'ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ' ಸೂರ್ಯವಂಶಿಗಾಗಿ ಸಂಜು ಔಟ್ ಆದ್ನಾ? ಗಂಭೀರ್ ಬಿಚ್ಚಿಟ್ರು ರಹಸ್ಯ

Published : Sep 24, 2026, 10:31 PM IST
gautam gambhir

ಸಾರಾಂಶ

ಎಲ್ಲರಂತೆ ಗೌತಮ್ ಗಂಭೀರ್ ಅವರು ಕೂಡ ರಾತ್ರಿ ನಿದ್ದೆ ಬರದೆ ಒದ್ದಾಡಿದ ದಿನಗಳು ಇದೆಯಂತೆ. ಅದು ತುಂಬಾ ಹಿಂದಿನ ಕತೆ ಅಲ್ಲ. ಈ ವರ್ಷ ನಡೆದ ಒಂದು ಮಹತ್ವದ ನಿರ್ಧಾರ ಗಂಭೀರ್‍‌ಗೆ ತುಂಬಾ ನೋವುಂಟು ಮಾಡಿತ್ತಂತೆ. ಈ ಕುರಿತ ಒಂದು ವರದಿ ಇಲ್ಲಿದೆ.

ನಾನು ಟೀಂ ಇಂಡಿಯಾ ಕೋಚ್ ಆದ ಎರಡು ವರ್ಷಗಳ ಅವಧಿಯಲ್ಲಿ ಅದೊಂದು ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ಇಡೀ ರಾತ್ರಿ ನನ್ನನ್ನು ಕಾಡಿತು ಎಂದು ಮುಖ್ಯಕೋಚ್ ಗೌತಮ್ ಗಂಭೀರ್ ತಮ್ಮ ಮನದ ನೋವಿನ ಕತೆಯನ್ನು ಹೇಳಿಕೊಂಡಿದ್ದಾರೆ.

ಯಾವುದು ಆ ನೋವಿನ ಕತೆ?

ಅದು ಬೇರೆ ಯಾವುದೂ ಅಲ್ಲ. ವೈಭವ್ ಸೂರ್ಯವಂಶಿ ವಿಚಾರ. ವೈಭವ್ ಸೂರ್ಯವಂಶಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಸಿದ ದಿನ. ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟಿ-20 ಸಿರೀಸ್ ಆಡಿತು. ಮೊದಲ ಪಂದ್ಯದಲ್ಲಿ ಭಾರತ ತಂಡ ಸೋತ ನಂತರ ಸಂಜು ಅವರನ್ನ ಪ್ಲೇಯಿಂಗ್-11ನಿಂದ ಕೈಬಿಡಲಾಗಿತ್ತು. ಅದಕ್ಕೂ ಮೊದಲು ಸಂಜು ಸ್ಯಾಮ್ಸನ್ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳಲ್ಲಿ ಕೇವಲ 6 ರನ್ ಮಾತ್ರಗಳಿಸಿದ್ದರು.

ಹೀಗಾಗಿ ಟೀಂ ಇಂಡಿಯಾಗೆ ಮುಂದಿನ ಪಂದ್ಯಗಳ ಗೆಲುವು ಅನಿವಾರ್ಯವಾಗಿತ್ತು. ಇದೇ ಕಾರಣಕ್ಕೆ ವೈಭವ್ ಸೂರ್ಯವಂಶಿಗೆ ಮ್ಯಾಂಚೆಸ್ಟರ್‍‌ನಲ್ಲಿ ನಡೆದ ಪಂದ್ಯದಲ್ಲಿ ಚೊಚ್ಚಲ ಅವಕಾಶ ನೀಡಲಾಯಿತು. ಜುಲೈ 4 ರಂದು ವೈಭವ್ ಸೂರ್ಯವಂಶಿ ಅಂತಾರಾಷ್ಟ್ರಿಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ಇತ್ತಿಚೆಗೆ ಜಿಯೋ ಹಾಟ್‌ಸ್ಟಾರ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿರುವ ಗಂಭೀರ್, ಜುಲೈ 4 ರಂದು ತಮ್ಮ ಮನಸ್ಸು ಹೇಗಿತ್ತು ಎಂಬುದನ್ನ ವಿವರಿಸಿದ್ದಾರೆ. ಅಂದು ಸಂಜು ಅವರನ್ನು ಬೆಂಚ್‌ಗೆ ಕೂರಿಸಲು ತೆಗೆದುಕೊಂಡ ನಿರ್ಧಾರ ನನ್ನನ್ನು ತುಂಬಾ ಕಾಡಿತು. ಅವತ್ತು ರಾತ್ರಿ ಇಡೀ ಎಚ್ಚರವಾಗಿರುವಂತೆ ಮಾಡಿತು. ಆ ವರ್ಷ ನಡೆದ ಟಿ-20 ವಿಶ್ವಕಪ್‌ನಲ್ಲಿ ಸಂಜು ಟೂರ್ನಮೆಂಟ್‌ನ ಆಟಗಾರ. ಹೀಗಿರುವಾಗ ಮೂರು, ನಾಲ್ಕು ಪಂದ್ಯ ಆಡಿಲ್ಲ ಅಂದರೆ ಆತನನ್ನು ಕೈಬಿಡೋದು ಸುಲಭವಲ್ಲ. ಇದರ ಮಧ್ಯೆ ವೈಭವ್ ಕೂಡ ಅದ್ಭುತ ಫಾರ್ಮ್‌ನಲ್ಲಿದ್ದರು. ಆದರೆ ನಮಗೆ ಅಂದು ಟೀಂ ಇಂಡಿಯಾ ಸರಣಿ ಗೆಲ್ಲೋದು ಮುಖ್ಯವಾಗಿತ್ತು ಎಂದು ಗಂಭೀರ್ ಹೇಳಿದ್ದಾರೆ.

ದೀರ್ಘಕಾಲದವರೆಗೆ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರು ಆತ್ಮವಿಶ್ವಾಸ ಕಾಪಾಡಿಕೊಳ್ಳುವುದು ಮುಖ್ಯ. ಕೆಲವೊಮ್ಮೆ ಫಾರ್ಮ್‌ನಲ್ಲಿದ್ದರೂ ಆಟಗಾರ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. ಮಾಧ್ಯಮ ಮತ್ತು ಹೊರಗಿನ ಚರ್ಚೆಗಳು ಪ್ಲೇಯಿಂಗ್-11 ಆಯ್ಕೆಯಲ್ಲಿ ನಿರ್ಧಾರ ಆಗಲ್ಲ. ಪಂದ್ಯವನ್ನು ಹೇಗೆ ಗೆಲ್ಲಬಹುದು ಎಂಬ ಆಧಾರದ ಮೇಲೆ ಪ್ಲೇಯಿಂಗ್-11 ನಡೆಯಲಿದೆ. ವೈಭವ್ ಅವರನ್ನು ಆಡಿಸಿದರೆ ಸಂಜು ಅಥವಾ ಅಭಿಷೇಕ್ ಶರ್ಮಾರನ್ನು ಕೈಬಿಡಬೇಕಾಗುತ್ತದೆ. ಕಳೆದ ಒಂದೂವರೆ ವರ್ಷದಿಂದ ಎಫೆಕ್ಟೀವ್ ಪ್ಲೇಯಿಂಗ್-11 ಮಾಡಿಕೊಂಡು ಬಂದಿದ್ದೇವೆ. ಒಂದು ಅಥವಾ ಎರಡು ಪಂದ್ಯ ಆಡದಿದ್ದರೆ ಆತನನ್ನು ಕೈಬಿಡೋದು ಅತ್ಯಂತ ಕಠಿಣ ನಿರ್ಧಾರ. ಅದು ಸಾಧ್ಯವಾಗುವುದಿಲ್ಲ ಎಂದರು.

ವೈಭವ್ ಸೂರ್ಯವಂಶಿ ತಂಡಕ್ಕೆ ಎಂಟ್ರಿಕೊಟ್ಟ ದಿನದಿಂದ ನಮಗೆ ಈ ಸವಾಲು ಮತ್ತಷ್ಟು ಹೆಚ್ಚಾಗಿದೆ. ಯುವ ಆಟಗಾರನ ಅದ್ಭುತ ಫಾರ್ಮ್‌ ತಂಡದ ಬಲ ಹೆಚ್ಚಿಸಿದೆ. ಜೊತೆಗೆ ಪ್ಲೇಯಿಂಗ್ ಇಲೆವೆಲ್‌ನ ಸಂಯೋಜನೆ ಕೂಡ ಅಷ್ಟೇ ಟಫ್ ಆಗಿ ಪರಿಣಮಿಸುತ್ತದೆ. ಜನಪ್ರಿಯ ನಿರ್ಧಾರ ತೆಗೆದುಕೊಳ್ಳುವುದು ಸುಲಭ. ಆದರೆ ಸರಿಯಾದ ನಿಧಾರ ಮಾಡೋದು ಸುಲಭದ ವಿಚಾರ ಅಲ್ಲವೇ ಅಲ್ಲ. ಸಂಜು ಮತ್ತು ಅಭಿಷೇಕ್ ಶರ್ಮಾ ನಿರಂತರವಾಗಿ ಫಾರ್ಮ್‌ ಕಾಯ್ದುಕೊಳ್ಳುವುದು ಒಳ್ಳೆಯ ನಿರ್ಧಾರವಾಗಲಿದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಭಾರತ ಕೇವಲ 17 ತಿಂಗಳಲ್ಲಿ ಮೂರು ವಿಶ್ವಕಪ್ ಗೆದ್ದಿದೆ. ಒಂದು ವಿಶ್ವಕಪ್‌ನಿಂದ ಇನ್ನೊಂದು ವಿಶ್ವಕಪ್‌ಗೆ ಅಜೇಯವಾಗಿ ಓಟ ಮುಂದುವರಿಸಿದೆ. ಹೀಗಾಗಿ ಒಂದು ಕೆಟ್ಟ ಸರಣಿ, ಒಂದು ಕೆಟ್ಟ ಪಂದ್ಯದಿಂದ ಆಟಗಾರ ಅಥವಾ ತಂಡವನ್ನು ಕೆಟ್ಟದಾಗಿ ನೋಡೋದು ಒಳ್ಳೆಯದಲ್ಲ ಎಂದು ಗಂಭೀರ್ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket ಸಮರಕ್ಕೆ '22 ಯಾರ್ಡ್ಸ್ ಸೂಕ್ತವೆಂದಿದ್ದೇಕೆ?: ಇಲ್ಲಿದೆ ಈ ಟೆಕ್ನಿಕಲ್‌ ಕಂಪ್ಲೀಟ್ ಹಿಸ್ಟರಿ!
ಆರ್‌ಸಿಬಿಗೆ ಟ್ರೋಫಿ ಗೆಲ್ಲಿಸಿಕೊಟ್ಟ ಕೋಚ್ ಇದೀಗ ಮುಂಬೈ ಇಂಡಿಯನ್ಸ್‌ಗೆ ಹೆಡ್ ಕೋಚ್ ಆಗಿ ನೇಮಕ