T20 World Cup: Virat Kohli ನಾಯಕತ್ವ ಶ್ಲಾಘಿಸಿದ ಕೆ ಎಲ್‌ ರಾಹುಲ್!‌‌

By Suvarna NewsFirst Published Nov 9, 2021, 6:39 PM IST
Highlights

*ವಿರಾಟ್‌ ಕೊಹ್ಲಿ ಉದಾಹರಣೆಗಳ ಮೂಲಕ ತಂಡ ಮುನ್ನಡೆಸಿದ್ದಾರೆ
*ವಿಶ್ವಕಪ್‌ನಲ್ಲಿ ನಮಗೆ ಉತ್ತಮ ಫಲಿತಾಂಶ  ದೊರಕಿಲ್ಲ
*ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು : ರಾಹುಲ್

ದುಬೈ(ನ 9 ) : ಸೋಮವಾರ ನಡೆದ ಪಂದ್ಯದಲ್ಲಿ ನಮೀಬಿಯಾ (India Vs Namibia) ವಿರುದ್ಧ ಗೆಲುವಿನೊಂದಿಗೆ  T20 World Cup 2021 ಟೂರ್ನಿಗೆ ಟೀಂ ಇಂಡಿಯಾ ವಿದಾಯ ಹೇಳಿತ್ತು. ಇತ್ತ ವಿರಾಟ್ ಕೊಹ್ಲಿ (Virat Kohli) ಕೂಡ ಗೆಲವಿನೊಂದಿಗೆ ಟಿ20 ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ನಮೀಬಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ(Team india) 9 ವಿಕೆಟ್ ಗೆಲುವು ಸಾಧಿಸಿತ್ತು. ಪಂದ್ಯದ ಒಂದು ದಿನ ಬಳಿಕ ಸಾಮಾಜಿಕ ಮಾಧ್ಯಮದ (Social Media) ಮೂಲಕ ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್ ಕೆ ಎಲ್‌ ರಾಹುಲ್‌ (K L Rahul) ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ಮೂಲಕ ವಿಶ್ವಕಪ್‌ಗೆ ವಿದಾಯ ಹೇಳಿರುವ ಭಾರತಕ್ಕೆ ಭಾವನಾತ್ಮಕ ಸಂದೇಶ ನೀಡಿದ್ದಾರೆ

ವಿಶ್ವಕಪ್‌ನಲ್ಲಿ ನಮಗೆ ಉತ್ತಮ ಫಲಿತಾಂಶ  ದೊರಕಿಲ್ಲ

ಇನ್ಸ್ಟಾಗ್ರಾಮ ನಲ್ಲಿ (Instagram) ಪೋಸ್ಟ್‌ ಮಾಡಿರುವ ಕೆ ಎಲ್‌ ರಾಹುಲ್‌ " ವಿಶ್ವಕಪ್‌ನಲ್ಲಿ ನಮಗೆ ಉತ್ತಮ ಫಲಿತಾಂಶ  ದೊರಕಿಲ್ಲ.  ಅದರೆ ಇದರಿಂದ ನಾವು ಕಲಿತು ಪ್ರಗತಿ ಸಾಧಿಸುತ್ತೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ನಾವು ಕ್ರಿಕೆಟಿಗರಾಗಿ ಬೆಳೆಯಲು ಸಹಾಯ ಮಾಡಿದ ನಮ್ಮ ಕೋಚ್‌ಗಳಿಗೆ (Coach) ಧನ್ಯವಾದಗಳು ಎಂದು ಹೇಳಿದ್ದಾರೆ. ಜತಗೆ ವಿರಾಟ್ ಕೊಹ್ಲಿ ಬಗ್ಗೆ ಬರೆದಿರುವ ಕೆ ಎಲ್‌ ರಾಹುಲ್‌ ವಿರಾಟ್‌ ಕೊಹ್ಲಿ ಉದಾಹರಣೆಗಳ ಮೂಲಕವೇ ಉತ್ತಮ ನಾಯಕತ್ವವನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ. "ನೀವು (ವಿರಾಟ್‌ ಕೊಹ್ಲಿ) ನಮಗಾಗಿ ಮಾಡಿರುವ ಎಲ್ಲ ಕಾರ್ಯಕ್ಕೂ ಧನ್ಯವಾದಗಳು" ಎಂದು ರಾಹುಲ್‌ ಹೇಳಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by KL Rahul👑 (@rahulkl)

 

ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದ ಟೀಂ ಇಂಡಿಯಾ

ವಿಶ್ವಕಪ್‌ ಆರಂಭದ ಸೂಪರ್‌ 12 ರ ಮೊದಲೆರಡು ಪಂದ್ಯಗಳಲ್ಲಿ ಭಾರತ, ಪಾಕಿಸ್ತಾನ (Pakistan) ಹಾಗೂ ನ್ಯೂಜಿಲೆಂಡ್ (New Zealand) ವಿರುದ್ಧ ಸೋಲನುಭವಿಸಿತ್ತು. ಇದಾದ ಬಳಿಕ ಆಡಿದ ಮೂರು ಪಂದ್ಯಗಳಲ್ಲಿ ಚೇತರಿಸಿಕೊಂಡ ಟೀಂ ಇಂಡಿಯಾ ಅಫ್ಘಾನಿಸ್ತಾನ, ಸ್ಕಾಟ್ಲೆಂಡ್‌ ಹಾಗೂ ನಮೀಬಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಗೆಲುವಿನ ನಗೆ ಬೀರಿತ್ತು. ಅದರೆ ಭಾರತದ ಸೆಮೀಸ್‌ ಭವಿಷ್ಯವನ್ನು ನಿರ್ಧರಿಸಲಿದ್ದ ಅಫ್ಘಾನಿಸ್ತಾನ-ನ್ಯೂಜಿಲೆಂಡ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಗೆಲುವಿನ ಮೂಲಕ ಭಾರತದ ಸೆಮೀಸ್ (Semifinal) ಕನಸು ನುಚ್ಚುನೂರಾಗಿತ್ತು.‌

IPL 2022: RCB ತಂಡದಲ್ಲಿ ಮಹತ್ವದ ಬದಲಾವಣೆ, ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ನೇಮಕ!

ಟಿ20 ನಾಯಕನಾಗಿ (Captian) ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ನಮಿಬಿಯಾ(Namibia) ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತ್ತು. ನಮಿಬಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ(Team india) 9 ವಿಕೆಟ್ ಗೆಲುವು ಸಾಧಿಸಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದ ಕೊಹ್ಲಿ ಸೈನ್ಯ(Virat Kohli) ಭಾರವಾದ ಹೆಜ್ಜೆ ಇಟ್ಟಿತ್ತು. 133 ರನ್ ಸುಲಭ ಟಾರ್ಗೆಟ್ ಪಡೆದ ಟೀಂ ಇಂಡಿಯಾಗೆ ಕೆಎಲ್ ರಾಹುಲ್(KL Rahul) ಹಾಗೂ ರೋಹಿತ್ ಶರ್ಮಾ(Rohit Sharma) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 86 ರನ್ ಸಿಡಿಸಿತು ಕೆಎಲ್ ರಾಹುಲ್ ಅವರು ನಮೀಬಿಯಾ ವಿರುದ್ಧ ಅಜೇಯ 54 ರನ್ ಗಳಿಸುವ ಮೂಲಕ ತಂಡದ ಗೆಲುವಿಗಾಗಿ ಕೊಡುಗೆ ನೀಡಿದರು.

ದೊಡ್ಡ ಭಾರ ಕೆಳಗಿಳಿಸಿದ ಅನುಭವವಾಗುತ್ತಿದೆ

ಗೆಲುವಿನ ಬಳಿಕ ಮಾತನಾಡಿದ್ದ ಕ್ಯಾಪ್ಟನ್ ವಿರಾಟ್ ಕೊಹ್ಲಿ,‌ ಟೀಂ ಇಂಡಿಯಾವನ್ನು ಮುನ್ನಡೆಸಲು ಸಿಕ್ಕಿದ ಅವಕಾಶ ನನಗೆ ಹೆಮ್ಮೆಯ (Proud) ವಿಚಾರವಾಗಿದೆ, ದೊಡ್ಡ ಭಾರ ಕೆಳಗಿಳಿಸಿದ ಅನುಭವವಾಗುತ್ತಿದೆ. ಮೂರು ಮಾದಿರಯಲ್ಲಿನ ಕೆಲಸದ ಒತ್ತಡದಿಂದ ಟಿ20 ನಾಯಕತ್ವವನ್ನು ತ್ಯಜಿಸಿದ್ದೇನೆ. ಕಳೆದ 6, 7 ವರ್ಷ ಕೆಲಸದ ಒತ್ತಡ ಹೆಚ್ಚಾಗಿತ್ತು. ಈ ಒತ್ತಡ ಕಡಿಮೆ ಮಾಡಲು ನಾಯಕತ್ವಕ್ಕೆ ತ್ಯಜಿಸಿದ್ದೇನೆ. ಟೂರ್ನಿಯಲ್ಲಿ ಉತ್ತಮ ಹೋರಾಟ ನೀಡಿದ್ದೇವೆ, ಆದರೆ ನಾವು ನಿರೀಕ್ಷಿಸಿದ ಫಲಿತಾಂಶ ಸಿಗಲಿಲ್ಲ ಎಂದು ಹೇಳಿದರು. 

Rahul Dravid ಶ್ರೇಷ್ಠ ತಂಡವೊಂದನ್ನು ಮುನ್ನಡೆಸಲಿದ್ದಾರೆ : ರವಿ ಶಾಸ್ತ್ರಿ!

ತಂಡದ ಸಹ ಆಟಗಾರರಿಂದ ನನ್ನ ಕೆಲಸದ ಒತ್ತಡ ಕಡಿಮೆಯಾಗಿದೆ. ಆರಂಭಿಕ 2 ಪಂದ್ಯದಲ್ಲಿ ನಾವು ಆಕ್ರಮಣಕಾರಿ ಆಟ ಪ್ರದರ್ಶಿಸಲು ಸಾಧ್ಯವಾಗಿಲ್ಲ. ಅದು ಟೂರ್ನಿಯ ಫಲಿತಾಂಶದ ಮೇಲೆ ಪರಿಣಾಮ ಬೀರಿತು. ಕೋಚ್ ರವಿ ಶಾಸ್ತ್ರಿ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಧನ್ಯವಾದ. ನಾನು ಆಕ್ರಣಕಾರಿ ಆಟವನ್ನು ಬದಲಾಯಿಸುವುದಿಲ್ಲ. ಯಾವತ್ತು ಬದಲಾಯಿಸುತ್ತೇನೆ ಅಂದು ಕ್ರಿಕೆಟ್ ಆಡುವುದನ್ನು ನಿಲ್ಲಿಸುತ್ತೇನೆ. ಟೂರ್ನಿ ಉತ್ತಮ ನೆನಪುಗಳನ್ನು ಕಟ್ಟಿಕೊಟ್ಟಿದೆ ಎಂದು ಕೊಹ್ಲಿ ಹೇಳಿದ್ದಾರೆ.  

click me!