ಶಿವಮೊಗ್ಗ ತಂಡದಲ್ಲೇ ಇದ್ದಾನೆ ಆರ್‌ಸಿಬಿಗೆ ಹೇಳಿ ಮಾಡಿಸಿದಂತ ಆಟಗಾರ..! ಕ್ರೀಸ್‌ಗಿಳಿದ್ರೆ ಸಿಕ್ಸರ್ ಸುರಿಮಳೆ

By Naveen Kodase  |  First Published Aug 29, 2024, 5:00 PM IST

ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ಪರ ಅಭಿನವ್ ಮನೋಹರ್ ಅಕ್ಷರಶಃ ಅಬ್ಬರಿಸುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು: ಕಳೆದ ಬಾರಿಯ ಐಪಿಎಲ್‌ನಲ್ಲಿ ಈ ಯಂಗ್‌ಸ್ಟರ್‌ಗೆ ಹೇಳಿಕೊಳ್ಳೋ ಚಾನ್ಸ್ ಸಿಗಲಿಲ್ಲ. ಇದ್ರಿಂದ ಆತನಿಗೆ ತನ್ನ ಸಾಮರ್ಥ್ಯ ಪ್ರೂವ್ ಮಾಡಿಕೊಳ್ಳೋಕೆ ಆಗಲಿಲ್ಲ. ಆದ್ರೀಗ, ಕೆಎಸ್‌ಸಿಎ ಮಹಾರಾಜ ಟೂರ್ನಿಯಲ್ಲಿ ತನ್ನ ತಾಕತ್ತು ಪ್ರೂವ್ ಮಾಡಿದ್ದಾನೆ. ಐಪಿಎಲ್‌ ಮೆಗಾ ಆಕ್ಷನ್‌ಗೂ ಮುನ್ನ ಫ್ರಾಂಚೈಸಿಗಳ ಗಮನಸೆಳೆದಿದ್ದಾನೆ. ಯಾರು ಆ ಆಟಗಾರ ಅಂತ ಹೇಳ್ತೀವಿ, ಈ ಸ್ಟೋರಿ ನೋಡಿ..!

ಭಾರತೀಯ ಕ್ರಿಕೆಟ್‌ನಲ್ಲಿ ಹುಟ್ಟಿಕೊಂಡ ಹೊಸ ಸಿಕ್ಸರ್ ಕಿಂಗ್..!

Latest Videos

undefined

ಕೆಎಸ್‌ಸಿಎ ಮಹಾರಾಜ ಟೂರ್ನಿ ಕೊನೆಯ ಘಟ್ಟಕ್ಕೆ ಬಂದು ತಲುಪಿದೆ. ರಣರೋಚಕ ಪಂದ್ಯಗಳು ಅಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡ್ತಿವೆ. ಅದರಲ್ಲೂ ಈ ಒಬ್ಬ ಆಟಗಾರ ಜಬರ್ದಸ್ತ್ ಪ್ರದರ್ಶನ ನೀಡ್ತಿದ್ದಾನೆ. ಅಸಾಮಾನ್ಯ ಆಟದ ಮೂಲಕ ಧೂಳೆಬ್ಬಿಸ್ತಿದ್ದಾನೆ. ಚಿನ್ನಸ್ವಾಮಿ ಅಂಗಳದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾನೆ. 

ಆ ಆಟಗಾರ ಬೇರೆ ಯಾರೂ ಅಲ್ಲ, ಶಿವಮೊಗ್ಗ ಲಯನ್ಸ್ ತಂಡದ ಬ್ಯಾಟರ್‌ ಅಭಿನವ್ ಮನೋಹರ್. ಯೆಸ್, ಮಹಾರಾಜ ಟೂರ್ನಿಯಲ್ಲಿ ಅಭಿನವ್ ಅಕ್ಷರಶ: ಆರ್ಭಟಿಸ್ತಿದ್ದಾನೆ. ಮೊನ್ನೆ ನಡೆದ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧದ ಪಂದ್ಯವೇ ಅದಕ್ಕೆ ಸಾಕ್ಷಿ..!

ರೋಹಿತ್ ಶರ್ಮಾ ಮುಂಬೈನಲ್ಲೇ ಉಳಿತಾರಾ..? ಬೇರೆ ಐಪಿಎಲ್ ತಂಡ ಸೇರಿಕೊಳ್ತಾರಾ..?

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗಾ ಮಿಸ್ಟಿಕ್ಸ್, 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 206 ರನ್ ಕಲೆಹಾಕಿತ್ತು. ಈ ಗುರಿಯನ್ನ ಬೆನ್ನಟ್ಟಿದ್ದ ಶಿವಮೊಗ್ಗ ಲಯನ್ಸ್,  ಇನ್ನು 5 ಎಸೆತಗಳು ಬಾಕಿ  ಇರುವಂತೆಯೆ ಗುರಿ ತಲುಪಿತ್ತು. 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದಿದ್ದ ಅಭಿನವ್,  ಗುಲ್ಬರ್ಗಾ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿದ್ರು. ಕೇವಲ 34 ಎಸೆತಗಳಲ್ಲಿ 2 ಫೋರ್ ಮತ್ತು 9 ಸಿಕ್ಸ್ ಸಹಿತ 76 ರನ್ ಸಿಡಿಸಿದ್ರು. ಸಿಂಗಲ್ ಹ್ಯಾಂಡೆಂಡ್ಲಿ ತಂಡಕ್ಕೆ ಗೆಲುವು ತಂದುಕೊಟ್ರು. 

ಮಹಾರಾಜ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ದಾಖಲೆ..! 

ಮಹಾರಾಜ ಟ್ರೋಫಿಯಲ್ಲಿ ಅಭಿನವ್ ಸಿಕ್ಸರ್‌ಗಳಲ್ಲೇ ಡೀಲ್ ಮಾಡ್ತಿದ್ದಾರೆ. ಟೂರ್ನಿಯಲ್ಲಿ ಈವರೆಗೂ 9 ಪಂದ್ಯಗಳಿಂದ 191.45ರ ಅದ್ಭುತ ಸ್ಟ್ರೈಕ್ರೇಟ್ನಲ್ಲಿ 448 ರನ್ ಸಿಡಿಸಿದ್ದಾರೆ. ಇದರಲ್ಲಿ ಅರ್ಧದಷ್ಟು ರನ್ ಸಿಕ್ಸರ್‌ನಿಂದಲೇ ಬಂದಿವೆ. ಅಂದ್ರೆ, 45 ಸಿಕ್ಸರ್ಗಳಿಂದ 270 ರನ್ ಕಲೆಹಾಕಿದ್ದಾರೆ. ಇದ್ರೊಂದಿಗೆ ಮಹಾರಾಜ ಟ್ರೋಫಿಯ ಒಂದೇ ಸೀಸನ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಬರೆದಿದ್ದಾರೆ. 

ಐಪಿಎಲ್‌ ಮೆಗಾ ಆಕ್ಷನ್ಗೂ ಮುನ್ನ ತಾಕತ್ತು ಪ್ರೂವ್ ಮಾಡಿದ ಕನ್ನಡಿಗ..!

ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಆಡೋ ಅಭಿನವ್‌ಗೆ ಹೇಳಿಕೊಳ್ಳುವ  ಅವಕಾಶಗಳೇ ಸಿಗ್ತಿಲ್ಲ. ಈ ವರ್ಷ ಕೇವಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡೋ ಅವಕಾಶ ಸಿಕ್ಕಿತ್ತು. ಆದ್ರೆ, ಮಹಾರಾಜ ಟೂರ್ನಿಯಲ್ಲಿ ಅಭಿನವ್ ತಮ್ಮ ತಾಕತ್ತು ಪ್ರೂವ್ ಮಾಡಿದ್ದಾರೆ. ಮೆಗಾ ಆಕ್ಷನ್‌ಗೂ ಮುನ್ನ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದ್ರಿಂದ ಒಂದು ವೇಳೆ ಗುಜರಾತ್ ತಂಡದಿಂದ ಅಭಿನವ್ ರಿಲೀಸ್ ಆದ್ರೆ, ಮೆಗಾ ಆಕ್ಷ್ನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗೋದು ಪಕ್ಕಾ..!

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿಯಿಂದ ಈ ಮೂವರಿಗೆ ಗೇಟ್‌ಪಾಸ್..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

RCB ತಂಡಕ್ಕೆ ಅಭಿನವ್ ಹೇಳಿ ಮಾಡಿಸಿದ ಬ್ಯಾಟರ್‌! 

ಯೆಸ್, ಆರ್‌ಸಿಬಿ ತಂಡಕ್ಕೆ ಅಭಿನವ್ ಹೇಳಿ ಮಾಡಿಸಿದ ಬ್ಯಾಟರ್‌. ಅಭಿನವ್ ಮನೋಹರ್ ಬಿಗ್ ಹಿಟ್ಟರ್ ಆಗಿದ್ದು, ಒಂದೇ ಓವರ್ನಲ್ಲಿ ಪಂದ್ಯದ ಗತಿಯನ್ನೇ ಚೇಂಜ್ ಮಾಡಬಲ್ಲರು. ಫಿನಿಶರ್ ಆಗಿ ಕೂಡ ಮಿಂಚಬಲ್ಲರು. ಆದ್ರೆ, ಆಕ್ಷನ್ನಲ್ಲಿ ಬೆಂಗಳೂರು ಫ್ರಾಂಚೈಸಿ, ಅಭಿನವ್‌ರನ್ನು ಮೇಲೆ ಬಿಡ್ ಮಾಡುತ್ತಾ..? ತಂಡಕ್ಕೆ ಸೇರಿಸಿಕೊಳ್ಳುತ್ತಾ..? ಅನ್ನೋದನ್ನ ಕಾದು ನೋಡಬೇಕಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!