ಲವ್ ಯು, ಕಿರಿಕಿರಿ ಮಾಡಿದರೂ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿ ನೀನು, ಸಾರಾ ತೆಂಡೂಲ್ಕರ್ ಭಾವುಕ ಸಂದೇಶ

Published : Sep 25, 2026, 10:37 AM IST
Sara Tendulkar

ಸಾರಾಂಶ

ಬೇಬಿ ಬ್ರದರ್, ಲವ್ ಯು..ನಿನ್ನ ಮೇಲಿನ ಪ್ರೀತಿ ನಿನ್ನ ಊಹೆಗಿಂತಲೂ ದೊಡ್ಡದು ಎಂದು ಸಾರಾ ತೆಂಡೂಲ್ಕರ್ ಭಾವುಕ ಸಂದೇಶ ಪೋಸ್ಟ್ ಮಾಡಿದ್ದಾರೆ. ಸಾರಾ ಬೇಬಿ ಬ್ರದರ್‌ಗೆ ಕೊಟ್ಟ ಸಂದೇಶವೇನು?

ಮುಂಬೈ (ಸೆ.25) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸೋಶಿಯಲ್ ಮೀಡಿಯಾ ಪೋಸ್ಟ್ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ. ಸಾರಾ ತೆಂಡೂಲ್ಕರ್ ಭಾವುಕ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ತನ್ನ ಸಹೋದರ ಅರ್ಜುನ್ ತೆಂಡೂಲ್ಕರ್ ಹುಟ್ಟು ಹಬ್ಬಕ್ಕೆ ಸಾರಾ ತೆಂಡೂಲ್ಕರ್ ಈ ಪೋಸ್ಟ್ ಮಾಡಿದ್ದಾರೆ. ಬೇಬಿ ಬ್ರದರ್ ಎಂದು ಅರ್ಜುನ್ ತೆಂಡೂಲ್ಕರ್‌ನ ಕರೆದಿರುವ ಸಾರಾ ತೆಂಡೂಲ್ಕರ್, ನಿನ್ನ ಮೇಲಿನ ಪ್ರೀತಿ ನೀನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಎಂದಿದ್ದಾರೆ. ಇದೇ ವೇಳೆ ಬಾಲ್ಯದ ದಿನಗಳನ್ನು ನೆನೆಪಿಸಿಕೊಂಡಿದ್ದಾರೆ.

ಅರ್ಜುನ್ ತೆಂಡೂಲ್ಕರ್ 27ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅರ್ಜುನ್ ತೆಂಡೂಲ್ಕರ್ ಹುಟ್ಟು ಹಬ್ಬಕ್ಕೆ ಸಹೋದರಿ ಸಾರಾ ತೆಂಡೂಲ್ಕರ್ ಬಾಲ್ಯದ ಫೋಟೋಗಳು, ಅರ್ಜುನ್ ಜೊತೆಗಿನ ಕ್ಷಣಗಳ ನೆನಪುಗಳನ್ನು ಮೆಲುಕಿ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಭಾವುಕರಾಗಿದ್ದಾರೆ. ಸಹೋದರನ ಪ್ರೀತಿ, ಒಡನಾಟ ಸೇರಿದಂತೆ ಪ್ರಮುಖ ಘಟ್ಟಗಳನ್ನು ಸಾರಾ ತೆಂಡೂಲ್ಕರ್ ಹಂಚಿಕೊಂಡಿದ್ದಾರೆ.

ನನಗೆ ನೀನು ಬೇಬಿ ಬ್ರದರ್

ನನ್ನನ್ನು ಸದಾ ಕಾಲಾ ಕಿರಿಕಿರಿ ಮಾಡುತ್ತಲೇ ಇರುವ ವ್ಯಕ್ತಿ. ಆದರೂ ನನಗೆ ಯಾವತ್ತಿಗೂ ನೀನು ಅತ್ಯಂತ ಪ್ರೀತಿ ಪಾತ್ರನಾಗಿದ್ದೀಯ.ನಾನು ಅತೀಯಾಗಿ ಮೆಚ್ಚಿಕೊಂಡ ವ್ಯಕ್ತಿ, ನೀನು ಎಷ್ಟೇ ದೊಡ್ಡವನಾದರೂ ನನಗೆ ನೀನು ಬೇಬಿ ಬ್ರದರ್ ಆಗಿಯೇ ಇರುತ್ತಿ ಎಂದು ಅರ್ಜುನ್ ತೆಂಡೂಲ್ಕರ್‌ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಶಿಸ್ತು, ನಿನ್ನ ಬೆಳವಣಿಗೆ, ಪ್ರಗತಿ ಕುರಿತು ನನಗೆ ಅಭಿಮಾನವಿದೆ. ನಿನ್ನ ವೃತ್ತಿ ಬದುಕಿನ ಹಾಗೂ ವೈಯುಕ್ತಿ ಪಯಣ ನೋಡುವುದೇ ಆನಂದವಾಗುತ್ತಿದೆ. ನಿನ್ನ ಪರಿಶ್ರಮ, ಗುರಿ ಸಾಧಿಸುವ ಛಲ ಎಲ್ಲವೂ ಸ್ಪೂರ್ತಿಯಾಗಿದೆ. ನಿನ್ನ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ ಎಂದು ಸಾರಾ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.

ಸಾರಾ ತೆಂಡೂಲ್ಕರ್ ಹಾಗೂ ಅರ್ಜುನ್ ತೆಂಡೂಲ್ಕರ್ ಜೊತೆಗಿರುವ ಬಾಲ್ಯದ ಹಲವು ಫೋಟೋಗಳನ್ನು ಮಾಂಟೇಜ್ ರೂಪದಲ್ಲಿ ಹಂಚಿಕೊಂಡಿದ್ದಾರೆ. ಬಾಲ್ಯದ ಕ್ಷಣಗಳ ಜೊತೆ ಸಹೋದರ ಪ್ರೀತಿಯ ಅಪ್ಪುಗೆ, ಸಲುಗೆ ಸೇರಿದಂತೆ ಪ್ರಮುಖ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇತ್ತ ಸಚಿನ್ ತೆಂಡೂಲ್ಕರ್ ಕೂಡ ಪುತ್ರ ಅರ್ಜುನ್‌ಗೆ ಶುಭಕೋರಿದ್ದಾರೆ. ಹಂತ ಹಂತವಾಗಿ ನೀನು ಬೆಳೆಯುತ್ತಿರುವುದು ನೋಡುವುದ ಸಂತೋಷವಾಗಿದೆ. ಹುಟ್ಟುಹಬ್ಬದ ಶುಭಾಶಯಗಳು ಎಂದು ಸಚಿನ್ ತೆಂಡೂಲ್ಕರ್ ವಿಶ್ ಮಾಡಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಮುಂಬೈನಿಂದ ಇತ್ತೀಚೆಗೆ ಗೋವಾ ರಣಜಿ ತಂಡಕ್ಕೆ ಸೇರಿಕೊಂಡಿದ್ದಾರೆ. ಮುಂದಿನ ಆವೃತ್ತಿಗಳಲ್ಲಿ ಅರ್ಜುನ್ ತೆಂಡೂಲ್ಕರ್ ಗೋವಾ ರಣಜಿ ತಂಡ ಪ್ರತಿನಿಧಿಸಲಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದಾರೆ. ಕಳೆದ ಕೆಲ ಆವೃತ್ತಿಗಳಿಂದ ಅರ್ಜುನ್ ತೆಂಡೂಲ್ಕರ್ ಲಖನೌ ಸೂಪರ್‌ಜೈಂಟ್ಸ್ ತಂಡದ ಪರ ಆಡುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2027ರ ವಿಶ್ವಕಪ್‌ಗೆ ರೋಹಿತ್-ವಿರಾಟ್ ಫಿಕ್ಸ್? ಸುರೇಶ್ ರೈನಾ ನೀಡಿದ '90% ಸೀಕ್ರೆಟ್' ಏನು?!
'ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ' ಸೂರ್ಯವಂಶಿಗಾಗಿ ಸಂಜು ಔಟ್ ಆದ್ನಾ? ಗಂಭೀರ್ ಬಿಚ್ಚಿಟ್ರು ರಹಸ್ಯ