Maharaja T20 Trophy : ಚೇತನ್‌ ಶತಕ, ಬೆಂಗಳೂರು ವಾರಿಯರ್ಸ್‌ಗೆ 5ನೇ ಗೆಲುವು

Published : Aug 18, 2022, 11:15 AM IST
Maharaja T20 Trophy : ಚೇತನ್‌ ಶತಕ, ಬೆಂಗಳೂರು ವಾರಿಯರ್ಸ್‌ಗೆ 5ನೇ ಗೆಲುವು

ಸಾರಾಂಶ

ಮಹಾರಾಜ ಟಿ20 ಟ್ರೋಫಿ ಟೂರ್ನಿಯಲ್ಲಿ ಮುಂದುವರೆದ ಬೆಂಗಳೂರು ವಾರಿಯರ್ಸ್ ದರ್ಬಾರು ಟೂರ್ನಿಯಲ್ಲಿ 6ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಬೆಂಗಳೂರು ಇನ್ನು ಟೂರ್ನಿಯಲ್ಲಿ 5ನೇ ಸೋಲು ಕಂಡು ಮುಖಭಂಗ ಅನುಭವಿಸಿದ ಶಿವಮೊಗ್ಗ ಸ್ಟ್ರೈಕರ್

ಬೆಂಗಳೂರು(ಆ.18): ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಬೆಂಗಳೂರು ವಾರಿಯ​ರ್ಸ್‌ 5ನೇ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ಬುಧವಾರದ ಪಂದ್ಯದಲ್ಲಿ ಬೆಂಗಳೂರು, ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧ 25 ರನ್‌ ಜಯಗಳಿಸಿತು.

ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 6 ವಿಕೆಟ್‌ಗೆ 191 ರನ್‌ ಕಲೆ ಹಾಕಿತು. ಆರ್‌.ಚೇತನ್‌ 55 ಎಸೆತಗಳಲ್ಲಿ ಅಜೇಯ 105 ರನ್‌ ಸಿಡಿಸಿದರೆ, ಅನಿರುದ್ಧ ಜೋಶಿ 54(28 ಎಸೆತ) ರನ್‌ ಬಾರಿಸಿದರು. ಕಠಿಣ ಗುರಿ ಬೆನ್ನತ್ತಿದ ಶಿವಮೊಗ್ಗ 8 ವಿಕೆಟ್‌ಗೆ 166 ರನ್‌ ಸೋಲೊಪ್ಪಿಕೊಂಡಿತು. ರೋಹನ್‌ ಕದಂ (39 ಎಸೆತದಲ್ಲಿ 67) ಏಕಾಂಗಿ ಹೋರಾಟ ಪ್ರದರ್ಶಿಶಿಸಿದರು. ಪ್ರದೀಪ್‌ 28ಕ್ಕೆ 4 ವಿಕೆಟ್‌ ಕಿತ್ತರು. 

ಬುಧವಾರದ ಮೊದಲ ಪಂದ್ಯದಲ್ಲಿ ಮಂಗಳೂರು ಯುನೈಟೆಡ್‌ ವಿರುದ್ಧ ಮೈಸೂರು ವಾರಿಯ​ರ್‍ಸ್ 6 ವಿಕೆಟ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಮಂಗಳೂರು ಅಭಿನವ್‌ ಮನೋಹರ್‌(68) ಅಬ್ಬರದಿಂದ 7 ವಿಕೆಟ್‌ಗೆ 171 ರನ್‌ ಗಳಿಸಿತು. ಮೈಸೂರು 18.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ಪವನ್‌ ದೇಶಪಾಂಡೆ 35 ಎಸೆತಗಳಲ್ಲಿ 53 ರನ್‌ ಸಿಡಿಸಿದರು.

ಸ್ಕೋರ್‌

ಬೆಂಗಳೂರು 20 ಓವರಲ್ಲಿ 191/6 (ಚೇತನ್‌ 105, ಜೋಶಿ 54, ಗೌತಮ್‌ 2-27)
ಶಿವಮೊಗ್ಗ 20 ಓವರಲ್ಲಿ 166/8 (ರೋಹನ್‌ 67, ಪ್ರದೀಪ್‌ 4-28)

ಮೈಸೂರಿಗೆ ಶರಣಾದ ಮಂಗಳೂರು

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮಂಗಳೂರು ಯುನೈಟೆಡ್‌ ವಿರುದ್ಧ ಮೈಸೂರು ವಾರಿಯ​ರ್ಸ್‌ 6 ವಿಕೆಟ್‌ ಗೆಲುವು ಸಾಧಿಸಿತು. ಎರಡೂ ತಂಡಗಳು ತಲಾ 7 ಪಂದ್ಯಗಳಲ್ಲಿ ತಲಾ 4ರಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ ಮೈಸೂರು 2ನೇ, ಮಂಗಳೂರು 3ನೇ ಸ್ಥಾನದಲ್ಲಿದೆ.

Ind vs Zim: ಇಂದಿನಿಂದ ಭಾರತ-ಜಿಂಬಾಬ್ವೆ ಏಕದಿನ ಕದನ

ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮಂಗಳೂರು 7 ವಿಕೆಟ್‌ಗೆ 171 ರನ್‌ ಗಳಿಸಿತು. ಅಭಿನವ್‌ ಮನೋಹರ್‌ 35 ಎಸೆತಗಳಲ್ಲಿ 68, ನಿಕಿನ್‌ ಜೋಸ್‌ 55 ರನ್‌ ಸಿಡಿಸಿದರು. ನಾಯಕ ಸಮರ್ಥ್‌ 22 ರನ್‌ ಕೊಡುಗೆ ನೀಡಿದರು. ಪ್ರತೀಕ್‌ ಜೈನ್‌, ಆದಿತ್ಯ ಗೋಯಲ್‌ ತಲಾ 2 ವಿಕೆಟ್‌ ಪಡೆದರು. ದೊಡ್ಡ ಗುರಿ ಬೆನ್ನತ್ತಿದ ಮೈಸೂರು 18.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ಪವನ್‌ ದೇಶಪಾಂಡೆ 35 ಎಸೆತಗಳಲ್ಲಿ 53, ಕರುಣ್‌ ನಾಯರ್‌ 27 ಎಸೆತಗಳಲ್ಲಿ 47 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು.

ಸ್ಕೋರ್‌: 
ಮಂಗಳೂರು 20 ಓವರಲ್ಲಿ 171/7 (ಅಭಿನವ್‌ 68, ನಿಕಿನ್‌ 55, ಪ್ರತೀಕ್‌ 2-31) 
ಮೈಸೂರು 18.1 ಓವರಲ್ಲಿ 172/4 (ಪವನ್‌ 53, ನಾಯರ್‌ 47, ವೆಂಕಟೇಶ್‌ 2-20)

ಟೀಂ ಇಂಡಿಯಾಕ್ಕೆ ಮುಂದಿನ 5 ವರ್ಷ 141 ಅಂ.ರಾ. ಪಂದ್ಯ

ನವದೆಹಲಿ: 2023ರಿಂದ 2027ರ ಅವಧಿಯಲ್ಲಿ ಭಾರತ ಪುರುಷರ ತಂಡ ಒಟ್ಟು 141 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ತಿಳಿಸಿದೆ. ಬುಧವಾರ ಐಸಿಸಿ ಭವಿಷ್ಯದ ಪ್ರವಾಸ ಮತ್ತು ಕಾರ‍್ಯಕ್ರಮಗಳ(ಎಫ್‌ಟಿಪಿ) ಪಟ್ಟಿಯನ್ನು ಪ್ರಕಟಗೊಳಿಸಿತು. 

ಭಾರತ ತಂಡ ಮೇ 2023ರಿಂದ 2027ರ ಏಪ್ರಿಲ್‌ವರೆಗೆ ಒಟ್ಟು 38 ಟೆಸ್ಟ್‌, 39 ಏಕದಿನ ಹಾಗೂ 61 ಟಿ20 ಪಂದ್ಯಗಳನ್ನು ಆಡಲಿದೆ. ಈ ಪೈಕಿ ಆಸ್ಪ್ರೇಲಿಯಾ, ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ಭಾಗಿಯಾಗಲಿದೆ. ಆದರೆ ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಭಾರತ ಆಡುವುದಿಲ್ಲ. ಇನ್ನು, ಭಾರತ ತಂಡ 2023ರ ಏಕದಿನ ವಿಶ್ವಕಪ್‌ಗೂ ಮುನ್ನ 29 ಏಕದಿನ ಪಂದ್ಯಗಳನ್ನು ಆಡಲಿದೆ ಎಂದು ಐಸಿಸಿ ತಿಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!