
ಮೆಲ್ಬರ್ನ್[ಡಿ.09]: ಆಸ್ಪ್ರೇಲಿಯಾದ ಮಾಜಿ ಕ್ರಿಕೆಟರ್, ಅಮೆರಿಕ ಮಹಿಳಾ ತಂಡದ ಮಾಜಿ ಕೋಚ್ ಜೂಲಿಯಾ ಪ್ರೈಸ್ ಬಿಗ್‌ಬ್ಯಾಶ್‌ನ ಬ್ರಿಸ್ಬೇನ್ ಹೀಟ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಇಂದಿನಿಂದ ಕರ್ನಾಟಕಕ್ಕೆ ತಮಿಳುನಾಡು ಸವಾಲು
ಪುರುಷರ ತಂಡಕ್ಕೆ ಮಹಿಳಾ ಕೋಚ್ ಒಬ್ಬರು ನೇಮಕಗೊಂಡಿರುವುದು ಕ್ರಿಕೆಟ್‌ನಲ್ಲಿ ಅಪರೂಪದ ಬೆಳವಣಿಗೆ ಎನಿಸಿದೆ. ಜತೆಗೆ ಬಿಗ್‌ಬ್ಯಾಶ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕೋಚ್‌ನ ನೇಮಕವಾಗಿದೆ. ಜೂಲಿಯಾ, ಈ ಮೊದಲು 3 ವರ್ಷಗಳ ಕಾಲ ಮಹಿಳಾ ಬಿಗ್‌ಬ್ಯಾಶ್‌ನಲ್ಲಿ ಹೊಬಾರ್ಟ್ ಹರಿಕೇನ್ಸ್ ತಂಡದ ಕೋಚ್ ಆಗಿದ್ದರು. ಬ್ರಿಸ್ಬೇನ್ ತಂಡದಲ್ಲಿ ಆಸ್ಪ್ರೇಲಿಯಾದ ಮಾಜಿ ಕೋಚ್ ಡರೆನ್ ಲೆಹ್ಮನ್ ಜತೆ ಜೂಲಿಯಾ ಕಾರ್ಯನಿರ್ವಹಿಸಲಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಮಿಕಿ ಆರ್ಥರ್ ಕೋಚ್!
‘ನನಗೆ ಬಹಳ ಸಂತೋಷವಾಗುತ್ತಿದೆ. ಈ ಹುದ್ದೆ ಸಿಗಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕಾಯುತ್ತಿದ್ದೇನೆ. ವಿಶ್ವದಾದ್ಯಂತ ಮಹಿಳಾ ಕೋಚ್‌ಗಳಿಗೆ ನನ್ನಂತೆಯೇ ಅವಕಾಶಗಳು ಸಿಗಬೇಕೆಂದು ಆಶಿಸುತ್ತೇನೆ’ ಎಂದು ಜೂಲಿಯಾ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.