ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಮೂರನೇ ಸಲ ಅತ್ಯಂತ ಕೆಟ್ಟ ದಾಖಲೆ ಬರೆದ ಅರ್ಜೇಂಟೀನಾ!

Published : Jul 20, 2026, 04:06 PM IST
Argentina

ಸಾರಾಂಶ

ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಸೋತ ಅರ್ಜೆಂಟೀನಾ, 60 ವರ್ಷಗಳ ಇತಿಹಾಸದಲ್ಲಿ ಫೈನಲ್ ಪಂದ್ಯದಲ್ಲಿ ಒಂದೇ ಒಂದು ಶಾಟ್ ಗುರಿಯತ್ತ ಹೊಡೆಯಲು ವಿಫಲವಾದ ಕೆಟ್ಟ ದಾಖಲೆಯನ್ನು ನಿರ್ಮಿಸಿದೆ. ಇದು ಅರ್ಜೆಂಟೀನಾ ತಂಡಕ್ಕೆ ಇಂತಹ ಮೂರನೇ ಅಪಖ್ಯಾತಿಯಾಗಿದ್ದು, ತಂಡದ ಆಕ್ರಮಣಕಾರಿ ಆಟ ಸಂಪೂರ್ಣ ವಿಫಲವಾಯಿತು.

ನ್ಯೂಯಾರ್ಕ್: Argentina unwanted record ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಸೋತ ಬೆನ್ನಲ್ಲೇ, ಅರ್ಜೆಂಟೀನಾ ತಂಡ ಒಂದು ಕೆಟ್ಟ ದಾಖಲೆಯನ್ನು ತನ್ನ ತಲೆಗೆ ಕಟ್ಟಿಕೊಂಡಿದೆ. ಕಳೆದ 60 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ, ಫೈನಲ್ ಪಂದ್ಯದಲ್ಲಿ ಎದುರಾಳಿ ತಂಡದ ಗೋಲ್‌ಪೋಸ್ಟ್‌ನತ್ತ ಒಂದೇ ಒಂದು ಶಾಟ್ ಕೂಡ ಹೊಡೆಯಲು ಸಾಧ್ಯವಾಗದ ತಂಡ ಎಂಬ ಕೆಟ್ಟ ದಾಖಲೆಯನ್ನು ಅರ್ಜೆಂಟೀನಾ ಮಾಡಿದೆ. ಅರ್ಜೆಂಟೀನಾ ಈ ರೀತಿ ಅಪಖ್ಯಾತಿಗೆ ಒಳಗಾಗುತ್ತಿರುವುದು ಇದು ಮೂರನೇ ಬಾರಿ.

ಒಮ್ಮೆಯೂ ಗೋಲ್ ಬಾರಿಸಲು ಪ್ರಯತ್ನಿಸದ ಅರ್ಜೆಂಟೀನಾ

2026ರ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ 120 ನಿಮಿಷಗಳ ಕಾಲ ಆಟವಾಡಿದರೂ, ಸ್ಪೇನ್ ಗೋಲ್‌ಕೀಪರ್ ಉನಾಯ್ ಸಿಮೋನ್ ಅವರನ್ನು ಪರೀಕ್ಷಿಸುವಂತಹ ಒಂದೇ ಒಂದು ಆನ್-ಟಾರ್ಗೆಟ್ ಶಾಟ್ ಕೂಡ ಹೊಡೆಯಲು ಅರ್ಜೆಂಟೀನಾದ ಆಟಗಾರರಿಗೆ ಸಾಧ್ಯವಾಗಲಿಲ್ಲ. ಮೆಸ್ಸಿ ಮತ್ತು ತಂಡವು ಸ್ಪೇನ್‌ನ ರಕ್ಷಣಾ ಕೋಟೆಯ ಮುಂದೆ ಸಂಪೂರ್ಣವಾಗಿ ಮಂಕಾಗಿ ಹೋಯಿತು. ಫಿಫಾ ವಿಶ್ವಕಪ್ ಇತಿಹಾಸದಲ್ಲಿ 1966ರಿಂದ ಅಧಿಕೃತವಾಗಿ ಡೇಟಾ ದಾಖಲಿಸಲು ಆರಂಭಿಸಿದ ನಂತರ, ಫೈನಲ್‌ನಲ್ಲಿ ಒಂದೂ ಶಾಟ್ ಗುರಿಯತ್ತ ಹೊಡೆಯಲು ವಿಫಲವಾದ ಪ್ರಸಂಗ ಅರ್ಜೆಂಟೀನಾ ಪಾಲಿಗೆ ಇದು ಮೂರನೇಯದ್ದಾಗಿದೆ. 1990ರ ವಿಶ್ವಕಪ್‌ನಲ್ಲಿ ಪಶ್ಚಿಮ ಜರ್ಮನಿ ವಿರುದ್ಧ 1-0 ಅಂತರದಲ್ಲಿ ಸೋತ ಪಂದ್ಯದಲ್ಲೂ ತಂಡ ಒಂದೇ ಒಂದು ಆನ್-ಟಾರ್ಗೆಟ್ ಶಾಟ್ ಹೊಡೆದಿರಲಿಲ್ಲ.

2014ರ ವಿಶ್ವಕಪ್ ಫೈನಲ್‌ನಲ್ಲಿ ಜರ್ಮನಿ ವಿರುದ್ಧ ಮೆಸ್ಸಿಯ ಅರ್ಜೆಂಟೀನಾ ಹೆಚ್ಚುವರಿ ಸಮಯದಲ್ಲಿ 1-0 ಅಂತರದಲ್ಲಿ ಸೋತಾಗಲೂ, ಗುರಿಯತ್ತ ಒಂದೂ ಶಾಟ್ ಬಾರಿಸಲು ತಂಡಕ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ಸ್ಪೇನ್ ವಿರುದ್ಧದ ಫೈನಲ್‌ನಲ್ಲೂ ಕಥೆ ಬದಲಾಗಲಿಲ್ಲ. ಆಟದುದ್ದಕ್ಕೂ ಫೌಲ್‌ಗಳ ಮೂಲಕ ಸ್ಪೇನ್ ಪಡೆಯನ್ನು ತಡೆಯಲು ಯತ್ನಿಸಿದ ಅರ್ಜೆಂಟೀನಾ, ಆಕ್ರಮಣಕಾರಿ ಆಟದಲ್ಲಿ ಸಂಪೂರ್ಣ ವಿಫಲವಾಯಿತು. ವಿಶ್ವಕಪ್ ಫೈನಲ್‌ನಲ್ಲಿ ಬೇರೆ ಯಾವುದೇ ದೊಡ್ಡ ತಂಡ ಈ ರೀತಿ ಎದುರಾಳಿಗಳ ಮುಂದೆ ನಿರಾಯುಧವಾಗಿಲ್ಲ.

ಅದ್ಭುತ ಗೋಲ್ ಕೀಪಿಂಗ್ ಮಾಡಿದ ಮಾರ್ಟಿನೆಜ್

ಫೈನಲ್‌ನಲ್ಲಿ ಗೋಲ್‌ಕೀಪರ್ ಎಮಿ ಮಾರ್ಟಿನೆಜ್ ಅವರ 11 ಅದ್ಭುತ ಸೇವ್‌ಗಳು ಮಾತ್ರ ಅರ್ಜೆಂಟೀನಾವನ್ನು ದೊಡ್ಡ ಅಂತರದ ಸೋಲಿನಿಂದ ಪಾರುಮಾಡಿದವು. ಲಿಯೋನೆಲ್ ಮೆಸ್ಸಿ ಮತ್ತು ಜೂಲಿಯನ್ ಅಲ್ವಾರೆಜ್ ಅವರಂತಹ ಘಟಾನುಘಟಿ ಆಟಗಾರರು ಮುಂಚೂಣಿಯಲ್ಲಿದ್ದರೂ, ಸ್ಪೇನ್‌ನ ಬಾಕ್ಸ್‌ನಲ್ಲಿ ಯಾವುದೇ ಸಂಚಲನ ಮೂಡಿಸಲು ಅರ್ಜೆಂಟೀನಾಗೆ ಸಾಧ್ಯವಾಗಲಿಲ್ಲ ಎಂಬುದು ಅಭಿಮಾನಿಗಳನ್ನು ನಿರಾಸೆಗೊಳಿಸಿದೆ. ಸ್ಪೇನ್ ತಂಡ ಗುರಿಯತ್ತ 11 ಶಾಟ್‌ಗಳನ್ನು ಹೊಡೆದರೆ, ಅರ್ಜೆಂಟೀನಾ ಒಂದೇ ಒಂದು ಶಾಟ್ ಕೂಡ ಹೊಡೆಯಲು ಸಾಧ್ಯವಾಗಲಿಲ್ಲ. ಪಂದ್ಯದಲ್ಲಿ ಸ್ಪೇನ್ ಒಟ್ಟು 20 ಶಾಟ್‌ಗಳನ್ನು ಬಾರಿಸಿದರೆ, ಅರ್ಜೆಂಟೀನಾ ಹೆಚ್ಚುವರಿ ಸಮಯದಲ್ಲಿ ಹೊಡೆದ ಮೂರು ಶಾಟ್‌ಗಳಿಗೆ ಮಾತ್ರ ಸೀಮಿತವಾಯಿತು.

ಪಂದ್ಯದಲ್ಲಿ ಸ್ಪೇನ್ ತಂಡ ಒಟ್ಟು 803 ಪಾಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಆದರೆ, ಅರ್ಜೆಂಟೀನಾ ಕೇವಲ 445 ಪಾಸ್‌ಗಳಿಗೆ ಸೀಮಿತವಾಯಿತು. ಸ್ಪೇನ್ 90% ಪಾಸ್ ನಿಖರತೆ ಹೊಂದಿದ್ದರೆ, ಅರ್ಜೆಂಟೀನಾದ ನಿಖರತೆ ಕೇವಲ 78% ಆಗಿತ್ತು. ಚೆಂಡಿನ ಮೇಲಿನ ಹಿಡಿತದಲ್ಲೂ ಸ್ಪೇನ್, ಅರ್ಜೆಂಟೀನಾವನ್ನು ಬಹುದೂರ ಹಿಂದೆ ಹಾಕಿತ್ತು. ಪಂದ್ಯದಲ್ಲಿ 68% ರಷ್ಟು ಸಮಯ ಚೆಂಡು ಸ್ಪೇನ್ ಬಳಿ ಇದ್ದರೆ, ಅರ್ಜೆಂಟೀನಾ ಕೇವಲ 32% ಹಿಡಿತ ಹೊಂದಿತ್ತು. ಅಂತಿಮವಾಗಿ, 106ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ಗಳಿಸಿದ ಗೋಲಿನಿಂದ ಸ್ಪೇನ್ ಅರ್ಹ ಗೆಲುವು ಸಾಧಿಸಿ ಕಿರೀಟ ಮುಡಿಗೇರಿಸಿಕೊಂಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಪೇನ್ ಫಿಫಾ ಟ್ರೋಫಿ ಹಿಂದಿದೆ ಭಾರತದ 2027 ಏಕದಿನ ವಿಶ್ವಕಪ್ ಗೆಲುವು, ಎಲ್ಲವೂ ಸೇಮ್ ಟು ಸೇಮ್
ಲಾರ್ಡ್ಸ್ ಪಂದ್ಯ ಬಳಿಕ ವಿದಾಯ ಸುದ್ದಿ ಕುರಿತು ಮೊದಲ ಬಾರಿಗೆ ಮೌನ ಮುರಿದ ರೋಹಿತ್ ಶರ್ಮಾ, ವಿಡಿಯೋ