ಹುಬ್ಬಳ್ಳಿ ಟೈಗರ್ಸ್‌ ಮಡಿಲಿಗೆ ಮಹಾರಾಜ ಟ್ರೋಫಿ

By Kannadaprabha News  |  First Published Aug 30, 2023, 8:12 AM IST

ಮೈಸೂರಿಗೆ ಕೊನೆಯ ಓವರಲ್ಲಿ ಗೆಲ್ಲಲು 12 ರನ್‌ ಬೇಕಿತ್ತು. ಮನ್ವಂತ್‌ ಎಸೆದ ಓವರ್‌ನ ಮೊದಲ ಎಸೆತದಲ್ಲಿ ರಕ್ಷಿತ್‌ ಔಟಾದರು. 2ನೇ ಎಸೆತದಲ್ಲಿ ಮೋನಿಶ್‌ 1 ರನ್‌ ಪಡೆದರು. 3ನೇ ಎಸೆತವನ್ನು ಸಿಕ್ಸರ್‌ಗಟ್ಟುವ ಸುಚಿತ್‌ರ ಪ್ರಯತ್ನವನ್ನು ಬೌಂಡರಿ ಗೆರೆ ಬಳಿ ಮನೀಶ್‌ ವಿಫಲಗೊಳಿಸಿದರು. ಅವರ ಅತ್ಯಾಕರ್ಷಕ ಫೀಲ್ಡಿಂಗ್‌ ಮೈಸೂರಿನ ಜಯದ ಆಸೆಗೆ ತಣ್ಣೀರೆರೆಚಿತು. ಕೊನೆಯ 3 ಎಸೆತದಲ್ಲಿ ಕೇವಲ 1 ರನ್‌ ನೀಡಿದ ಮನ್ವಂತ್‌ ತಂಡವನ್ನು ಗೆಲ್ಲಿಸಿದರು.

ಬೆಂಗಳೂರು(ಆ.30): ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಮಂಗಳವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್‌ ಹಣಾಹಣಿಯಲ್ಲಿ ಮೈಸೂರು ವಾರಿಯರ್ಸ್‌ ವಿರುದ್ಧ ಮನೀಶ್‌ ಪಾಂಡೆ ನಾಯಕತ್ವದ ಹುಬ್ಬಳ್ಳಿ 8 ರನ್‌ ಗೆಲುವು ಸಾಧಿಸಿತು. ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಟೈಗರ್ಸ್‌ ಅಧಿಕಾರಯುತವಾಗಿಯೇ ಚೊಚ್ಚಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಕೊನೆಯಲ್ಲಿ ಮುಗ್ಗರಿಸಿದ ಕರುಣ್‌ ನಾಯರ್‌ ನೇತೃತ್ವದ ಮೈಸೂರು ತಂಡದ ಕನಸು ಭಗ್ನಗೊಂಡಿತು.

ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 203 ರನ್‌ ಕಲೆಹಾಕಿತು. ಮೊಹಮದ್‌ ತಾಹ 40 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್‌ನೊಂದಿಗೆ 72 ರನ್‌ ಚಚ್ಚಿದರೆ, ನಾಯಕ ಮನೀಶ್‌ ಪಾಂಡೆ 23 ಎಸೆತಗಳಲ್ಲಿ ಔಟಾಗದೆ 50 ರನ್‌ ಸಿಡಿಸಿದರು. ಕೃಷ್ಣನ್‌ ಶ್ರೀಜಿತ್‌ 38, ಮನ್ವಂತ್‌ ಕುಮಾರ್‌ 14(5 ಎಸೆತ) ರನ್‌ ಕೊಡುಗೆ ನೀಡಿದರು.

Tap to resize

Latest Videos

ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ ವಿರಾಟ ರೂಪ..! ಏಷ್ಯಾಕಪ್‌ಗೂ ಮುನ್ನ ಎದುರಾಳಿ ಪಡೆಯಲ್ಲಿ ಢವ ಢವ

ಬೃಹತ್ ಗುರಿ ಬೆನ್ನತ್ತಿದ ಮೈಸೂರು 8 ವಿಕೆಟ್‌ಗೆ 195 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪವರ್‌ ಪ್ಲೇನಲ್ಲಿ 60 ರನ್‌ ಕಲೆಹಾಕಿದ ತಂಡ ಬಳಿಕ ಸತತ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಆರ್‌. ಸಮರ್ಥ್‌(35 ಎಸೆತಗಳಲ್ಲಿ 63) ಹಾಗೂ ಕರುಣ್‌ ನಾಯರ್‌(20 ಎಸೆತಗಳಲ್ಲಿ 37)ರ ವಿಕೆಟ್‌ ಕಳೆದುಕೊಂಡ ಬಳಿಕ ಇತರರಿಂದ ತಂಡಕ್ಕೆ ನಿರೀಕ್ಷಿತ ಕೊಡುಗೆ ಸಿಗಲಿಲ್ಲ. ಡೆತ್‌ ಓವರ್‌ಗಳಲ್ಲಿ ಬಿಗು ಬೌಲಿಂಗ್‌ ನಡೆಸಿದ ಹುಬ್ಬಳ್ಳಿ ಪ್ರಶಸ್ತಿ ಗೆದ್ದು ಸಂಭ್ರಮಿಸಿತು. ಮನ್ವಂತ್‌ ಕುಮಾರ್‌ 32 ರನ್‌ಗೆ 3 ವಿಕೆಟ್‌ ಪಡೆದರು.

ರೋಚಕ ಕೊನೆ ಓವರ್‌!

ಮೈಸೂರಿಗೆ ಕೊನೆಯ ಓವರಲ್ಲಿ ಗೆಲ್ಲಲು 12 ರನ್‌ ಬೇಕಿತ್ತು. ಮನ್ವಂತ್‌ ಎಸೆದ ಓವರ್‌ನ ಮೊದಲ ಎಸೆತದಲ್ಲಿ ರಕ್ಷಿತ್‌ ಔಟಾದರು. 2ನೇ ಎಸೆತದಲ್ಲಿ ಮೋನಿಶ್‌ 1 ರನ್‌ ಪಡೆದರು. 3ನೇ ಎಸೆತವನ್ನು ಸಿಕ್ಸರ್‌ಗಟ್ಟುವ ಸುಚಿತ್‌ರ ಪ್ರಯತ್ನವನ್ನು ಬೌಂಡರಿ ಗೆರೆ ಬಳಿ ಮನೀಶ್‌ ವಿಫಲಗೊಳಿಸಿದರು. ಅವರ ಅತ್ಯಾಕರ್ಷಕ ಫೀಲ್ಡಿಂಗ್‌ ಮೈಸೂರಿನ ಜಯದ ಆಸೆಗೆ ತಣ್ಣೀರೆರೆಚಿತು. ಕೊನೆಯ 3 ಎಸೆತದಲ್ಲಿ ಕೇವಲ 1 ರನ್‌ ನೀಡಿದ ಮನ್ವಂತ್‌ ತಂಡವನ್ನು ಗೆಲ್ಲಿಸಿದರು.

Maharaja Trophy Final: ಹುಬ್ಬಳ್ಳಿ-ಮೈಸೂರು ಫೈನಲ್‌ ಫೈಟ್‌!

ಸ್ಕೋರ್‌: 
ಹುಬ್ಬಳ್ಳಿ 20 ಓವರಲ್ಲಿ 203/8 (ತಾಹ 72, ಪಾಂಡೆ 50*, ಅಜಿತ್‌ 2-33)
ಮೈಸೂರು 20 ಓವರಲ್ಲಿ 195/8 (ಸಮರ್ಥ್‌ 63, ಕರುಣ್‌ 37, ಮನ್ವಂತ್‌ 3-32)
 
click me!