
ಬರೋಡಾ(ಮೇ.28) ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ನತಾಶ್ ಸ್ಟಾಂಕೋವಿಚ್ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ ಅನ್ನೋ ವದಂತಿಗಳು ಹರಿದಾಡುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ ಇವರಿಬ್ಬರ ನಡೆ ಡಿವೋರ್ಸ್ ವದಂತಿಗೆ ಪುಷ್ಠಿ ನೀಡಿದೆ. ಈ ಕುರಿತು ಹಾರ್ದಿಕ್ ಹಾಗೂ ನತಾಶ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಏಕಾಂಗಿಯಾಗಿ ವಿದೇಶಿ ಪ್ರವಾಸ ಮಾಡಿದ್ದಾರೆ. ಇತ್ತ ನತಾಶ ಕೂಡ ವಿರುದ್ದ ದಿಕ್ಕಿನಲ್ಲಿ ಸಾಗಿದ್ದಾರೆ. ಇವರಿಬ್ಬರ ಜಗಳಕ್ಕೆ ಪುತ್ರ ಅಗಸ್ತ್ಯ ಏಕಾಂಗಿಯಾಗಿದ್ದಾರೆ. ಆದರೆ ಅಗಸ್ತ್ಯನಿಗೆ ಪಾಂಡ್ಯ ಸಹೋದರ ಕ್ರುನಾಲ್ ಪಾಂಡ್ಯ ದಂಪತಿ ಸಾಥ್ ನೀಡಿದ್ದಾರೆ.
ಕ್ರುನಾಲ್ ಪಾಂಡ್ಯ ಹಾಗೂ ಪತ್ನಿ ಪಂಕುರಿ ಶರ್ಮಾ ಇದೀಗ ಹಾರ್ದಿಕ್ ಪುತ್ರನ ಜೊತೆ ಕಾಲ ಕಳೆಯುತ್ತಿದ್ದಾರೆ. ತಮ್ಮ ಪುತ್ರ ಕವೀರ್ ಜೊತೆ ಅಗಸ್ತ್ಯ ಹಿಡಿದು ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇಬ್ಬರು ಮಕ್ಕಳು ಕ್ರುನಾಲ್ ಪಾಂಡ್ಯ ಹಾಗೂ ಪಂಕುರಿ ಶರ್ಮಾ ಮುಖಕ್ಕೆ ಪೈಂಟ್ಸ್ ಬಳಿದು ಸಮಯ ಕಳೆದಿದ್ದಾರೆ.
ಇಂಡಿಯಾದ ಹಾರ್ದಿಕ್ ಪಾಂಡ್ಯಗೂ, ಸರ್ಬಿಯಾದ ನತಾಶಾಗೂ ಲವ್ ಆಗಿದ್ದೇಗೆ?
ಅಗಸ್ತ್ಯನ ಕೊಠಡಿಯಲ್ಲೇ ಕ್ರುನಾಲ್ ಪಾಂಡ್ಯ ದಂಪತಿಗಳು ಮಕ್ಕಳ ಜೊತೆ ಆಟವಾಡಿದ್ದಾರೆ. ಹಲವು ಬಣ್ಣಗಳನ್ನು ಮುಖಕ್ಕೆ ಮೆತ್ತಿ ಮಕ್ಕಳು ಸಂಭ್ರಮ ಪಟ್ಟಿದ್ದಾರೆ. ಹಾರ್ದಿಕ್ ಪುತ್ರನ ಜೊತೆ ಇದೀಗ ಕ್ರುನಾಲ್ ಪಾಂಡ್ಯ ದಂಪತಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಈ ಮೂಲಕ ಹಾರ್ದಿಕ್ ಪುತ್ರನನ್ನು ಏಕಾಂಗಿತನದಿಂದ ದೂರವಿಡುವ ಪ್ರಯತ್ನ ಮಾಡಿದ್ದಾರೆ.
ಕ್ರುನಾಲ್ ಪಾಂಡ್ಯ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಾರ್ದಿಕ್ -ನತಾಶ ಜಗಳದಿಂದ ಮಗು ರೋದನೆ ಅನುಭವಿಸುವಂತಾಗಿದೆ. ವಿಚ್ಚೇದನ ಸುದ್ದಿ ಸುಳ್ಳಾಗಲಿ ಎಂದು ಹಲವು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ಹಾರ್ದಿಕ್ 4 ವರ್ಷಗಳ ಹಿಂದೆ ತಮ್ಮ ಗೆಳತಿ ನತಾಶಾ ಅವರನ್ನು ಮದುದೆಯಾಗಿದ್ದರು. ದಂಪತಿಗೆ ಒಂದು ಮಗುವಿದೆ. ಆದರೆ ಸದ್ಯ ಇಬ್ಬರೂ ಬೇರೆ ಬೇರೆಯಾಗುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ.
ಪತ್ನಿ ಹೇಳಿದ ಹಾಗೆ, 30 ಕೋಟಿಯ ಮನೆ ಸೇರಿ 90 ಕೋಟಿ ಆಸ್ತಿ ಹೊಂದಿರುವ ಹಾರ್ದಿಕ್ ಪಾಂಡ್ಯ ಬೀದಿಗೆ ಬೀಳ್ತಾರಾ?
ನತಾಶಾ ತಮ್ಮ ಇನ್‌ಸ್ಟಾಗ್ರಾಂ ಖಾತೆ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಪಾಂಡ್ಯ ಹೆಸರನ್ನು ಕಿತ್ತು ಹಾಕಿದ್ದಾರೆ. ಅಲ್ಲದೆ ಐಪಿಎಲ್ ವೇಳೆ ಕೂಡಾ ಕ್ರೀಡಾಂಗಣಗಳಲ್ಲೂ ನತಾಶಾ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ಬಿರುಕು ಬಿಟ್ಟಿದೆ ಎಂಬ ವದಂತಿ ಹರಿದಾಡುತ್ತಿದೆ. ಈ ಬಗ್ಗೆ ಹಾರ್ದಿಕ್ ಅಥವಾ ನತಾಶಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.