5 ವರ್ಷಗಳ ಬಳಿಕ ಮತ್ತೆ ಟೀಮ್ ಇಂಡಿಯಾಗೆ ಈ ಸ್ಟಾರ್ ವಾಪಸ್: ಅಕ್ಷರ್ ಪಟೇಲ್ ಸ್ಥಾನಕ್ಕೆ ಬಂತು ಕುತ್ತು

Published : Sep 01, 2026, 07:06 AM IST
Axar Patel

ಸಾರಾಂಶ

ಐಪಿಎಲ್ 2026ರಲ್ಲಿ ಆರ್‌ಸಿಬಿ ತಂಡವನ್ನು ಚಾಂಪಿಯನ್ ಮಾಡಿದ್ದ 35 ವರ್ಷದ ಕೃನಾಲ್ ಪಾಂಡ್ಯ 5 ವರ್ಷಗಳ ನಂತರ ಟೀಮ್ ಇಂಡಿಯಾಗೆ ಭರ್ಜರಿ ಕಮ್‌ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಅಕ್ಷರ್ ಪಟೇಲ್ ಕಳಪೆ ಫಾರ್ಮ್‌ನಿಂದಾಗಿ, 2028ರ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಕೃನಾಲ್ ಪಾಂಡ್ಯಗೆ ಮಣೆ ಹಾಕುವ ಸಾಧ್ಯತೆ ಇದೆ.

ಟೀಮ್ ಇಂಡಿಯಾದಲ್ಲಿ ಸದ್ಯ ಯುವ ಆಟಗಾರರ ಅಲೆ ಎದ್ದಿದೆ. ಈ ನಡುವೆ ಕೇಳಿಬರುತ್ತಿರುವ ಒಂದು ಸುದ್ದಿ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೀಡು ಮಾಡಿದೆ. ಕಳೆದ 5 ವರ್ಷಗಳಿಂದ ಭಾರತ ತಂಡದಿಂದ ಹೊರಗಿದ್ದ 35 ವರ್ಷದ ಹಿರಿಯ ಆಟಗಾರನೊಬ್ಬ ಮತ್ತೆ ನೀಲಿ ಜೆರ್ಸಿ ತೊಡಲು ಸಜ್ಜಾಗಿದ್ದಾರೆ. ಅವರು ಮತ್ಯಾರೂ ಅಲ್ಲ, ಆಲ್ ರೌಂಡರ್ ಕೃನಾಲ್ ಪಾಂಡ್ಯ!

ಕಮ್‌ಬ್ಯಾಕ್ ಮಾಡ್ತಾರಾ ಕೃನಾಲ್?

ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಕೊನೆಯ ಬಾರಿಗೆ 2021ರಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಪರ ಟಿ20 ಪಂದ್ಯ ಆಡಿದ್ದರು. ಅಲ್ಲಿಂದ ಈವರೆಗೆ ಅವರು ತಂಡದಿಂದ ಹೊರಗೇ ಉಳಿದಿದ್ದರು. ಆದರೆ ಈಗಿನ ವರದಿಗಳ ಪ್ರಕಾರ, ಟೀಮ್ ಮ್ಯಾನೇಜ್‌ಮೆಂಟ್ ಮತ್ತೆ ಈ ಅನುಭವಿ ಎಡಗೈ ಸ್ಪಿನ್ ಆಲ್ ರೌಂಡರ್ ಕಡೆಗೆ ಒಲವು ತೋರುತ್ತಿದೆ.

ಟೀಮ್ ಇಂಡಿಯಾದಲ್ಲಿ ಸದ್ಯ ಎಡಗೈ ಸ್ಪಿನ್ ಆಲ್ ರೌಂಡರ್ ಆಗಿ ಅಕ್ಷರ್ ಪಟೇಲ್ ಮೊದಲ ಆಯ್ಕೆಯಾಗಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಅಕ್ಷರ್ ಅವರ ಬ್ಯಾಟಿಂಗ್ ಪ್ರದರ್ಶನ ತೀರಾ ಕಳಪೆಯಾಗಿದೆ. ಈ ವರ್ಷ ಆಡಿರುವ 12 ಟಿ20 ಇನ್ನಿಂಗ್ಸ್‌ಗಳಲ್ಲಿ ಅಕ್ಷರ್ ಕೇವಲ 69 ರನ್ ಗಳಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗದ ಕಾರಣ, ಬದಲಿ ಆಟಗಾರನ ಹುಡುಕಾಟದಲ್ಲಿರುವ ಬಿಸಿಸಿಐಗೆ ಕೃನಾಲ್ ಪಾಂಡ್ಯ ಬೆಸ್ಟ್ ಆಪ್ಷನ್ ಆಗಿ ಕಾಣುತ್ತಿದ್ದಾರೆ.

RCB ಚಾಂಪಿಯನ್ ಆಗಲು ಕೃನಾಲ್ ಕೊಡುಗೆ

ಕೃನಾಲ್ ಪಾಂಡ್ಯ ಅವರ ಈ ಸಂಭಾವ್ಯ ಕಮ್‌ಬ್ಯಾಕ್‌ಗೆ ಮುಖ್ಯ ಕಾರಣ ಐಪಿಎಲ್ 2026ರ ಭರ್ಜರಿ ಪ್ರದರ್ಶನ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಮತ್ತೆ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಕೃನಾಲ್ ಪ್ರಮುಖ ಪಾತ್ರ ವಹಿಸಿದ್ದರು. ಐಪಿಎಲ್ 2026ರಲ್ಲಿ ಕೃನಾಲ್ ಬ್ಯಾಟಿಂಗ್‌ನಲ್ಲಿ 226 ರನ್ ಸಿಡಿಸಿದ್ದಲ್ಲದೆ, ಬೌಲಿಂಗ್‌ನಲ್ಲಿ 14 ವಿಕೆಟ್ ಪಡೆದು ಮಿಂಚಿದ್ದರು. ಈ ಅದ್ಭುತ ಫಾರ್ಮ್ ಈಗ ಟೀಮ್ ಇಂಡಿಯಾದ ಬಾಗಿಲು ತೆರೆಯುವಂತೆ ಮಾಡಿದೆ.

2028ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮತ್ತು ಒಲಿಂಪಿಕ್ಸ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡಕ್ಕೆ ಒಬ್ಬ ಪಕ್ಕಾ ಆಲ್ ರೌಂಡರ್ ಅವಶ್ಯಕತೆ ಇದೆ. ಕೃನಾಲ್ ಪಾಂಡ್ಯ ಅವರ ಅನುಭವ ಮತ್ತು ಈಗಿನ ಫಾರ್ಮ್ ನೋಡಿದರೆ, ಅವರು ಟೀಮ್ ಇಂಡಿಯಾದ ಫಿನಿಶರ್ ಮತ್ತು ಸ್ಪಿನ್ನರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲರು ಎಂಬ ನಂಬಿಕೆ ಮ್ಯಾನೇಜ್‌ಮೆಂಟ್‌ನಲ್ಲಿದೆ. ಒಟ್ಟಿನಲ್ಲ 35ನೇ ವಯಸ್ಸಿನಲ್ಲಿ ಕೃನಾಲ್ ಪಾಂಡ್ಯ ಟೀಮ್ ಇಂಡಿಯಾಗೆ ಮರಳಿ ಬಂದರೆ, ಅದು ಭಾರತೀಯ ಕ್ರಿಕೆಟ್‌ನ ಅತಿದೊಡ್ಡ ಕಮ್‌ಬ್ಯಾಕ್ ಸ್ಟೋರಿಗಳಲ್ಲಿ ಒಂದಾಗಲಿದೆ. ಅಕ್ಷರ್ ಪಟೇಲ್ ಸ್ಥಾನಕ್ಕೆ ಕೃನಾಲ್ ಕುತ್ತು ತರುತ್ತಾರಾ? ಕಾದು ನೋಡಬೇಕು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯುವಿ ಅಂತೆಯೇ ಸೇಮ್ ಟು ಸೇಮ್ : ಸೂರ್ಯವಂಶಿ ಬೌಲಿಂಗ್ ಸ್ಟೈಲ್‌ಗೆ ಸಿಕ್ಸರ್ ಕಿಂಗ್ ಕಾಮೆಂಟ್
ಪಾಕ್ ಕ್ರಿಕೆಟ್‌ನಲ್ಲಿ ಅಲ್ಲೋಲ ಕಲ್ಲೋಲ, ಇಂಗ್ಲೆಂಡ್‌ ಟೂರ್‌ ನಡುವೆಯೇ 6 ಪ್ಲೇಯರ್ಸ್‌ಗೆ ಗೇಟ್‌ಪಾಸ್‌