ಡೋಪಿಂಗ್‌: ಸಿಕ್ಕಿಬಿದ್ದ ಮಹಿಳಾ ಕ್ರಿಕೆಟರ್‌..!

By Suvarna NewsFirst Published Aug 13, 2020, 9:54 AM IST
Highlights

ಅಂಡರ್ 23 ಮಹಿಳಾ ಕ್ರಿಕೆಟರ್‌ವೊಬ್ಬರು ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದಾರೆ. ನಾಡಾ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ಕ್ರಿಕೆಟ್ ಆಟಗಾರ್ತಿ ಡ್ರಗ್ಸ್ ಸೇವಿಸಿರುವುದು ಬಯಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಆ.13): ಮಧ್ಯಪ್ರದೇಶದ ಅಂಡರ್‌-23 ಮಹಿಳಾ ಕ್ರಿಕೆಟರ್‌ ಅನ್ಶುಲಾ ರಾವ್‌ ಡೋಪಿಂಗ್‌ ನಡೆಸಿ ಸಿಕ್ಕಿಬಿದ್ದಿದ್ದಾರೆ. ಉದ್ದೀಪನ ಸೇವನೆ ಪರೀಕ್ಷೆ ಫೇಲಾದ ಭಾರತದ ಮೊದಲ ಮಹಿಳಾ ಕ್ರಿಕೆಟರ್‌ ಎನ್ನುವ ಅಪಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. 

ಅನ್ಶುಲಾ ಅವರನ್ನು ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ)ದಿಂದ ತಾತ್ಕಾಲಿಕ ಅಮಾನತುಗೊಳಿಸಿದೆ. ಈ ವರ್ಷ ಮಾ.14ರಂದು ನಾಡಾ, ಅನ್ಶುಲಾ ಅವರ ಡೋಪಿಂಗ್‌ ಪರೀಕ್ಷೆ ನಡೆಸಿತ್ತು ಎನ್ನಲಾಗಿದ್ದು, 2ರಿಂದ 4 ವರ್ಷ ನಿಷೇಧಕ್ಕೆ ಗುರಿಯಾಗುವ ಸಾಧ್ಯತೆ ಇದೆ.

IPLಗೂ ಮುನ್ನ ರಾಜಸ್ಥಾನ ರಾಯಲ್ಸ್‌ಗೆ ಆಘಾತ, ಫೀಲ್ಡಿಂಗ್‌ ಕೋಚ್‌ಗೆ ಕೊರೋನಾ ಪಾಸಿಟಿವ್..!

ಅನ್ಶುಲಾ ರಾವ್‌ ಮಧ್ಯಪ್ರದೇಶ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಬಲಗೈ ಮಧ್ಯಮ ವೇಗಿ ಹಾಗೂ ಬಲಗೈ ಬ್ಯಾಟ್ಸ್‌ವುಮೆನ್ ಆಗಿರುವ ಅನ್ಶುಲಾ ರಾವ್‌ ಬಿಸಿಸಿಐ ಆಯೋಜಿಸಿದ್ದ ಅಂಡರ್ 23 ಟಿ20 ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ನಾಡಾ ಶಿಸ್ತು ಸಮಿತಿ ನಾಲ್ಕು ವರ್ಷಗಳವರೆಗೆ ನಿಷೇಧ ವಿಧಿಸುವ ಅಧಿಕಾರ ಹೊಂದಿದೆ.

ಕಳೆದ ವರ್ಷ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಕೂಡಾ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದಿದ್ದರು. ಬಳಿಕ ಮುಂಬೈನ ಪೃಥ್ವಿ 8 ತಿಂಗಳುಗಳ ಕಾಲ ನಿಷೇಧಕ್ಕೂ ಗುರಿಯಾಗಿದ್ದರು. 
 

click me!