New Zealand tour of India: ಕೊಹ್ಲಿಗೆ ವಿಶ್ರಾಂತಿ, ರೋಹಿತ್‌ಗೆ ನಾಯಕತ್ವ ನೀಡಲು BCCI ತಯಾರಿ!

By Suvarna NewsFirst Published Nov 9, 2021, 6:33 PM IST
Highlights
  • ನವೆಂಬರ್ 17 ರಿಂದ ಭಾರತ ನ್ಯೂಜಿಲೆಂಡ್ ಸರಣಿ ಆರಂಭ
  • ತವರಿನ ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ ಸಾಧ್ಯತೆ
  • ರೋಹಿತ್ ಶರ್ಮಾಗೆ ನಾಯಕತ್ವ ನೀಡಲು ಬಿಸಿಸಿಐ ತಯಾರಿ
  • ಶೀಘ್ರದಲ್ಲೇ ತಂಡ ಪ್ರಕಟಿಸಲಿದೆ ಬಿಸಿಸಿಐ

ಮುಂಬೈ(ನ.09):  T20 ವಿಶ್ವಕಪ್ ಟೂರ್ನಿ ಮುಗಿಸಿದ ಟೀಂ ಇಂಡಿಯಾ(Team India) ಇದೀಗ ತವರಿನಲ್ಲಿ ನ್ಯೂಜಿಲೆಂಡ್(New zealand) ವಿರುದ್ಧ ಸರಣಿ ಆಡಲು ಸಜ್ಜಾಗಿದೆ. ನವೆಂಬರ್ 17 ರಿಂದ ಆರಂಭಗೊಳ್ಳಲಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ದ್ವಿಪಕ್ಷೀಯ ಸರಣಿಗೆ ಬಿಸಿಸಿಐ ಶೀಘ್ರದಲ್ಲೇ ತಂಡ ಪ್ರಕಟಿಸಲಿದೆ. ಭಾರತ ಹಾಗೂ ನ್ಯೂಜಿಲೆಂಡ್ 3 ಟಿ20 ಹಾಗೂ ಎರಡು ಟೆಸ್ಟ್ ಪಂದ್ಯದ ಟೂರ್ನಿ ಆಡಲಿದೆ. ಮೂಲಗಳ ಪ್ರಕಾರ ವಿರಾಟ್ ಕೊಹ್ಲಿಗೆ(Virat Kohli) ವಿಶ್ರಾಂತಿ ನೀಡಲು ನಿರ್ಧರಿಸಿದ್ದು, ಟಿ20 ಮಾದರಿ ನಾಯಕತ್ವನ್ನು ರೋಹಿತ್ ಶರ್ಮಾಗೆ ನೀಡಲು ಬಿಸಿಸಿಐ ತಯಾರಿ ನಡೆಸಿದೆ.

ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಉಪನಾಯಕನಾಗಿರುವ ರೋಹಿತ್ ಶರ್ಮಾಗೆ(Rohit Sharma) ಟೀಂ ಇಂಡಿಯಾ ಟಿ20 ತಂಡದ ನಾಯಕತ್ವ(Captain) ನೀಡಲು ಬಿಸಿಸಿಐ ಮುಂದಾಗಿದೆ. ಟಿ20 ವಿಶ್ವಕಪ್ ಟೂರ್ನಿ ಬಳಿಕ ಟಿ20 ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್‌ಬೈ ಹೇಳಿದ್ದಾರೆ. ಹೀಗಾಗಿ ಹೊಸ ನಾಯಕನ ಆಯ್ಕೆ ನಡೆಯಬೇಕಿದೆ. ಇಂದು ಅಥವಾ ನಾಳೆ ಬಿಸಿಸಿಐ ನ್ಯೂಜಿಲೆಂಡ್ ಪ್ರವಾಸಕ್ಕೆ ತಂಡ ಪ್ರಕಟಿಸಲಿದೆ.

ಸತತ ಕ್ರಿಕೆಟ್ ಹಾಗೂ ಹೆಚ್ಚಿನ ಕೆಲಸದ ಒತ್ತಡದಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿಯ ಅಗತ್ಯವಿದೆ. ಇದನ್ನು ಮನಗಂಡಿರುವ ಬಿಸಿಸಿಐ(BCCI), ಕೊಹ್ಲಿಗೆ ವಿಶ್ರಾಂತಿ ನೀಡಲು ಮುಂದಾಗಿದೆ. ನ್ಯೂಜಿಲೆಂಡ್ ವಿರುದ್ದದ 3 ಟಿ20 ಪಂದ್ಯದ ಸರಣಿ ಹಾಗೂ ಮೊದಲ ಟೆಸ್ಟ್ ಪಂದ್ಯದಿಂದ ಕೊಹ್ಲಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ಟಿ20 ಹಾಗೂ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನ ರೋಹಿತ್ ಶರ್ಮಾ ಮುನ್ನಡೆಸುವ ಸಾಧ್ಯತೆ ಇದೆ. 

ವಿರಾಟ್ ಕೊಹ್ಲಿ ಜೊತೆಗೆ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ. ಸತತ ಕ್ರಿಕೆಟ್‌ನಿಂದ ಹಿರಿಯ ಆಟಗಾರರು ಬಳಲಿದ್ದಾರೆ. ಹೀಗಾಗಿ ವಿಶ್ರಾಂತಿಯ ಅಗತ್ಯವಿದೆ ಎಂದು ಹಲವು ಹಿರಿಯ ಕ್ರಿಕೆಟಿಗರು ಸೂಚಿಸಿದ್ದರು.  ವರುಣ್ ಚಕ್ರವರ್ತಿ ಬದಲು ಹರ್ಷಲ್ ಪಟೇಲ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ಹರ್ಷಲ್ ಪೇಟಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ಹರ್ಷಲ್ ಪಟೇಲ್ ಸ್ಥಾನ ಪಡೆದಿರಲಿಲ್ಲ.

ಶ್ರೇಯಸ್ ಅಯ್ಯರ್ ಕೂಡ ಟಿ20 ವಿಶ್ವಕಪ್ ಟೂರ್ನಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಗೆ ಶ್ರೇಯಸ್ ಅಯ್ಯರ್ ಕೂಡ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ದೀಪಕ್ ಚಹಾರ್ ಹಾಗೂ ರಾಹುಲ್ ಚಹಾರ್ ಕೂಡ ಸ್ಥಾನ ಪಡೆಯುವ ಸಾಧ್ಯತೆ ಇದೆ.  

T20 World Cup; 2012ರ ಬಳಿಕ ಮೊದಲ ಬಾರಿಗೆ ICC ಟೂರ್ನಿಯಲ್ಲಿ ಲೀಗ್ ಹಂತದಿಂದ ಭಾರತ ಔಟ್!

ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಮತ್ತೊಂದು ವಿಶೇಷತೆ ಇದೆ. ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾರ್ಯನಿರ್ವಹಸಲಿದ್ದಾರೆ. ದ್ರಾವಿಡ್ ಮಾರ್ಗದರ್ಶನದ ಅಡಿಯಲ್ಲಿ ಟೀಂ ಇಂಡಿಯಾ ಮೊದಲ ಸರಣಿ ಆಡಲಿದೆ. ಟಿ20 ವಿಶ್ವಕಪ್ ಟೂರ್ನಿಯೊಂದಿಗೆ ಕೋಚ್ ರವಿ ಶಾಸ್ತ್ರಿ ಅವಧಿ ಅಂತ್ಯವಾಗಿದೆ. ಟಿ20 ಮಾದರಿಯಲ್ಲಿ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಿರುವ ಬಿಸಿಸಿಐ, ಉಪನಾಯಕನ ಸ್ಥಾನವನ್ನು ಕನ್ನಡಿಗ ಕೆಎಲ್ ರಾಹುಲ್‌ಗೆ ನೀಡುವ ಸಾಧ್ಯತೆ ಇದೆ.  

ಭಾರತ ಹಾಗೂ ನ್ಯೂಜಿಲೆಂಡ್ ತವರಿನಲ್ಲಿ 3 ಟಿ20 ಪಂದ್ಯದ ಸರಣಿ ಹಾಗೂ 2 ಟೆಸ್ಟ್ ಪಂದ್ಯದ ಸರಣಿ ಆಡಲಿದೆ.

ಭಾರತ ಹಾಗೂ ನ್ಯೂಜಿಲೆಂಡ್ ಟಿ20 ಸರಣಿ
ನವೆಂಬರ್ 17, ಮೊದಲ ಟಿ20 ಪಂದ್ಯ, ಸಂಜೆ 7 ಗಂಟೆಗೆ, ಜೈಪುರ
ನವೆಂಬರ್ 19, ಎರಡನೇ ಟಿ20 ಪಂದ್ಯ, ಸಂಜೆ 7 ಗಂಟೆಗೆ, ರಾಂಚಿ
ನವೆಂಬರ್ 21, ಮೂರನೇ ಟಿ20 ಪಂದ್ಯ, ಸಂಜೆ 7 ಗಂಟೆಗೆ, ಕೋಲ್ಕತಾ

ಭಾರತ ಹಾಗೂ ನ್ಯೂಜಿಲೆಂಡ್ ಟೆಸ್ಟ್ ಸರಣಿ
ನವೆಂಬರ್ 25 ರಿಂದ ನವೆಂಬರ್ 29, ಮೊದಲ ಟೆಸ್ಟ್ ಪಂದ್ಯ, ಬೆಳಗ್ಗೆ 9.30ಕ್ಕೆ, ಕಾನ್ಪುರ
ಡಿಸೆಂಬರ್ 03 ರಿಂದ ಡಿಸೆಂಬರ್ 09, ಮೊದಲ ಟೆಸ್ಟ್ ಪಂದ್ಯ, ಬೆಳಗ್ಗೆ 9.30ಕ್ಕೆ, ಮುಂಬೈ
 

click me!