ಹರಾಜಿನ ಮೂಲಕ ಮಕ್ಕಳಿಗೆ 8 ಲಕ್ಷ ರೂ ಸಂಗ್ರಹಿಸಿದ ಕೆಎಲ್ ರಾಹುಲ್

Suvarna News   | Asianet News
Published : Apr 26, 2020, 08:13 PM IST
ಹರಾಜಿನ ಮೂಲಕ ಮಕ್ಕಳಿಗೆ 8 ಲಕ್ಷ ರೂ ಸಂಗ್ರಹಿಸಿದ ಕೆಎಲ್ ರಾಹುಲ್

ಸಾರಾಂಶ

ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಕೆಎಲ್ ರಾಹುಲ್  ತಮ್ಮ ಕ್ರಿಕೆಟ್ ಬ್ಯಾಟ್ ಸೇರಿದಂತೆ ಹಲವು ವಸ್ತುಗಳನ್ನು ಹರಾಜಿಗಿಟ್ಟ ರಾಹುಲ್ ಇದೀಗ 8 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ. ಈ ಹಣವನ್ನು ಮಕ್ಕಳಿಗೆ ಬಳಸಲಿದ್ದಾರೆ. ರಾಹುಲ್ ಸಾಮಾಜಿಕ ಕಳಕಳಿ ಕುರಿತ ವಿವರ ಇಲ್ಲಿದೆ.

ಬೆಂಗಳೂರು(ಏ.26): ಮಕ್ಕಳ ಅಭಿವೃದ್ದಿಗಾಗಿ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಕ್ರಿಕೆಟ್ ಬ್ಯಾಟ್, ಹೆಲ್ಮೆಟ್ ಸೇರಿದಂತೆ ಹಲವು ವಸ್ತುಗಳನ್ನು ಹರಾಜಿಗಿಟ್ಟಿದ್ದರು. ಇದೀಗ ಹರಾಜಿನ ಮೂಲಕ 8 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ. ಈ ಹಣವನ್ನು ರಾಹುಲ್ ಸಂಪೂರ್ಣವಾಗಿ ಮಕ್ಕಳ ಅಭಿವೃದ್ದಿ ಕಾರ್ಯಕ್ಕೆ ಬಳಸಲಿದ್ದಾರೆ. 

ನನ್ನವನಿಗೆ ಹುಟ್ಟು ಹಬ್ಬದ ಶುಭಾಶಯ, ಕೆಎಲ್ ರಾಹುಲ್‌ಗೆ ಅತಿಯಾ ಶೆಟ್ಟಿ ಹಾರೈಕೆ!.

ಭಾರತ್ ಆರ್ಮಿ ಜೊತೆ ರಾಹುಲ್ ಕ್ರಿಕೆಟ್ ವಸ್ತುಗಳನ್ನು ಹರಾಜಿಗೆ ಇಟ್ಟಿದ್ದರು. ಇನ್ನು ಹರಾಜಿನ ಮೂಲಕ ಬಂದ ಹಣವನ್ನು ಅವೇರ್ ಫೌಂಡೇಶನ್‌ಗೆ ನೀಡಿದ್ದಾರೆ. ಈ ಸಂಸ್ಥೆ ರಾಹುಲ್ ಹಣವನ್ನು ಮಕ್ಕಳ ಅಭಿವೃದ್ದಿಗೆ ಬಳಲಸಲಿದೆ. ಸಮಾಜ ಕಾರ್ಯದಿಂದ ಇದೀಗ ರಾಹುಲ್ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ. ಇಷ್ಟೇ ಅಲ್ಲ ರಾಹುಲ್ ಇತರರಿಗೂ ಮಾದರಿಯಾಗಿದ್ದಾರೆ. 

ರಾಹುಲ್ ಕ್ರಿಕೆಟ್ ವಸ್ತುಗಳ ಹರಾಜಿನ ವಿವರ
ಟೆಸ್ಟ್ ಜರ್ಸಿ =  1,32,774  ರೂಪಾಯಿ
ಏಕದಿನ ಜರ್ಸಿ =    1,13,240 ರೂಪಾಯಿ
ಟಿ20 ಜರ್ಸಿ =   1,04,824 ರೂಪಾಾಯಿ
ಹೆಲ್ಮೆಟ್ =   1,22,677 ರೂಪಾಯಿ
ಪ್ಯಾಡ್ =    33,028 ರೂಪಾಯಿ
ಒಟ್ಟು =   7,99,553 ರೂಪಾಯಿ

ಕಳೆದವಾರ 28ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಕೆಎಲ್ ರಾಹುಲ್ ತಾವು ಕ್ರಿಕೆಟ್ ವಸ್ತುಗಳನ್ನು ಹರಾಜಿಗಿಟ್ಟಿರುವುದಾಗಿ ಹೇಳಿದ್ದರು. ಇದೀಗ ಹಣ ಸಂಗ್ರಹಿಸಿ ಮಕ್ಕಳ ಅಭಿವೃದ್ದಿಗೆ ನೀಡಿರುವುದು ನಿಜಕ್ಕೂ ಬಹುದೊಡ್ಡ ಕೆಲಸ. ಕೆಎಲ್ ರಾಹುಲ್‍ ಕಾರ್ಯಕ್ಕೆ ಮೆಚ್ಚುಗೆಗೆ ಸುರಿಮಳೆಗಳು ಬಂದಿವೆ. ರಾಹುಲ್ ಟೀಂ ಇಂಡಿಯಾದಲ್ಲೂ ಹಾಗೂ ಸಾಮಾಜಿಕ ಕಾರ್ಯದಲ್ಲಿ ಶೈನ್ ಆಗಲಿ ಎಂದು ಹಾರೈಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL Mini Auction: ಎಲ್ಲಾ ಐಪಿಎಲ್ ತಂಡಗಳ ಅವಶ್ಯಕತೆ ಏನು? ಯಾರ ಬಳಿ ಎಷ್ಟಿದೆ ಹಣ?
Good News for RCB Fans: ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ? KSCA-BCCI ಮಾತುಕತೆ