IPL 2022 Play-Offs: ಅಹಮದಾಬಾದ್‌, ಕೋಲ್ಕತಾ ಆತಿಥ್ಯ?

Published : Apr 13, 2022, 08:25 AM IST
IPL 2022 Play-Offs: ಅಹಮದಾಬಾದ್‌, ಕೋಲ್ಕತಾ ಆತಿಥ್ಯ?

ಸಾರಾಂಶ

* ಭರ್ಜರಿಯಾಗಿ ಸಾಗುತ್ತಿದೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿ * ಐಪಿಎಲ್ ಲೀಗ್ ಹಂತದ ಪಂದ್ಯಗಳಿಗೆ ಮಹಾರಾಷ್ಟ್ರದ 4 ಸ್ಟೇಡಿಯಂಗಳು ಆತಿಥ್ಯ * ಪ್ಲೇ ಆಫ್ ಪಂದ್ಯಗಳಿಗೆ ಕೋಲ್ಕತಾ ಹಾಗೂ ಅಹಮದಾಬಾದ್ ಆತಿಥ್ಯ ಸಾಧ್ಯತೆ

ಮುಂಬೈ(ಏ.13): 15ನೇ ಆವೃತ್ತಿಯ ಐಪಿಎಲ್‌ ಫೈನಲ್‌ (IPL 2022 Play Offs Match) ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ (Narendra Modi Stadium) ಆತಿಥ್ಯ ವಹಿಸಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೆಲ ದಿನಗಳಲ್ಲಿ ಐಪಿಎಲ್‌ ಆಡಳಿತ ಮಂಡಳಿ ಸಭೆ ನಡೆಸಲಿದ್ದು, ಬಳಿಕ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ. ಈ ಬಾರಿ ಲೀಗ್‌ ಹಂತದ ಎಲ್ಲಾ ಪಂದ್ಯಗಳು ಮಹಾರಾಷ್ಟ್ರದ 4 ಕ್ರೀಡಾಂಗಣಗಳಲ್ಲಿ ನಡೆಯುತ್ತಿದೆ. ಆದರೆ ಮೊದಲ ಕ್ವಾಲಿಫೈಯರ್‌, ಎಲಿಮಿನೇಟರ್‌ ಪಂದ್ಯ ಕೋಲ್ಕತಾದ ಈಡನ್‌ ಗಾರ್ಡನ್‌ನಲ್ಲಿ ಹಾಗೂ 2ನೇ ಕ್ವಾಲಿಫೈಯರ್‌, ಫೈನಲ್‌ ಪಂದ್ಯ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.

ಎಲ್ಲವೂ ಅಂದುಕೊಂಡಂತೆ ಸಾಗಿದರೆ, 2019ರ ಬಳಿಕ ಇದೇ ಮೊದಲ ಬಾರಿಗೆ ಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನ (Eden Gardens Stadium) ಐಪಿಎಲ್ ಪಂದ್ಯಗಳಿಗೆ ಸಾಕ್ಷಿಯಾಗಲಿದೆ. 2020ರ ಸಂಪೂರ್ಣ ಐಪಿಎಲ್ ಟೂರ್ನಿಯು ಕೋವಿಡ್ ಭೀತಿಯಿಂದಾಗಿ ಯುಎಇನಲ್ಲಿ ನಡೆದಿತ್ತು. ಇನ್ನು 2021ರ ಐಪಿಎಲ್ ಟೂರ್ನಿಯ ವೇಳಾಪಟ್ಟಿಯಂತೆ ಲೀಗ್ ಹಂತದ ಕೊನೆಯ ಪಂದ್ಯಗಳನ್ನು ಕೋಲ್ಕತಾದಲ್ಲಿ ನಡೆಯಲು ವೇಳಾಪಟ್ಟಿ ಸಿದ್ದಪಡಿಸಲಾಗಿತ್ತು. ಆದರೆ ಬಯೋಬಬಲ್‌ ನೊಳಗೆ ಕೋವಿಡ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮತ್ತೆ ಯುಎಇಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಕಳೆದೆರಡು ವರ್ಷಗಳಿಂದ ಐಪಿಎಲ್‌ ಪಂದ್ಯಗಳು ಕೋಲ್ಕತಾದಲ್ಲಿ ನಡೆದಿರಲಿಲ್ಲ.

ಐಪಿಎಲ್‌ ಆಡಲು ಬಂದ ಆಟಗಾರರಿಗೆ ಎಲ್ಗರ್‌ ಎಚ್ಚರಿಕೆ!

ಕೇಪ್‌ಟೌನ್‌: ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಸರಣಿ ಬಿಟ್ಟು ಐಪಿಎಲ್‌ನಲ್ಲಿ ಆಡಲು ಭಾರತಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ಆಟಗಾರರಾದ ಕಗಿಸೋ ರಬಾಡ, ಎನ್‌ಗಿಡಿ, ಮಾರ್ಕೊ ಯಾನ್ಸನ್‌, ವಾನ್‌ ಡೆರ್‌ ಡುಸ್ಸೆನ್‌, ಏಯ್ಡನ್ ಮಾರ್ಕ್ರಮ್‌ ಹಾಗೂ ಏನ್ರಿಚ್ ನೋಕಿಯಗೆ ಈಗ ಸಂಕಷ್ಟಎದುರಾಗಿದೆ. ಆಟಗಾರರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಟೆಸ್ಟ್‌ ತಂಡದ ನಾಯಕ ಡೀನ್‌ ಎಲ್ಗರ್‌, ‘ಅವರು ಮತ್ತೆ ತಂಡಕ್ಕೆ ಆಯ್ಕೆಯಾಗುತ್ತಾರೋ ಇಲ್ಲವೋ ಗೊತ್ತಿಲ್ಲ. ಅವರ ಆಯ್ಕೆ ನನ್ನ ಕೈಯಲಿಲ್ಲ ಎಂದಿದ್ದಾರೆ. ಅಲ್ಲದೇ, ಎಲ್ಗರ್‌ ಮಾತಿಗೆ ಕೋಚ್‌ ಮಾರ್ಕ್ ಬೌಷರ್‌ ಕೂಡಾ ಧ್ವನಿಗೂಡಿಸಿದ್ದು ಆಟಗಾರರ ಆತಂಕಕ್ಕೆ ಕಾರಣವಾಗಿದೆ.

IPL 2022 ವ್ಯರ್ಥವಾದ ಆರ್ ಸಿಬಿ ಹೋರಾಟ, ಮೊದಲ ಗೆಲುವು ಕಂಡ ಚೆನ್ನೈ

ಗಾಯಾಳು ವಾಷಿಂಗ್ಟನ್‌ 2 ಪಂದ್ಯಗಳಿಗೆ ಅಲಭ್ಯ

ನವಿ ಮುಂಬೈ: ಕೈ ಬೆರಳಿನ ಗಾಯಕ್ಕೆ ತುತ್ತಾಗಿರುವ ಸನ್‌ರೈಸ​ರ್ಸ್ಸ್‌ ಹೈದರಾಬಾದ್‌ ತಾರಾ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಐಪಿಎಲ್‌ನ ಮುಂದಿನ 2 ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ತಂಡದ ಪ್ರಧಾನ ಕೋಚ್‌ ಟಾಮ್‌ ಮೂಡಿ ಮಂಗಳವಾರ ತಿಳಿಸಿದ್ದಾರೆ. ಸೋಮವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದ ವೇಳೆ ವಾಷಿಂಗ್ಟನ್‌ ಗಾಯಗೊಂಡಿದ್ದಾರೆ. ದೊಡ್ಡ ಪ್ರಮಾಣದ ಗಾಯ ಅಲ್ಲದಿದ್ದರೂ ಚೇತರಿಕೆಗೆ ಒಂದು ವಾರ ಬೇಕಾಗಬಹುದು ಎಂದು ಅವರು ಹೇಳಿದ್ದಾರೆ. ವಾಷಿಂಗ್ಟನ್‌ ಈ ಆವೃತ್ತಿಯಲ್ಲಿ ಆಡಿದ 4 ಪಂದ್ಯಗಳಲ್ಲಿ 4 ವಿಕೆಟ್‌ ಪಡೆದು, 58 ರನ್‌ ಗಳಿಸಿದ್ದಾರೆ.

ಚಹರ್‌ಗೆ ಬೆನ್ನು ನೋವು: ಐಪಿಎಲ್‌ನಿಂದ ಹೊರಕ್ಕೆ

ಮುಂಬೈ: ತೊಡೆ ಗಾಯದಿಂದ ಚೇತರಿಕೆ ಕಾಣುತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಪ್ರಮುಖ ವೇಗಿ ದೀಪಕ್‌ ಚಹರ್‌, ಬೆನ್ನು ನೋವಿಗೆ ಗುರಿಯಾಗಿದ್ದು 15ನೇ ಆವೃತ್ತಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಇದರಿಂದ ಚಹರ್‌ ಆಗಮನಕ್ಕೆ ಕಾಯುತ್ತಿದ್ದ ಚೆನ್ನೈ ತಂಡಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಅವರು ಏಪ್ರಿಲ್‌ 2ನೇ ವಾರದಲ್ಲಿ ತಂಡ ಕೂಡಿಕೊಳ್ಳುವ ನಿರೀಕ್ಷೆ ಇತ್ತು. ಹರಾಜಿನಲ್ಲಿ ಚಹರ್‌ರನ್ನು ಚೆನ್ನೈ 14 ಕೋಟಿ ರು. ನೀಡಿ ಖರೀದಿಸಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?