
ಮುಂಬೈ(ನ.19): ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲಿನ ಶಾಕ್ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿ ಭಾರಿ ಬಲಿಷ್ಠ ತಂಡವಾಗಿ ಟೂರ್ನಿಗೆ ಎಂಟ್ರಿಕೊಡುವ ಟೀಂ ಇಂಡಿಯಾ ಹೇಳ ಹೆಸರಿಲ್ಲದಂತೆ ಟೂರ್ನಿಯಿಂದ ಹೊರಬೀಳುತ್ತಿದೆ. ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಹೀನಾಯ ಸೋಲು ಬಿಸಿಸಿಐಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೇಜರ್ ಸರ್ಜರಿ ಮಾಡುತ್ತಿದೆ. ಈಗಾಗಲೇ ಟೀಂ ಇಂಡಿಯಾ ಆಯ್ಕೆ ಸಮಿತಿಯನ್ನು ವಜಾ ಮಾಡಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಹಾಗೂ ಇತರ ಸದಸ್ಯರ ತಂಡವನ್ನು ವಜಾ ಮಾಡಿದ ಬಿಸಿಸಿಐ ಹೊಸದಾಗಿ ಅರ್ಜಿ ಆಹ್ವಾನಿಸಿದೆ. ಇದೀಗ ಟೀಂ ಇಂಡಿಯಾಗೆ ಸರ್ಜರಿ ಮಾಡಲು ಮುಂದಾಗಿದೆ. ಇತರ ತಂಡದಲ್ಲಿರುವಂತೆ ಒಂದೊಂದು ಮಾದರಿಗೆ ಒಬ್ಬೊಬ್ಬ ನಾಯಕನ ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಇದರ ಅಂಗವಾಗಿ ರೋಹಿತ್ ಶರ್ಮಾರನ್ನು ಟೆಸ್ಟ್ ಹಾಗೂ ಏಕದಿನ ನಾಯಕತ್ವಕ್ಕೆ ಸೀಮಿತಗೊಳಿಸಲು ಬಿಸಿಸಿಐ ಮುಂದಾಗಿದ್ದು, ಹಾರ್ದಿಕ್ ಪಾಂಡ್ಯಗೆ ಟಿ20 ನಾಯಕತ್ವ ನೀಡಲು ಬಿಸಿಸಿಐ ಮುಂದಾಗಿದೆ.
ನೂತನ ಆಯ್ಕೆ ಸಮಿತಿಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಶೀಘ್ರದಲ್ಲೇ ಬಿಸಿಸಿಐ ಹೊಸ ಆಯ್ಕೆ ಸಮಿತಿ ರಚಿಸಲಿದೆ. ನೂತನ ಆಯ್ಕೆ ಸಮಿತಿಗೆ ಮೊದಲ ಟಾಸ್ಕ್ ನಾಯಕತ್ವ ಹಂಚಿಕೆ. ಪಾಂಡ್ಯಗೆ ಟಿ20 ನಾಯಕತ್ವ ನೀಡಲು ಬಿಸಿಸಿಐ ಒಲವು ತೋರಿದೆ. ಯುವ ಆಟಗಾರ, ಅಲ್ರೌಂಡರ್ ಹಾಗೂ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚೊಚ್ಚಲ ಬಾರಿಗೆ ಚಾಂಪಿಯನ್ ಮಾಡಿದ ನಾಯಕ. ಟಿ20ಯಲ್ಲಿ ಪಾಂಡ್ಯಗೆ ನಾಯಕತ್ವ ನೀಡುವುದರಿಂದ, ಯುವಕರನ್ನು ತಂಡ ಕಟ್ಟಲು ಸಾಧ್ಯವಿದೆ. ಇದು ಪ್ರಶಸ್ತಿ ಗೆಲುವಿಗೆ ನೆರವಾಗಲಿದೆ ಅನ್ನೋ ಕ್ರಿಕೆಟ್ ಪಂಡಿತರ ಲೆಕ್ಕಾಚಾರ.
ಟಿ20 ವಿಶ್ವಕಪ್ ಸೋಲಿಗೆ ತಲೆದಂಡ, ಮುಖ್ಯಸ್ಥ ಸೇರಿ ಟೀಂ ಇಂಡಿಯಾ ಆಯ್ಕೆ ಸಮತಿ ವಜಾ!
ರೋಹಿತ್ ಶರ್ಮಾರನ್ನು ಟೆಸ್ಟ್ ಹಾಗೂ ಏಕದಿನ ನಾಯಕತ್ವಕ್ಕೆ ಸೀಮಿತಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ನಾಯಕತ್ವ ವಿಚಾರದಲ್ಲಿ ಇಷ್ಟಕ್ಕೆ ಬಿಸಿಸಿಐ ಸರ್ಜರಿ ನಿಲ್ಲುವುದಿಲ್ಲ. 2023ರ ಏಕದಿನ ವಿಶ್ವಕಪ್ ವೇಳೆಗೆ ಟೆಸ್ಟ್, ಏಕದಿನ ಹಾಗೂ ಟಿ20 ನಾಯಕತ್ವಕ್ಕೆ ಮೂರು ನಾಯಕರನ್ನು ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ಸದ್ಯ ರೋಹಿತ್ ಶರ್ಮಾ ಟೆಸ್ಟ್ ಹಾಗೂ ಏಕದಿನದ ನಾಯಕರಾಗಿ ಮುಂದುವರಿಯಲಿದ್ದಾರೆ. ರೋಹಿತ್ ಬಳಿಕ ಟೆಸ್ಟ್, ಏಕದಿನಕ್ಕೂ ಬೇರೆ ಬೇರೆ ನಾಯಕರ ಆಯ್ಕೆಯಾಗಲಿದೆ. ನಾಯಕರ ಹಂಚಿಕೆ ಬಳಿಕ ಟೆಸ್ಟ್, ಏಕದಿನ ಹಾಗೂ ಟಿ20 ತಂಡಕ್ಕೆ ಮೂರು ತಂಡಗಳನ್ನು ಆಯ್ಕೆ ಮಾಡಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ.
Ind vs NZ ಮಳೆಗೆ ಆಹುತಿಯಾದ ಇಂಡೋ-ಕಿವೀಸ್ ಮೊದಲ ಟಿ20 ಪಂದ್ಯ..!
ಟಿ20 ವಿಶ್ವಕಪ್ ವೈಫಲ್ಯ: ಆಯ್ಕೆ ಸಮಿತಿ ತಲೆದಂಡ!
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ವೈಫಲ್ಯ ಅನುಭವಿಸಿದ ಹಿನ್ನೆಲೆಯಲ್ಲಿ ಬಿಸಿಸಿಐ ಶುಕ್ರವಾರ ನಾಲ್ವರು ಸದಸ್ಯರ ಆಯ್ಕೆ ಸಮಿತಿಯನ್ನು ವಜಾಗೊಳಿಸಿದೆ. ಚೇತನ್ ಶರ್ಮಾ ನೇತೃತ್ವದ ಸಮಿತಿ ಆಯ್ಕೆ ಮಾಡಿದ್ದ ತಂಡದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ 2021ರ ಟಿ20 ವಿಶ್ವಕಪ್‌ನಲ್ಲಿ ನಾಕೌಟ್ ಹಂತಕ್ಕೇರಲು ವಿಫಲವಾಗಿತ್ತು. ಚೇತನ್ ಶರ್ಮಾ, ಹರ್ವಿಂದರ್ ಸಿಂಗ್, ಸುನಿಲ್ ಜೋಶಿ ಹಾಗೂ ದೇಬಾಶಿಶ್ ಮೊಹಂತಿ ಅವರ ಸೇವಾವಧಿ ಮುಕ್ತಾಯಗೊಳ್ಳುವ ಮೊದಲೇ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಸಾಮಾನ್ಯವಾಗಿ ಆಯ್ಕೆ ಸಮಿತಿ 4 ವರ್ಷಗಳ ಅವಧಿ ಹೊಂದಿರಲಿದೆ. ಇದೇ ವೇಳೆ ಆಯ್ಕೆ ಸಮಿತಿ ಸದಸ್ಯರ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನ.28 ಕೊನೆ ದಿನವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.