ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಜಹೀರ್ ಖಾನ್ ಅವರಂತೆ ಬೌಲಿಂಗ್ ಮಾಡುವ ರಾಜಸ್ಥಾನದ ಬಾಲಕಿ ಸುಶೀಲಾ ಮೀನಾ ಇದೀಗ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರನ್ನು ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಮಾಡಿದ್ದಾರೆ. ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಸುಶೀಲಾ ಅವರ ಶಿಕ್ಷಣ ಮತ್ತು ತರಬೇತಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಜೈಪುರ: ರಾಜಸ್ಥಾನ ಮೂಲದ ಪುಟ್ಟ ಹುಡುಗಿಯೊಬ್ಬಳು ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಜಹೀರ್ ಖಾನ್ ಅವರಂತೆ ಬೌಲಿಂಗ್ ಮಾಡುವ ವಿಡಿಯೋ ಇತ್ತೀಚಿಗಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆ ಯುವತಿಯ ಹೆಸರು ಸುಶೀಲಾ ಮೀನಾ. ಈಕೆಯ ಬೌಲಿಂಗ್ ಮಾಡುವ ಶೈಲಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಕೂಡಾ ಮನ ಸೋತಿದ್ದರು. ಆಕೆಯ ಬೌಲಿಂಗ್ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಈಕೆಯ ಬೌಲಿಂಗ್ ಜಹೀರ್ ಖಾನ್ ಅವರ ಬೌಲಿಂಗ್ ಶೈಲಿಯನ್ನು ಹೋಲುವಂತಿದೆ ಎಂದು ಎಡಗೈ ವೇಗಿಯನ್ನು ಟ್ಯಾಗ್ ಮಾಡಿದ್ದರು.
ಇದೀಗ ಸುಶೀಲಾ ಮೀನಾ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಕೇಂದ್ರ ಕ್ರೀಡಾಸಚಿವ ಹಾಗೂ ಒಲಿಂಪಿಕ್ ಪದಕ ವಿಜೇತ ರಾಜವರ್ಧನ್ ಸಿಂಗ್ ರಾಥೋಡ್ ಅವರನ್ನು ಬೌಲಿಂಗ್‌ನಲ್ಲಿ ಕ್ಲೀನ್ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
बिटिया से क्लीन बोल्ड होकर हम सब जीत गए pic.twitter.com/VFrezO92GT
— Col Rajyavardhan Rathore (@Ra_THORe)ಈ ವಿಡಿಯೋವನ್ನು ಸ್ವತಃ ರಾಜವರ್ಧನ್ ಸಿಂಗ್ ರಾಥೋಡ್ ಅವರೇ ತಮ್ಮ ಅಧಿಕೃತ ಟ್ವಿಟರ್(ಎಕ್ಸ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೆಟ್ಸ್‌ನಲ್ಲಿ ರಾಜವರ್ಧನ್ ಸಿಂಗ್ ಅವರಿಗೆ ಬೌಲಿಂಗ್ ಮಾಡಿದ ಸುಶೀಲಾ ಮೀನಾ, ಕ್ರೀಡಾ ಸಚಿವರನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೆ.
'ನಾನು ಭಾರತೀಯನಾಗಿದ್ದರಿಂದಲೇ' :ಟ್ರೋಫಿ ವಿತರಣೆ ವೇಳೆ ಆಹ್ವಾನಿಸದ್ದಕ್ಕೆ ಸುನಿಲ್ ಗವಾಸ್ಕರ್ ತೀವ್ರ ಆಕ್ಷೇಪ!
ಶಿಕ್ಷಣ ಹಾಗೂ ಕ್ರಿಕೆಟ್ ಟ್ರೈನಿಂಗ್:
ಇನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮನಗೆದ್ದ ಸುಶೀಲಾ ಮೀನಾ ಅವರ ಬೌಲಿಂಗ್ ಪ್ರದರ್ಶನದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆಕೆಯ ಬೆಂಬಲಕ್ಕೆ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ನಿಂತಿದೆ. ಆಕೆಯ ಸಂಪೂರ್ಣ ಶಿಕ್ಷಣ ಹಾಗೂ ಟ್ರೈನಿಂಗ್ ಜವಾಬ್ದಾರಿಯ ಹೊಣೆಯನ್ನು ಹೊತ್ತುಕೊಳ್ಳುವುದಾಗಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. ರಾಜವರ್ಧನ್ ಸಿಂಗ್ ಅವರ ಸಮ್ಮುಖದಲ್ಲೇ ಸುಶೀಲಾ ಮೀನಾ ಹಾಗೂ ಮತ್ತವರ ಪೋಷಕರನ್ನು ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಸನ್ಮಾನಿಸಿದೆ. ಇನ್ನು ಇದೇ ಸಂದರ್ಭದಲ್ಲಿ ರಾಜವರ್ಧನ್ ಸಿಂಗ್ ರಾಥೋಡ್ ಅವರು ಸುಶೀಲಾ ಮೀನಾ ಅವರಿಗೆ ಕ್ರಿಕೆಟ್ ಕಿಟ್ ಉಡುಗೊರೆಯಾಗಿ ನೀಡಿದರು.
10ರಲ್ಲಿ 6 ಟೆಸ್ಟ್ ಸೋತ ಗಂಭೀರ್ ಹುದ್ದೆ ಮೇಲೆ ತೂಗುಗತ್ತಿ: ರಣಜಿ ಆಡಲು ಆಟಗಾರರಿಗೆ ಖಡಕ್ ವಾರ್ನಿಂಗ್!
ಕಳೆದ ಮೂರು ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಸುಶೀಲಾ
ಸುಶೀಲಾ ಮೀನಾ ಅವರು ಕಳೆದ ಮೂರು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಸುಶೀಲಾ ಮೀನಾ ಸದ್ಯ 5ನೇ ತರಗತಿ ಓದುತ್ತಿದ್ದಾರೆ. ಶಾಲೆಯಲ್ಲಿ ಹುಡುಗರು ಕ್ರಿಕೆಟ್ ಆಡುವುದನ್ನು ನೋಡಿ ಸುಶೀಲಾ ಕೂಡಾ ಕ್ರಿಕೆಟ್ ಆಡುವ ಅಭ್ಯಾಸ ಶುರು ಮಾಡಿದರು. ಮುಂಬರುವ ದಿನಗಳಲ್ಲಿ ಸುಶೀಲಾ ಮೀನಾ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಕನಸು ಕಾಣುತ್ತಿದ್ದಾರೆ.