CCL ಪಂದ್ಯದಲ್ಲಿ Sudeep Team ಚಾಂಪಿಯನ್: ಕಪ್​ ಪಡೆಯಲು ಬಂದ ಕಿಚ್ಚನ ಭರ್ಜರಿ ಡಾನ್ಸ್​ ವಿಡಿಯೋ ವೈರಲ್

Published : Feb 02, 2026, 01:15 PM IST
Kichcha Sudeep

ಸಾರಾಂಶ

ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಫೈನಲ್‌ನಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದೆ. 12 ವರ್ಷಗಳ ನಂತರ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದ ಸಂಭ್ರಮವನ್ನು ಸುದೀಪ್ ಮೈದಾನದಲ್ಲಿ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಆಚರಿಸಿದರು.

ಕಿಚ್ಚ ಸುದೀಪ್​ ಸದ್ಯ ಬಿಗ್​ಬಾಸ್​ 12 ಮುಗಿದಿದ್ದರಿಂದ ನಿರಾಳರಾಗಿದ್ದಾರೆ. ಇದರ ಜೊತೆಗೆ ಅವರು ತಮ್ಮ ಸಿನಿಮಾ ಪ್ರಚಾರದಲ್ಲಿಯೂ ಬಿಜಿಯಾಗಿದ್ದರು. ಅದರಿಂದಲೂ ಸದ್ಯ ಹೊರಬಂದಿದ್ದಾರೆ. ಇದೀಗ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL)ನಲ್ಲಿ ಕಾಣಿಸಿಕೊಂಡಿದ್ದರು. ನಟನೆ ಮಾತ್ರವಲ್ಲದೇ ಕ್ರಿಕೆಟ್​ನಲ್ಲಿಯೂ ತಮ್ಮದು ಎತ್ತಿದ ಕೈ ಎಂದು ತೋರಿಸಿದ್ದಾರೆ ಸುದೀಪ್​. ಏಕೆಂದರೆ ಅವರ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು ಈ ವರ್ಷದ ಸಿಸಿಎಲ್​ ಅಂತಿಮ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು ಸೋಲಿಸಿದೆ. ನಿನ್ನೆ ಅರ್ಥಾತ್​ ಫೆಬ್ರವರಿ 1ರಂದು ಕೊಯಮತ್ತೂರಿನಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್‌ಗಳ ಜಯವನ್ನು ಸುದೀಪ್​ ನೇತೃತ್ವದ ತಂಡ ಪಡೆದುಕೊಂಡಿದೆ. ಈ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡವು 12 ವರ್ಷಗಳ ನಂತರ 3ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಳೆದ ವರ್ಷ ಫಿನಾಲೆಗೆ ಏರಿದ್ದರೂ ಗೆಲುವು ಸಿಕ್ಕಿರಲಿಲ್ಲ.

ಸುದೀಪ್​ ಭರ್ಜರಿ ಡಾನ್ಸ್​

ಸುದೀಪ್​ ಅಂದ ಮೇಲೆ ಅಲ್ಲೊಂದು ಸ್ಟೈಲ್​ ಇರಲೇಬೇಕಲ್ಲವೆ? ಇದಾಗಲೇ ಬಿಗ್​ಬಾಸ್​​ನಲ್ಲಿ ಪ್ರತಿ ಸೀಸನ್​ನಲ್ಲಿಯೂ ತಮ್ಮದೇ ಆದ ಸ್ಟೈಲ್​ನಿಂದ ಗುರುತಿಸಿಕೊಳ್ತಿರೋರು ಕಿಚ್ಚ. ಈಚೆಗಷ್ಟೇ ಹೆಣ್ಣುಮಕ್ಕಳು ಹಾಕುವ ಹೇರ್​ಕ್ಲಿಪ್​ ಅನ್ನು ಹಾಕಿಕೊಂಡು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಕ್ರಿಯೇಟ್​ ಮಾಡಿದ್ದರು. ಇದೇ ರೀತಿ ಸದಾ ತಮ್ಮ ಐಕಾನಿಕ್​ ಸ್ಟೈಲ್​ನಿಂದಲೇ ಹವಾ ಸೃಷ್ಟಿಸ್ತಿರೋ ಕಿಚ್ಚ ಸುದೀಪ್​ ಅವರು, ಇದೀಗ ತಮ್ಮ ತಂಡದ ಗೆಲುವನ್ನು ಭರ್ಜರಿ ಡಾನ್ಸ್​ ಮೂಲಕ ಸಂಭ್ರಮಿಸಿದ್ದಾರೆ. ವಿನ್ನರ್​ ಕಪ್ ತೆಗೆದುಕೊಳ್ಳಲು ಬಂದ ಅವರ ವಿಡಿಯೋ ವೈರಲ್​ ಆಗಿದೆ.

ತಂಡದಲ್ಲಿ ಯಾರಿದ್ದರು?

ಸಿಸಿಎಲ್​ ತಂಡವು ಸೆಮಿಫೈನಲ್‌ನಲ್ಲಿ ಚೆನ್ನೈ ವಿರುದ್ಧ ಜಯಗಳಿಸಿ ಫೈನಲ್ ತಲುಪಿತ್ತು. ಸುದೀಪ್ ತಂಡದ ಮುಂಚೂಣಿಯಲ್ಲಿದ್ದು, ತಂಡದ ಆಟಗಾರರಾದ ಕಾರ್ತಿಕ್ ಜಯರಾಮ್, ರಾಜ್‌ಜೀವ್, ಸಚಿನ್ ಮತ್ತು ಕರಣ್ ಆರ್ಯನ್ ಶ್ರೇಷ್ಠ ಪ್ರದರ್ಶನ ನೀಡಿದರು. ಪಂದ್ಯದ ಅಂತ್ಯದವರೆಗೂ ಅಜೇಯವಾಗಿ ಉಳಿದ ಬುಲ್ಡೋಜರ್ಸ್, ತಮ್ಮ 3ನೇ ಬಾರಿಗೆ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿತು.

ಆಟಗಾರರನ್ನು ಹುರಿದುಂಬಿಸುವ ಕಿಚ್ಚ

ತಂಡದ ಪ್ರತಿಯೊಬ್ಬ ಆಟಗಾರರನ್ನೂ ಸುದೀಪ್ ಪ್ರೋತ್ಸಾಹಿಸ್ತಾರೆ. ಆಟ ಶುರುವಾದ ಆರಂಭದಿಂದ ಕೊನೆಯವರೆಗೂ ಸುದೀಪ್ ಆಟಗಾರರನ್ನು ಹುರಿದುಂಬಿಸುತ್ತಲೇ ಇರುತ್ತಾರೆ. ಉತ್ತಮ ಕ್ಯಾಪ್ಟನ್ ಹೇಗಿರಬೇಕು ಎಂಬುದನ್ನು ಸುದೀಪ್ ನೋಡಿ ಕಲಿಯಬೇಕು ಎನ್ನುವ ಮಾತು ಕೂಡ ಇದೆ. ಈ ಆಟದ ಆರಂಭದಲ್ಲಿ, ಗ್ರೌಂಡ್ ಹೊರಗೆ ಕಿಚ್ಚ ಸುದೀಪ್ ಭರ್ಜರಿ ಡಾನ್ಸ್ ಮಾಡಿದ್ದರು. ಮಗಳು ಸಾನ್ವಿ ಕೂಡ ಅಪ್ಪನನ್ನು ಚಿಯರ್​ ಮಾಡಿದ್ದರು. ಮಾರ್ಕ್ ಸಿನಿಮಾದ ಮಗಳೇ ಹಾಡಿರುವ ಐಟಂ ಸಾಂಗ್ ಗೆ ಸುದೀಪ್ ಸ್ಟೆಪ್ ಹಾಕಿದ್ದರು.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂಡೋ-ಪಾಕ್ ಪಂದ್ಯದ ವೇಳೆ ಸಿಕ್ಕಿಬಿದ್ದ ಸರ್ಫರಾಜ್, ನಿಯಮ ಉಲ್ಲಂಘಿಸಿ ಫೋನ್ ಬಳಸಿದ ಮೆಂಟರ್
ಭಾರತ ಮ್ಯಾಚ್ ಬಹಿಷ್ಕರಿಸಿದರೆ ಪಾಕಿಸ್ತಾನ ಕ್ರಿಕೆಟ್ ಅವನತಿ ಗ್ಯಾರಂಟಿ! ಪಾಕ್‌ಗೆ ಬಿಗ್ ಶಾಕ್ ಕೊಡಲು ರೆಡಿಯಾದ ಐಸಿಸಿ!