ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ಕರ್ನಾಟಕ ತಂಡ ಪ್ರಕಟ; ಮಯಾಂಕ್‌ಗೆ ನಾಯಕ ಪಟ್ಟ..!

By Naveen KodaseFirst Published Oct 7, 2022, 12:35 PM IST
Highlights

ಮುಷ್ತಾಕ್ ಅಲಿ ಟಿ20 ಟೂರ್ನಿಗೆ ರಾಜ್ಯ ತಂಡ ಪ್ರಕಟ
ನಾಯಕನಾಗಿ ಕರ್ನಾಟಕ ತಂಡವನ್ನು ಮುನ್ನಡೆಸಲಿರುವ ಮನೀಶ್ ಪಾಂಡೆ
ಕಳೆದ ಆವೃತ್ತಿಯ ಟೂರ್ನಿಯಲ್ಲಿ ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಕರ್ನಾಟಕ ಕ್ರಿಕೆಟ್ ತಂಡ

ಬೆಂಗಳೂರು(ಅ.07): ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಗೆ ಕರ್ನಾಟಕ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ಮನೀಶ್‌ ಪಾಂಡೆ ಬದಲಿಗೆ ಮಯಾಂಕ್‌ ಅಗರ್‌ವಾಲ್‌ರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಮನೀಶ್ ಪಾಂಡೆ ನಾಯಕತ್ವದಲ್ಲಿ ಕರ್ನಾಟಕ ತಂಡವು ಕಳೆದ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ರನ್ನರ್‌-ಅಪ್‌ ಆಗಿತ್ತು. 2019ರಲ್ಲಿ ಚಾಂಪಿಯನ್‌ ಆಗಿತ್ತು. 

ಕರ್ನಾಟಕ ಪರ ಪ್ರಕಟವಾದ 15 ಸದಸ್ಯರ ತಂಡದಲ್ಲಿ ಮಹಾರಾಜ ಟ್ರೋಫಿಯಲ್ಲಿ ಅಬ್ಬರಿಸಿದ್ದ ಯುವ ಬ್ಯಾಟರ್‌ ಎಲ್‌.ಆರ್‌. ಚೇತನ್‌ಗೆ ಸ್ಥಾನ ಸಿಕ್ಕಿದೆ. 22 ವರ್ಷದ ಚೇತನ್‌, ಇತ್ತೀಚೆಗಷ್ಟೇ ಮುಕ್ತಾಯವಾದ ಮಹಾರಾಜ ಟಿ20 ಟ್ರೋಫಿ ಟೂರ್ನಿಯಲ್ಲಿ 259 ರನ್ ಸಿಡಿಸುವ ಮೂಲಕ ಎರಡನೇ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಮೇಲ್ನೋಟಕ್ಕೆ ಕರ್ನಾಟಕ ತಂಡದ ಬ್ಯಾಟಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿ ಕಂಡು ಬಂದಿದ್ದು, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಅಭಿನವ್ ಮನೋಹರ್, ಶರತ್ ಬಿ ಆರ್ ಅವರಂತಹ ಆಟಗಾರರನ್ನು ಹೊಂದಿದೆ.

ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಅನುಭವಿ ವೇಗಿ ಪ್ರಸಿದ್ದ್ ಕೃಷ್ಣ, ರಾಜ್ಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಹೀಗಾಗಿ ವಿ. ಕೌಶಿಕ್‌ ವೇಗದ ದಾಳಿಯನ್ನು ಮುನ್ನಡೆಸಲಿದ್ದು, ಇವರಿಗೆ ವಿದ್ವತ್ ಕಾವೇರಪ್ಪ, ವೈಶಾಕ್ ವಿಜಯ್‌ ಕುಮಾರ್, ವೆಂಕಟೇಶ್‌ ಸಾಥ್ ನೀಡಲಿದ್ದಾರೆ. ಇನ್ನು ಸ್ಪಿನ್ನರ್‌ಗಳ ರೂಪದಲ್ಲಿ ಕೃಷ್ಣಪ್ಪ ಗೌತಮ್‌, ಜಗದೀಶ ಸುಚಿತ್ ಹಾಗೂ ಶ್ರೇಯಸ್ ಗೋಪಾಲ್‌ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದು, ಕೆ ಸಿ ಕರಿಯಪ್ಪ ರಾಜ್ಯ ತಂಡ ಕೂಡಿಕೊಳ್ಳಲು ವಿಫಲವಾಗಿದ್ದಾರೆ. 

IND vs SA ಸಂಜು ಸ್ಯಾಮ್ಸನ್ ದಿಟ್ಟ ಹೋರಾಟ, ಕೊನೆ ಕ್ಷಣದಲ್ಲಿ ಕೈತಪ್ಪಿದ ಗೆಲುವು!

ಕಳೆದ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ತಮಿಳುನಾಡು ಎದುರು ಮುಗ್ಗರಿಸುವ ಮೂಲಕ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. 'ಸಿ' ಗುಂಪಿನಲ್ಲಿ ಕರ್ನಾಟಕ ತಂಡದ ಜತೆಗೆ ಕೇರಳ, ಮೇಘಾಲಯ, ಜಮ್ಮು ಮತ್ತು ಕಾಶ್ಮೀರ, ಅರುಣಾಚಲ ಪ್ರದೇಶ, ಸರ್ವೀಸಸ್‌ ಮತ್ತು ಹರ್ಯಾಣ ತಂಡಗಳು ಸ್ಥಾನ ಪಡೆದಿವೆ.

ಕರ್ನಾಟಕ ಕ್ರಿಕೆಟ್ ತಂಡವು ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಅಕ್ಟೋಬರ್ 11ರಂದು ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಆಡಲಿದೆ. ಅಕ್ಟೋಬರ್ 12ಕ್ಕೆ ಕೇರಳ, ಅಕ್ಟೋಬರ್ 14ಕ್ಕೆ ಮೇಘಾಲಯ, ಅಕ್ಟೋಬರ್ 16ಕ್ಕೆ ಜಮ್ಮು-ಕಾಶ್ಮೀರ, ಅಕ್ಟೋಬರ್ 18ಕ್ಕೆ ಅರುಣಾಚಲ, ಅಕ್ಟೋಬರ್ 20ಕ್ಕೆ ಸರ್ವೀಸಸ್, ಅಕ್ಟೋಬರ್ 22ಕ್ಕೆ ಹರ್ಯಾಣ ವಿರುದ್ಧ ಆಡಲಿದೆ.

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ಕರ್ನಾಟಕ ತಂಡ ಹೀಗಿದೆ ನೋಡಿ: 

ಮಯಾಂಕ್‌ ಅಗರ್‌ವಾಲ್(ನಾಯಕ), ದೇವದತ್ ಪಡಿಕ್ಕಲ್‌, ಮನೀಶ್‌ ಪಾಂಡೆ, ಎಲ್‌.ಆರ್‌. ಚೇತನ್‌, ಅಭಿನವ್‌ ಮನೋಹರ್, ಮನೋಜ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಜಗದೀಶ ಸುಚಿತ್‌, ಲುವ್ನಿತ್‌ ಸಿಸೋಡಿಯಾ, ಶರತ್‌ ಬಿ.ಆರ್‌., ಕೌಶಿಕ್‌, ವಿ. ವೈಶಾಖ್‌, ವಿದ್ವತ್‌ ಕಾವೇರಪ್ಪ, ವೆಂಕಟೇಶ್‌.

click me!