
ನವದೆಹಲಿ(ಏ.26): ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಕಾರಣ ದೇಶದಲ್ಲಿ ಲಾಕ್‌ಡೌನ್ ಮೇ.3ರ ವರೆಗೆ ಮುಂದುವರಿಯಲಿದೆ. ಇತ್ತ ಮನೆಯೊಳಗೆಂ ಬಂಧಿಯಾಗಿರುವ ಹಲವರು ತಮ್ಮ ಕೂದಲಿಗೆ ಕತ್ತರಿ ಹಾಕಿ ಹೊಸ ಸ್ಟೈಲ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಹೊಸ ಸ್ಟೈಲ್ ಮಾಡಿದ್ದಾರೆ. ಸಂಪೂರ್ಣ ಹೇರ್ ತೆಗೆದು ಬಾಲ್ಡ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಲಾಕ್‌ಡೌನ್ ಕಾರಣ ಜನರ ಓಡಾಟವಿಲ್ಲ, ಟೀಂ ಇಂಡಿಯಾ ಕ್ರಿಕೆಟಿಗನ ಮನೆಗೆ ನುಗ್ಗಿದ ಕಳ್ಳರು!
ಲಾಕ್‌ಡೌನ್ ಸಮಯದಲ್ಲಿ ಕಪಿಲ್ ದೇವ್ ಈ ರೀತಿ ಹೊಸ ಸ್ಟೈಲ್ ಮಾಡಿದ್ದಾರೆ. ಕಪಿಲ್ ದೇವ್ ಹೊಸ ಹೇರ್ ಸ್ಟೈಲ್‌ಗೆ ಇಬ್ಬರು ಕ್ರಿಕೆಟಿಗರು ಕಾರಣ ಒಬ್ಬರು ವೆಸ್ಟ್ ಇಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಹಾಗೂ ಮತ್ತೊರ್ವ ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ. ಕಪಿಲ್ ದೇವ್ ಇನ್ಸ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಿಯನ್ ಬಾಲ್ಡ್ ಹೇರ್ ಸ್ಟೈಲ್ ಮಾಡಿರುವುದನ್ನು ನೋಡಿ ಇಂಪ್ರೆಸ್ ಆಗಿದ್ದಾರೆ. ಕಾರಣ ಕಪಿಲ್ ದೇವ್ ಕ್ರಿಕೆಟ್ ಹೀರೋ ವಿವಿಯನ್ ರಿಚರ್ಡ್ಸ್.
ಕ್ರಿಕೆಟ್ ಪುನರ್ ಆರಂಭ ಕುರಿತು ಮಹತ್ವದ ಸಲಹೆ ನೀಡಿದ ಯುವರಾಜ್ ಸಿಂಗ್!
ಇತ್ತ ಎಂ.ಎಸ್.ಧೋನಿ ಕೂಡ ಕಪಿಲ್ ದೇವ್ ಅಚ್ಚುಮೆಚ್ಚಿನ ಆಟಗಾರ. ಧೋನಿ 2011ರ ವಿಶ್ವಕಪ್ ಕ್ರಿಕೆಟ್ ಬಳಿಕ ಧೋನಿ ಕೂಡ ಬಾಲ್ಡ್ ಸ್ಟೈಲ್ ಮಾಡಿದ್ದರು. ಆಗಲೇ ಕಪಿಲ್ ದೇವ್ ನಿರ್ಧರಿಸಿದ್ದರು. ನಾನು ಕೂಡ ಒಂದು ದಿನ ವಿವ್ ರಿಚರ್ಡ್ಸ್ ಹಾಗೂ ಧೋನಿ ರೀತಿ ಬಾಲ್ಡ್ ಸ್ಟೈಲ್ ಮಾಡುತ್ತೇನೆ ಎಂದಿದ್ದರು. ಇದೀಗ ಸಮಯ ಬಂದಿದೆ. ಹೀಗಾಗಿ ಬಾಲ್ಡ್ ಸ್ಟೈಲ್ ಮಾಡಿದ್ದೇನೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.