KPL ಫಿಕ್ಸಿಂಗ್‌ನಲ್ಲಿ IPL ನಂಟು; ತನಿಖೆಗೆ ಮುಂದಾದ ಸಿಸಿಬಿ!

By Web Desk  |  First Published Dec 8, 2019, 3:30 PM IST

ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿನ  ಫಿಕ್ಸಿಂಗ್ ಪ್ರಕರಣ ತೀವ್ರತೆ ಹೆಚ್ಚಾಗುತ್ತಿದೆ. ಫಿಕ್ಸಿಂಗ್ ನಂಟು ಗಡಿ ದಾಟುತ್ತಿದೆ. ಕೆಪಿಎಲ್ ಫಿಕ್ಸಿಂಗ್ ತನಿಖೆ ಮಾಡುತ್ತಿರುವ ಸಿಸಿಬಿ ಪೊಲೀಸರು IPL ಟೂರ್ನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ತನಿಖೆಗೆ ಮುಂದಾಗಿದ್ದಾರೆ.


ಬೆಂಗಳೂರು(ಡಿ.08): ಕೆಪಿಎಲ್ ಫಿಕ್ಸಿಂಕ್ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಬಳ್ಳಾರಿ ತಂಡದ ನಾಯಕ ಸಿಎಂ ಗೌತಮ್ ಹಾಗೂ ಅಬ್ರಾರ್ ಖಾಜಿ ಬಂಧನ ಬೆನ್ನಲ್ಲೇ ಕೆಪಿಎಲ್ ಫಿಕ್ಸಿಂಗ್ ಪ್ರಕರಣ ಕ್ರಿಕೆಟ್ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿತು.  ಸಿಸಿಬಿ ಪೊಲೀಸರು ಹಲವು ಕ್ರಿಕೆಟಿಗರು ಸೇರಿದಂತೆ ಫ್ರಾಂಚೈಸಿ ಮಾಲೀಕರನ್ನು ವಿಚಾರಣೆ ನಡೆಸಲಾಗಿದೆ. ಇದೀಗ ಕೆಪಿಎಲ್ ತನಿಖೆ ನಡೆಸುತ್ತಿರುವು ಬೆಂಗರೂರು ಸಿಸಿಬಿ ಪೊಲೀಸರು ಐಪಿಎಲ್ ತನಿಖೆಗೂ ಮುಂದಾಗಿದ್ದಾರೆ.

ಇದನ್ನೂ ಓದಿ: KPL ಮ್ಯಾಚ್ ಫಿಕ್ಸಿಂಗ್: ಪ್ರಮುಖ ಕ್ರಿಕೆಟಿಗರಿಗೆ ಗಂಡಾಂತರ..?.

Latest Videos

ಕೆಪಿಎಲ್ ಟೂರ್ನಿ ಫಿಕ್ಸಿಂಗ್ ಪ್ರಕರಣ, ದೇಶದಲ್ಲಿ ಅತೀ ದೊಡ್ಡ ಫಿಕ್ಸಿಂಗ್ ಪ್ರಕರಣವಾಗಿದೆ. ಇಷ್ಟಾದರೂ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ಮೌನ ವಹಿಸಿದೆ. 2013ರಲ್ಲಿ ಐಪಿಎಲ್ ಟೂರ್ನಿಯ ಬೆಟ್ಟಿಂಗ್ ಹಾಗೂ ಸ್ಫಾಟ್ ಫಿಕ್ಸಿಂಗ್ ಪ್ರಕರಣ ಬೆಳೆಕಿಗೆ ಬಂದಿತ್ತು. ಇದೀಗ 2ನೇ ಬಾರಿಗೆ ಕೆಪಿಎಲ್ ತನಿಖೆಯಲ್ಲಿ ಐಪಿಎಲ್ ನಂಟಿನ ಸಾಧ್ಯತೆಯನ್ನು ಸಿಸಿಬಿ ಪೊಲೀಸರಿಗೆ ಸುಳಿವು ಸಿಕ್ಕಿದೆ. ಹೀಗಾಗಿ ತನಿಖೆಯನ್ನು ಐಪಿಎಲ್ ವರೆಗೂ ವಿಸ್ತರಿಸುವ ಸಾಧ್ಯತೆ ಇದೆ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಹೇಳಿದ್ದಾರೆ.

ಇದನ್ನೂ ಓದಿ: KPL ಮ್ಯಾಚ್ ಫಿಕ್ಸಿಂಗ್: CCB ನೋಟಿಸ್, ಅಂತಾರಾಷ್ಟ್ರೀಯ ಕ್ರಿಕೆಟಿಗನ ಎದೆಯಲ್ಲಿ ಢವ ಢವ..!

ಐಪಿಎಲ್ ಟೂರ್ನಿಯನ್ನು ಅಗೌರವಿಂದ ಕಾಣುವ ಉದ್ದೇಶ ನಮ್ಮದಲ್ಲ. ಆದರೆ ಕೆಪಿಎಲ್ ಪ್ರಕರಣದ ತನಿಖೆ ವೇಳೆ ಬಿಸಿಸಿಐ ಬ್ರಷ್ಟಾಚಾರ ನಿಗ್ರಹ ಸುಮ್ಮನಿದೆ. ಹೀಗಾಗಿ ಕೆಪಿಎಲ್ ಆಟಗಾರರು ಐಪಿಎಲ್ ಟೂರ್ನಿಗಳಲ್ಲೂ ಕಾಣಿಸಿಕೊಕೊಂಡಿದ್ದಾರೆ. ಹೀಗಾಗಿ ಐಪಿಎಲ್ ತನಿಖೆಯ ಅವಶ್ಯಕತೆ ಹೆಚ್ಚಾಗುತ್ತಿದೆ ಎಂದು ರಾವ್ ಹೇಳಿದ್ದಾರೆ.

2013ರಲ್ಲಿ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಪ್ರಕರಣದಿಂದ ಟೀಂ ಇಂಡಿಯಾ ವೇಗಿ, ರಾಜಸ್ಥಾನ ರಾಯಲ್ಸ್ ತಂಡದ ಎಸ್ ಶ್ರೀಶಾಂತ್, ಅಜಿತ್ ಚಂಡೀಲಾ ಹಾಗೂ ಅಂಕಿತ್ ಚವ್ಹಾಮ್ ಬಂಧನಕ್ಕೊಳಗಾಗಿದ್ದರು. ಇಷ್ಟೇ ಅಲ್ಲ ಮೂವರು ಕ್ರಿಕೆಟಿಗರಿಗೆ ಬಿಸಿಸಿಐ ನಿಷೇಧದ ಶಿಕ್ಷೆ ವಿಧಿಸಿತು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕನ್ಸಲ್‌ಟೆಂಟ್, ಮಾಜಿ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಹಾಗೂ ರಾಜಸ್ಥಾನ ರಾಯಲ್ಸ್ ಸಹಮಾಲೀಕ ರಾಜ್ ಕುಂದ್ರಾ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವುದು ಸಾಬೀತಾಗಿತ್ತು. ಹೀಗಾಗಿ ಸಿಎಸ್‌ಕೆ ಹಾಗೂ ರಾಜಸ್ಥಾನ ರಾಯಲ್ಸ್ 2 ವರ್ಷ ಅಮಾನತ್ತಾಗಿತ್ತು. 

ಡಿಸೆಂಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!