ಐಪಿಎಲ್ ಆರಂಭಕ್ಕೂ ಮುನ್ನ ಕೆಕೆಆರ್ ತಂಡಕ್ಕೆ ಬಿಗ್ ಶಾಕ್, ನಾಯಕ ಶ್ರೇಯಸ್ ಅಯ್ಯರ್ ಬಹುತೇಕ ಔಟ್!

Published : Mar 14, 2023, 06:50 PM IST
ಐಪಿಎಲ್ ಆರಂಭಕ್ಕೂ ಮುನ್ನ ಕೆಕೆಆರ್ ತಂಡಕ್ಕೆ ಬಿಗ್ ಶಾಕ್, ನಾಯಕ ಶ್ರೇಯಸ್ ಅಯ್ಯರ್ ಬಹುತೇಕ ಔಟ್!

ಸಾರಾಂಶ

ಐಪಿಎಲ್ 2023 ಟೂರ್ನಿ ಆರಂಭಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಇಂಜುರಿ ಶಾಕ್ ಎದುರಾಗಿದೆ. ಇದರ ಬೆನ್ನಲ್ಲೇ ಇದೀಗ ಕೆಕೆಆರ್ ತಂಡಕ್ಕೂ ಹಿನ್ನಡೆಯಾಗಿದೆ. ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್, ಅರ್ಧ ಐಪಿಎಲ್ ಟೂರ್ನಿಗೆ ಅಲಭ್ಯರಾಗಿದ್ದಾರೆ.  

ಕೋಲ್ಕತಾ(ಮಾ.14): ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಇಂಜುರಿ ಸಮಸ್ಯೆ ಇದೀಗ ಐಪಿಎಲ್ ಟೂರ್ನಿ ಮೇಲೂ ಪರಿಣಾಮ ಬೀರಿದೆ. ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದ ಶ್ರೇಯಸ್ ಅಯ್ಯರ್,ಬಳಿಕ ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದಾರೆ. ಇದೀಗ ಅರ್ಧ ಐಪಿಎಲ್ ಟೂರ್ನಿಗೂ ಶ್ರೇಯಸ್ ಅಯ್ಯರ್ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ. ಶ್ರೇಯಸ್ ಅಯ್ಯರ್ ಸಂಪೂರ್ಣ ಚೇತರಿಕೆಗೆ ಹೆಚ್ಚಿನ ಸಮಯದ ಅವಶ್ಯಕತೆ ಇದೆ.ಹೀಗಾಗಿ ಐಪಿಎಲ್ ಅರ್ಧ ಟೂರ್ನಿ ಬಳಿಕ ತಂಡಕ್ಕೆ ಮರಳು ಸಾಧ್ಯತೆ ಇದೆ.

ಬೆನ್ನು ನೋವಿಗೆ ತುತ್ತಾಗಿರುವ ಶ್ರೇಯಸ್ ಅಯ್ಯರ್, ಈಗಾಗಲೇ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಹಮ್ಮದಾಬಾದ್ ಟೆಸ್ಟ್ ಪಂದ್ಯಿಂದ ಹೊರಗುಳಿದಿದ್ದರು. ಇದೀಗ ಮಾರ್ಚ್ 17 ರಿಂದ ಆರಂಭಗೊಳ್ಳಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಟೂರ್ನಿಯಿಂದಲೂ ಶ್ರೇಯಸ್ ಅಯ್ಯರ್ ಹೊರಗುಳಿದಿದ್ದಾರೆ. ಆದರೆ ಅಯ್ಯರ್ ಗಾಯ ಗಂಭೀರವಾಗಿರುವ ಕಾರಣ ಹೆಚ್ಚಿನ ವಿಶ್ರಾಂತಿಗೆ ಬಿಸಿಸಿಐ ವೈದ್ಯರ ತಂಡ ಸೂಚಿಸಿದೆ. ಹೀಗಾಗಿ ಮೇ ತಿಂಗಳ ಆರಂಭದಲ್ಲಿ ಅಯ್ಯರ್ ಫಿಟ್ ಆಗಿ ಐಪಿಎಲ್ ಟೂರ್ನಿ ಸೇರಿಕೊಳ್ಳುವ ಸಾಧ್ಯತೆ ಇದೆ. ಮಾರ್ಚ್ ಅಂತ್ಯದಿಂದ ಐಪಿಎಲ್ 2023 ಟೂರ್ನಿ ಆರಂಭಗೊಳ್ಳುತ್ತಿದೆ.

WPL 2023 5 ಪಂದ್ಯ ಸೋತ ಆರ್‌ಸಿಬಿ ವುಮೆನ್ಸ್‌ಗಿದೆ ಪ್ಲೇ ಆಫ್ ಚಾನ್ಸ್, ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ!

28 ವರ್ಷದ ಶ್ರೇಯಸ್ ಅಯ್ಯರ್ ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಅಲಭ್ಯತೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಚಿಂತೆ ಹೆಚ್ಚಿಸಿದೆ. ಕಾರಣ 2022ರ ಹರಾಜಿನಲ್ಲಿ ಶ್ರೇಯಸ್ ಅಯ್ಯರನ್ನು 12 ಕೋಟಿ ರೂಪಾಯಿಗೆ ಕೆಕೆಆರ್ ಖರೀದಿಸಿತ್ತು. ಕೆಕೆಆರ್ ತಂಡದ ನಾಯಕನಾಗಿರುವ ಶ್ರೇಯಸ್ ಅಯ್ಯರ್, ಕೋಲ್ಕತಾಗೆ ಮತ್ತೊಂದು ಟ್ರೋಫಿ ಗೆಲ್ಲಿಸಿಕೊಡುವ ಸೂಚನೆಯನ್ನು ನೀಡಿದ್ದಾರೆ. ಇದೀಗ ಅಯ್ಯರ್ ಅಲಭ್ಯತೆಯಿಂದ ಕೆಕೆಆರ್ ಹೊಸ ನಾಯಕನ ಆಯ್ಕೆ ಮಾಡಬೇಕಾಗಿದೆ.

'ಏಕ್‌ ತೇರಾ, ಏಕ್‌ ಮೇರಾ..' ಅಕ್ಷಯ್‌ ಕುಮಾರ್‌ ಚಿತ್ರದ ಹಾಸ್ಯ ದೃಶ್ಯ ಮರುಸೃಷ್ಟಿಸಿದ ಅಶ್ವಿನ್‌-ಜಡೇಜಾ!

ಶ್ರೇಯಸ್‌ರ ಗಾಯದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಾಯಕ ರೋಹಿತ್‌ ಶರ್ಮಾ, ‘ಗಾಯದ ಪ್ರಮಾಣ ದೊಡ್ಡದಿರುವಂತೆ ಕಾಣುತ್ತಿದೆ. ಹಲವು ಕ್ರಿಕೆಟ್‌ಗೆ ಯಾವಾಗ ಮರಳಬಹುದು ಎನ್ನುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಆದಷ್ಟುಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.ಆಸ್ಪ್ರೇ​ಲಿಯಾ ವಿರು​ದ್ಧದ 4ನೇ ಟೆಸ್ಟ್‌ ಪಂದ್ಯ​ದಲ್ಲಿ ಭಾನು​ವಾರ ಮೈದಾ​ನಕ್ಕೆ ಇಳಿ​ಯ​ಲಿಲ್ಲ. ಪಂದ್ಯದ ನಡು​ವೆಯೇ ಅವ​ರು ಸ್ಕಾನಿಂಗ್‌ಗೆ ಒಳಗಾಗಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ