿಸಿದರು. ಆಮಾನ್‌ಜೋತ್ ಕೌರ್, ರಜನಿ ದೇವಿ ತಲಾ 3 ವಿಕೆಟ್ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಚಂಡೀಗಢ 17 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಗಳಿಸಿತು. ಕೌರ್ 19 ರನ್ ಗಳಿಸಿದರು. ಮಂಗಳವಾರ ರಾಜ್ಯ ತಂಡ ರೈಲ್ವೇಸ್ ವಿರುದ್ಧ ಆಡಲಿದೆ.
ಸಸೆಕ್ಸ್ ಪಾದಾರ್ಪಣೆಯಲ್ಲಿ ಪೂಜಾರ 200
ಡೆರ್ಬಿ(ಇಂಗ್ಲೆಂಡ್): ಭಾರತದ ಹಿರಿಯ ಬ್ಯಾಟರ್ ಚೇತೇಶ್ವರ್ ಪೂಜಾರ ಇಂಗ್ಲೆಂಡ್ ಕೌಂಟಿ ತಂಡ ಸಸೆಕ್ಸ್ ಪರ ಪಾದಾರ್ಪಣೆ ಪಂದ್ಯದಲ್ಲೇ ದ್ವಿಶತಕ ಸಿಡಿಸಿದ್ದಾರೆ. ಡರ್ಬಿಶೈರ್ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 6 ರನ್ ಗಳಿಸಿದ್ದ ಅವರು, 2ನೇ ಇನ್ನಿಂಗ್‌್ಸನಲ್ಲಿ ಔಟಾಗದೆ 201 ರನ್ ಸಿಡಿಸಿ ಪಂದ್ಯ ಡ್ರಾಗೊಳಿಸಲು ನೆರವಾದರು. ಪೂಜಾರ 2020ರಲ್ಲಿ ಸೌರಾಷ್ಟ್ರ ಪರ ರಣಜಿ ಟ್ರೋಫಿ ಪ್ರಥಮ ದರ್ಜೆ ಪಂದ್ಯದಲ್ಲಿ ಕೊನೆಯ ಬಾರಿ ದ್ವಿಶತಕ ಬಾರಿಸಿದ್ದರು. ದ.ಆಫ್ರಿಕಾ ಸರಣಿ ಬಳಿಕ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಪೂಜಾರ ಮತ್ತೊಮ್ಮೆ ತಂಡಕ್ಕೆ ಆಯ್ಕೆಯಾಗಲು ಎದುರು ನೋಡುತ್ತಿದ್ದಾರೆ.
ನಿಧಾನ ಬೌಲಿಂಗ್: ಲಖನೌ ನಾಯಕ ರಾಹುಲ್‌ಗೆ ದಂಡ
ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಶನಿವಾರದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ ಕಾರಣಕ್ಕೆ ಲಖನೌ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್.ರಾಹುಲ್ 12 ಲಕ್ಷ ರು. ದಂಡ ವಿಧಿಸಲಾಗಿದೆ. ಮುಂಬೈ ವಿರುದ್ಧ ಲಖನೌ ನಿಗದಿತ ಸಮಯದಲ್ಲಿ ಬೌಲಿಂಗ್ ಮುಗಿಸಲು ವಿಫಲವಾಗಿದೆ. ಇದು ಮೊದಲ ಉಲ್ಲಂಘನೆಯಾಗಿರುವ ಕಾರಣ ನಾಯಕ ರಾಹುಲ್‌ಗೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಪಂದ್ಯದಲ್ಲಿ ರಾಹುಲ್ ಭರ್ಜರಿ ಶತಕದ ನೆರವಿನಿಂದ ಲಖನೌ 18 ರನ್ ಗೆಲುವು ಸಾಧಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.