ಹಾಲಿ ಚಾಂಪಿಯನ್ ಚೆನ್ನೈ ಚೆಂಡಾಡಿ ಗೆದ್ದ ಗುಜರಾತ್ ಟೈಟಾನ್ಸ್..!

Published : May 11, 2024, 06:42 AM IST
ಹಾಲಿ ಚಾಂಪಿಯನ್ ಚೆನ್ನೈ ಚೆಂಡಾಡಿ ಗೆದ್ದ ಗುಜರಾತ್ ಟೈಟಾನ್ಸ್..!

ಸಾರಾಂಶ

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 3 ವಿಕೆಟ್‌ಗೆ ಬರೋಬ್ಬರಿ 231 ರನ್‌ ಚಚ್ಚಿತು. ಕೆಲ ಹೋರಾಟದ ಹೊರತಾಗಿಯೂ ಚೆನ್ನೈ 196 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ರಹಾನೆ(01), ರಚಿನ್‌(01), ಋತುರಾಜ್‌(00)ರ ವೈಫಲ್ಯ ತಂಡವನ್ನು ಆರಂಭದಲ್ಲೇ ಕುಗ್ಗಿಸಿತು.

ಅಹಮದಾಬಾದ್‌: ಗುಜರಾತ್‌ನ ಸಾಯಿ ಸುದರ್ಶನ್‌, ಶುಭ್‌ಮನ್‌ ಗಿಲ್‌ರ ಮನಮೋಹಕ ಶತಕದಾಟ, ಬೌಲರ್‌ಗಳ ಶಿಸ್ತುಬದ್ಧ ದಾಳಿ ಮುಂದೆ ಕಂಗಾಲಾದ ಹಾಲಿ ಚಾಂಪಿಯನ್‌ ಚೆನ್ನೈ 17ನೇ ಆವೃತ್ತಿ ಐಪಿಎಲ್‌ನಲ್ಲಿ 6ನೇ ಸೋಲಿನ ಮುಖಭಂಗಕ್ಕೊಳಗಾಗಿದೆ. ನಿರ್ಣಾಯಕ ಘಟ್ಟದಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಹೀನಾಯ ಪ್ರದರ್ಶನ ತೋರಿದ ಚೆನ್ನೈ 35 ರನ್‌ಗಳಿಂದ ಪರಾಭವಗೊಂಡಿತು. ಇದರೊಂದಿಗೆ ತಂಡದ ಪ್ಲೇ-ಆಫ್‌ ಹಾದಿ ಕಠಿಣಗೊಂಡಿದ್ದು, 5ನೇ ಜಯ ದಾಖಲಿಸಿದ ಗುಜರಾತ್‌ ಪ್ಲೇ-ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 3 ವಿಕೆಟ್‌ಗೆ ಬರೋಬ್ಬರಿ 231 ರನ್‌ ಚಚ್ಚಿತು. ಕೆಲ ಹೋರಾಟದ ಹೊರತಾಗಿಯೂ ಚೆನ್ನೈ 196 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ರಹಾನೆ(01), ರಚಿನ್‌(01), ಋತುರಾಜ್‌(00)ರ ವೈಫಲ್ಯ ತಂಡವನ್ನು ಆರಂಭದಲ್ಲೇ ಕುಗ್ಗಿಸಿತು. ಬಳಿಕ ಡ್ಯಾರಿಲ್‌ ಮಿಚೆಲ್‌(34 ಎಸೆತಗಳಲ್ಲಿ 63) ಹಾಗೂ ಮೊಯೀನ್‌ ಅಲಿ(36 ಎಸೆತಗಳಲ್ಲಿ 56) 4ನೇ ವಿಕೆಟ್‌ಗೆ 109 ರನ್‌ ಜೊತೆಯಾಟವಾಡಿದರು. ಇವರಿಬ್ಬರ ನಿರ್ಗಮನದ ಬಳಿಕ ಬೇರೆ ಯಾರಿಗೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

BCCI ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಕೈಬಿಡಲು ಈತನೇ ಕಾರಣ: ಜಯ್ ಶಾ

ಬ್ಯಾಟಿಂಗ್‌ ಶೋ: ಗುಜರಾತ್‌ ಈ ಪಂದ್ಯದಲ್ಲಿ ಚೆನ್ನೈ ಬೌಲರ್‌ಗಳನ್ನು ಅಕ್ಷರಶಃ ಚೆಂಡಾಡಿತು. ಸುದರ್ಶನ್‌-ಗಿಲ್‌ ಮೊದಲ ವಿಕೆಟ್‌ಗೇ ಸೇರಿಸಿದ್ದು 210 ರನ್‌. ಸುದರ್ಶನ್‌ 51 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್‌ನೊಂದಿಗೆ 103 ರನ್‌ ಸಿಡಿಸಿದರೆ, ಗಿಲ್‌ 55 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್‌ನೊಂದಿಗೆ 104 ರನ್‌ ಬಾರಿಸಿದರು. ತುಷಾರ್‌ 2 ವಿಕೆಟ್‌ ಕಿತ್ತರು.

ಸ್ಕೋರ್‌:

ಗುಜರಾತ್‌ 20 ಓವರಲ್ಲಿ 231/3 (ಗಿಲ್‌ 104, ಸುದರ್ಶನ್‌ 103, ತುಷಾರ್‌ 2-33), 
ಚೆನ್ನೈ 20 ಓವರಲ್ಲಿ 196/8 (ಡ್ಯಾರಿಲ್‌ 63, ಅಲಿ 56, ಮೋಹಿತ್‌ 3-31)

ಐಪಿಎಲ್‌ನಲ್ಲಿ 100 ಶತಕ

ಶುಭಮನ್‌ ಗಿಲ್‌ ಶತಕ ಸಿಡಿಸುವುದರೊಂದಿಗೆ ಐಪಿಎಲ್‌ನಲ್ಲಿ 100 ಶತಕ ಪೂರ್ಣಗೊಂಡಿತು. 2008ರಲ್ಲಿ ಆರ್‌ಸಿಬಿ ವಿರುದ್ಧ ಕೋಲ್ಕತಾದ ಬ್ರೆಂಡಾನ್‌ ಮೆಕಲಂ ಐಪಿಎಲ್‌ನ ಮೊದಲ ಶತಕ ಬಾರಿಸಿದ್ದರು. 100 ಶತಕ ದಾಖಲಾದ 2ನೇ ಟಿ20 ಲೀಗ್‌ ಐಪಿಎಲ್‌. ಇಂಗ್ಲೆಂಡ್‌ ಟಿ20 ಕಪ್‌ನ 21 ಆವೃತ್ತಿಗಳಲ್ಲಿ 157 ಶತಕಗಳು ದಾಖಲಾಗಿವೆ.

06ನೇ ಶತಕ: ಗಿಲ್‌ ಟಿ20 ಕ್ರಿಕೆಟ್‌ನಲ್ಲಿ 6ನೇ ಶತಕ ಬಾರಿಸಿದರು. ಐಪಿಎಲ್‌ನಲ್ಲಿದು ಅವರ 4ನೇ ಶತಕ.

02ನೇ ಬಾರಿ: ಐಪಿಎಲ್‌ನಲ್ಲಿ ಮೊದಲ ವಿಕೆಟ್‌ಗೆ ದ್ವಿಶತಕ ಜೊತೆಯಾಟ ಮೂಡಿಬಂದಿದ್ದು ಇದು 2ನೇ ಬಾರಿ.

02ನೇ ಬಾರಿ: ಐಪಿಎಲ್‌ನಲ್ಲಿ ಆರಂಭಿಕರಿಬ್ಬರು ಶತಕ ಬಾರಿಸಿದ್ದು 2ನೇ ಬಾರಿ. 2019ರಲ್ಲಿ ಆರ್‌ಸಿಬಿ ವಿರುದ್ಧ ಹೈದ್ರಾಬಾದ್‌ನ ಬೇರ್‌ಸ್ಟೋವ್‌-ವಾರ್ನರ್‌ ಶತಕ ಗಳಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌