
ಬೆಂಗಳೂರು(ಅ.23): ಕೆಪಿಎಲ್ ಬೆಟ್ಟಿಂಗ್ ಪ್ರಕರಣದ ತನಿಖೆಯ ಬಿಸಿ ಬೆಳಗಾವಿ ತಂಡದ ನಂತರ ಇದೀಗ ಬಳ್ಳಾರಿ ಹಾಗೂ ಬಿಜಾಪುರ ತಂಡಕ್ಕೂ ತಟ್ಟಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಬಳ್ಳಾರಿ ಟಸ್ಕರ್ಸ್ ತಂಡದ ಮಾಲಿಕ ಅರವಿಂದ ವೆಂಕಟೇಶ್ ರೆಡ್ಡಿ ಅವರನ್ನು ಮಂಗಳವಾರ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: KPL ಸ್ಪಾಟ್ ಫಿಕ್ಸಿಂಗ್ ಯತ್ನಿಸಿದ್ದ ಬುಕ್ಕಿ ಬಂಧನ..!
ಬಿಜಾಪುರ ಬುಲ್ಸ್ ತಂಡದ ಡ್ರಮ್ಮರ್ ಭವೇಶ್ ಬಾಫ್ನಾ, ಕೆಪಿಎಲ್ ಪಂದ್ಯಾವಳಿಯ ಮ್ಯಾಚ್ ಫಿಕ್ಸಿಂಗ್‌ಗಾಗಿ ಬಳ್ಳಾರಿ ಟಸ್ಕರ್ಸ್‌ನ ಬೌಲರ್ ಭವೇಶ್ ಗುಲೇಚಾರನ್ನು ಸಂಪರ್ಕಿಸಿದ್ದ. ಪ್ರತಿ ಓವರ್‌ಗೆ 10 ರನ್ ನೀಡಿದರೆ ಎರಡು ಲಕ್ಷ ರು. ಹಾಗೂ ಐಪಿಎಲ್ ಪಂದ್ಯಾವಳಿಯಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿದ್ದ.
ಇದನ್ನೂ ಓದಿ:ಕೆಪಿಎಲ್ ಬೆಟ್ಟಿಂಗ್: ಬೆಳಗಾವಿ ತಂಡದ ಮಾಲೀಕನ ಬಂಧನ
ಮ್ಯಾಚ್ ಫಿಕ್ಸಿಂಗ್ ಕುರಿತು ಇಬ್ಬರ ಮಧ್ಯೆ ನಡೆದಿರುವ ಸಂಭಾಷಣೆ ಬಗ್ಗೆ ಬಳ್ಳಾರಿ ಟಸ್ಕರ್ಸ್ ತಂಡದ ಮಾಲಿಕನಿಗೆ ತಿಳಿದಿದೆಯೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಆರೋಪಿ ಬಾಫ್ನಾ ಜತೆ ಹಲವು ಮಂದಿ ನಂಟು ಹೊಂದಿರುವ ಶಂಕೆ ಇದೆ. ಕೆಪಿಎಲ್ ಪಂದ್ಯಾವಳಿಯ ಎಲ್ಲ ತಂಡದ ಮಾಲಿಕರನ್ನು ವಿಚಾರಣೆ ನಡೆಸಲಾಗುವುದು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: KPL ಫಿಕ್ಸಿಂಗ್; ನಾಲ್ವರು ಕ್ರಿಕೆಟಿಗರಿಗೆ CCB ಸಮನ್ಸ್!
ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅರವಿಂದ ವೆಂಕಟೇಶ್ ರೆಡ್ಡಿ, ಮ್ಯಾಚ್ ಫಿಕ್ಸಿಂಗ್‌ಗೆ ಬೌಲರ್ ಗುಲೇಚಾರನ್ನು ಸಂಪರ್ಕಿಸಿರುವ ವಿಚಾರ ಗೊತ್ತಿಲ್ಲ. ಬಿಜಾಪುರ ಬುಲ್ಸ್ ತಂಡದ ಡ್ರಮ್ಮರ್ ಬಾಫ್ನಾ ಎಂಬುವನನ್ನು ಬಂಧಿಸಿದ ಬಳಿಕ ವಿಚಾರ ತಿಳಿಯಿತು. ಸಿಸಿಬಿ ಪೊಲೀಸರ ತನಿಖೆಗೆ ಸಹಕರಿಸುತ್ತೇನೆ ಎಂದು ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.