IPL 2022: RCB ತಂಡದಲ್ಲಿ ಮಹತ್ವದ ಬದಲಾವಣೆ, ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ನೇಮಕ!

Published : Nov 09, 2021, 05:19 PM IST
IPL 2022: RCB ತಂಡದಲ್ಲಿ ಮಹತ್ವದ ಬದಲಾವಣೆ, ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ನೇಮಕ!

ಸಾರಾಂಶ

IPL 2022 ಟೂರ್ನಿಗೆ ತಂಡದಲ್ಲಿ ಹಲವು ಬದಲಾವಣೆಗಳು ಖಚಿತ ಮೊದಲ ಅಂಗವಾಗಿ ಪ್ರಧಾನ ಕೋಚ್ ಆಗಿ ಸಂಜಯ್ ಬಂಗಾರ್ ನೇಮಕ ಹರಾಜಿನಲ್ಲಿ ತಂಡದ ಬಹುತೇಕ ಆಟಗಾರರು ಅದಲು ಬದಲು

ಬೆಂಗಳೂರು(ನ.09):  T20 World Cup 2021 ಟೂರ್ನಿಯಲ್ಲಿ ಟೀಂ ಇಂಡಿಯಾ ಹೋರಾಟ ಅಂತ್ಯಗೊಂಡಿದೆ. ಇದೀಗ ಬಿಸಿಸಿಐ ಮುಂಬರವು ಐಪಿಎಲ್ ಟೂರ್ನಿಯತ್ತ ಚಿತ್ತ ಹರಿಸಿದೆ. ಇತ್ತ ಫ್ರಾಂಚೈಸಿ IPL 2022 ಟೂರ್ನಿಗೆ ತಯಾರಿ ಆರಂಭಿಸಿದೆ. ಮುಂದಿನ ತಿಂಗಳು ನಡೆಯಲಿರುವ ಆಟಗಾರರ ಹರಾಜಿಗೆ ಕಸರತ್ತು ಆರಂಭಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಭಾರಿ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಈಗಾಗಲೇ ತಂಡ ಪ್ರಧಾನ ಕೋಚ್ ಆಗಿ ಸಂಜಯ್ ಬಂಗಾರ್(Sanjay Bangar) ನೇಮಿಸಿದೆ.

ಕಳೆದ ಆವೃತ್ತಿಗಳಲ್ಲಿ ಆರ್‌ಸಿಬಿ(RCB) ತಂಡದ ಮುಖ್ಯ ಕೋಚ್ ಆಗಿ ಮೈಕ್ ಹೆಸನ್ ಕಾರ್ಯನಿರ್ವಹಿಸಿದ್ದರು. ಇನ್ನು ಆರ್‌ಸಿಬಿ ಕ್ರಿಕೆಟ್ ಆಪರೇಶನ್ ನಿರ್ದೇಶಕ ಸೈಮನ್ ಕ್ಯಾಟಿಚ್ ಹಾಗೂ ಮೈಕ್ ಹೆಸನ್ ಜೋಡಿ ಪ್ರಶಸ್ತಿ ತಂದುಕೊಡಲಿದೆ ಅನ್ನೋ ವಿಶ್ವಾಸದಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಇತ್ತ ಚೊಚ್ಚಲ ಟ್ರೋಫಿ ಗೆಲುವಿಗಾಗಿ ಇದೀಗ ಆರ್‌ಸಿಬಿ ಫ್ರಾಂಚೈಸಿ ಸಂಜಯ್ ಬಂಗಾರ್‌ಗೆ ಕೋಚ್ ಹುದ್ದೆ ನೀಡಿದೆ.

ಐಪಿಎಲ್ 2021ರ(IPL 2021) ಎರಡನೇ ಭಾಗಕ್ಕೂ ಮೊದಲು ಸೈಮನ್ ಕ್ಯಾಟಿಚ್ ವೈಯುಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹಿಂದೆ ಸರಿದಿದ್ದರು. ಕೋಚ್ ಆಗಿದ್ದ ಮೈಕ್ ಹೆಸನ್ ಆರ್‌ಸಿಬಿ ಕ್ರಿಕೆಟ್ ಆಪರೇಶನ್ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ಇದೀಗ ಸಂಜಯ್ ಬಂಗಾರ್ ಹಾಗೂ ಮೈಕ್ ಹಸೆನ್ ಜೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ರಶಸ್ತಿ ತಂದುಕೊಡುತ್ತಾ? ಅನ್ನೋ ಚರ್ಚೆ ಶುರುವಾಗಿದೆ.

ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಕನ್ಸಲ್ಟೆಂಟ್ ಆಗಿ ನೇಮಕಗೊಂಡಿದ್ದ ಸಂಜಯ್ ಬಂಗಾರ್ ಇದೀಗ ಪ್ರಧಾನ ಕೋಚ್ ಆಗಿ ಬಡ್ತಿ ಪಡೆದಿದ್ದಾರೆ. ಸಂಜಯ್ ಬಂಗಾರ್ ಮುಂದೆ ಬೆಟ್ಟದಷ್ಟು ಸವಾಲಿದೆ. ಕಾರಣ ಡಿಸೆಂಬರ್ ತಿಂಗಳಲ್ಲಿ ಐಪಿಎಲ್ ಮೆಘಾ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಬಹುತೇಕ ಆಟಗಾರರು ಅದಲು ಬದಲಾಗಲಿದ್ದಾರೆ. ಹೀಗಾಗಿ ಹೊಸ ತಂಡ ಕಟ್ಟಬೇಕಾದ ಜವಾಬ್ದಾರಿ ಬಂಗಾರ್ ಹೆಗಲ ಮೇಲಿದೆ.

Rahul Dravid ಶ್ರೇಷ್ಠ ತಂಡವೊಂದನ್ನು ಮುನ್ನಡೆಸಲಿದ್ದಾರೆ : ರವಿ ಶಾಸ್ತ್ರಿ!

ರಾಯಲ್ ಚಾಲೆಂಜರ್ಸ್ ತಂಡದ ನಾಯಕ ಸ್ಥಾನದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದಾರೆ. 2021ರ ಐಪಿಎಲ್ ಟೂರ್ನಿ ನಾಯಕನಾಗಿ ಕೊಹ್ಲಿಗೆ ಕೊನೆಯ ಟೂರ್ನಿಯಾಗಿತ್ತು. ಐಪಿಎಲ್ 2022ರಲ್ಲಿ ಆರ್‌ಸಿಬಿ ಹೊಸ ನಾಯಕನನ್ನು ನೇಮಕ ಮಾಡಲಿದೆ. ಕೊಹ್ಲಿ ರೀತಿಯಲ್ಲಿ ಸಮರ್ಥ ನಾಯಕನನ್ನು ಆರ್‌ಸಿಬಿ ಹುಡುಕಬೇಕಿದೆ. ಜೊತೆಗೆ ಇದುವರೆಗೂ ಸಿಗದ ಪ್ರಶಸ್ತಿ ಗೆಲ್ಲಿಸಿಕೊಡಬೇಕಾದ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುವ ನಾಯಕನಾಗಿರಬೇಕು. ಹೀಗಾಗಿ ಅಳೆದು ತೂಗಿ ಆಟಗಾರರ ಆಯ್ಕೆ ಮಾಡಬೇಕಿದೆ.

ಕೋಚಿಂಗ್ ವಿಭಾಗದಲ್ಲಿ ಬಂಗಾರ್ ಹೆಚ್ಚು ಅನುಭವ ಹೊಂದಿದ್ದಾರೆ. 2014ರಿಂದ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಪಂಜಾಬ್ ಕಿಂಗ್ಸ್ ಹಾಗೂ ಕೊಚ್ಚಿ ಟಸ್ಕರ್ಸ್ ತಂಡಕ್ಕೂ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.

Break up with Shubmam Gill: ಸಾರಾ ತೆಂಡೂಲ್ಕರ್‌ಗೆ ನೆಟ್ಟಿಗರ ಪ್ರಶ್ನೆ!

 T20 World Cup 2021 ಟೀಂ ಇಂಡಿಯಾ ಕ್ರಿಕೆಟಿಗರ ನೀರಸ ಪ್ರದರ್ಶನಕ್ಕೆ ಐಪಿಎಲ್ ಕಾರಣ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಬಿಡುವಿಲ್ಲದ ಕ್ರಿಕೆಟ್‌ನಿಂದ ಟೀಂ ಇಂಡಿಯಾ ಕ್ರಿಕೆಟಿಗರು ದಣಿದಿದ್ದಾರೆ. ಹೀಗಾಗಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಐಪಿಎಲ್ 2022ರ ಟೂರ್ನಿಗೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡವುದು ಸೂಕ್ತ ಅನ್ನೋ ಮಾತುಗಳು ಕೇಳಿಬಂದಿದೆ. ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೂಡ ಟೀಂ ಇಂಡಿಯಾ ಕ್ರಿಕೆಟಿಗರಿಗೆ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವ ಭಾರತೀಯನೂ ಮಾಡದ ಅಪರೂಪದ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ!
ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ