ಸಿಕ್ಸರ್ ಸಿಧು ಮುಂದೆ ನಿಂತು ಕಿಚ್ಚ ಆಡಿದ ಮಾತಿನ ಹಳೇ ವಿಡಿಯೋ ವೈರಲ್, ಸುದೀಪ್ ಮಾತಿಗೆ ಸಿಧು ಕ್ಲೀನ್ ಬೋಲ್ಡ್!

By Naveen Kodase  |  First Published Nov 19, 2024, 7:09 PM IST

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಅವರು ತಮಗೆ ನೀಡಿದ್ದ ಅಮೂಲ್ಯ ಗಿಫ್ಟ್ ಅನ್ನು ಕಿಚ್ಚ ಸುದೀಪ್ ಸ್ಮರಿಸಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಜತೆಗೆ ಕ್ರಿಕೆಟ್ ವಲಯದಲ್ಲೂ ಉತ್ತಮ ಒಡನಾಟ ಹೊಂದಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಸ್ಯಾಂಡಲ್‌ವುಡ್‌ನ ಮೇರು ನಟರಲ್ಲಿ ಒಬ್ಬರಾಗಿರುವ ಕಿಚ್ಚ ಸುದೀಪ್, ಹಿಂದಿಯ ಪ್ರಖ್ಯಾತ ಕಾಮಿಡಿ ಟಾಕ್ ಶೋ ಒಂದರಲ್ಲಿ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಬಗ್ಗೆ ಆಡಿದ ಹಳೆಯ ಮಾತುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಹಿಂದಿಯ ಕಪಿಲ್ ಶರ್ಮಾ ಶೋನಲ್ಲಿ ಸುನಿಲ್ ಶೆಟ್ಟಿ, ಕಿಚ್ಚ ಸುದೀಪ್ ಸೇರಿದಂತೆ ಹಲವು ಸೆಲಿಬ್ರಿಟಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನವಜೋತ್ ಸಿಂಗ್ ಸಿಧು ಅವರು ತಮಗೆ ನೀಡಿದ್ದ ಸ್ಪೆಷಲ್ ಗಿಫ್ಟ್‌ ಸ್ಮರಿಸಿಕೊಂಡಿದ್ದಾರೆ. "ಇದು ನವಜೋತ್ ಸಿಂಗ್ ಅವರಿಗೆ ಖಂಡಿತವಾಗಿಯೂ ನೆನಪಿನಲ್ಲಿ ಇಲ್ಲ ಎಂದು ಭಾವಿಸುತ್ತೇನೆ. ವಿಶ್ವಕಪ್ ಪಂದ್ಯವನ್ನಾಡಲು ಅವರು ಬೆಂಗಳೂರಿಗೆ ಬಂದಿದ್ದರು, ನಾನು ಆಗ ಬಾಲ್ ಬಾಯ್ ಆಗಿದ್ದೆ. ಆಗ ಅವರು ಪವರ್‌ ಸ್ಟಿಕ್ಕರ್ ಇರುವ ಬ್ಯಾಟ್ ಅನ್ನು ಕ್ರಿಕೆಟ್ ಆಡಲು ಬಳಸುತ್ತಿದ್ದರು. ಆ ಬ್ಯಾಟ್‌ ಅನ್ನು ಅವರು ನನಗೆ ಗಿಫ್ಟ್ ಆಗಿ ನೀಡಿದ್ದರು ಎಂದು ಆ ದಿನಗಳನ್ನು ಸುದೀಪ್ ಮೆಲುಕು ಹಾಕಿದ್ದಾರೆ.

Tap to resize

Latest Videos

undefined

ಆರ್‌ಸಿಬಿ ಮುಂದಿನ ನಾಯಕ ಯಾರು? ರೇಸ್‌ನಲ್ಲಿದ್ದಾರೆ 5 ಸ್ಟಾರ್ ಕ್ರಿಕೆಟರ್ಸ್!

ಸುದೀಪ್ ಮಾತು ಕೇಳಿದ ನವಜೋತ್ ಸಿಂಗ್ ಸಿಧು, " ಒಳ್ಳೆಯ ತನಕ್ಕೆ ಯಾವತ್ತೂ ಸಾವಿಲ್ಲ, ಅದು ನಮಗೆ 100 ಪಟ್ಟು ಒಳ್ಳೆಯದ್ದನ್ನೇ ವಾಪಾಸ್ ಕೊಡುತ್ತದೆ ಎಂದು ನಮ್ಮಮ್ಮ ಹೇಳುತ್ತಿದ್ದರು. ಇವತ್ತು ನೀವು ನೆನಪಿಸಕೊಂಡ ವಿಚಾರ ಇದೆಯಲ್ಲ, ಇದನ್ನು ಜಗತ್ತಿನಲ್ಲಿ ಎಷ್ಟೇ ದುಡ್ಡು ಕೊಟ್ಟರೂ ಖರೀದಿಸಲು ಸಾಧ್ಯವಿಲ್ಲ. ನಾನು ಇದನ್ನು ಸೀರಿಯಸ್ಲಿಯಾಗಿ ಹೇಳುತ್ತಿದ್ದೇನೆ ಎಂದು ಮನದುಂಬಿ ಮಾತನಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

click me!