ಆರ್‌ಸಿಬಿ ತಂಡದಲ್ಲಿ ಮೇಜರ್‌ ಸರ್ಜರಿ; ಇಬ್ಬರು ಟಿ20 ಸ್ಪೆಷಲಿಸ್ಟ್‌ಗಳಿಗೆ ಗೇಟ್‌ಪಾಸ್ ನೀಡಲು ಬೆಂಗಳೂರು ಫ್ರಾಂಚೈಸಿ ನಿರ್ಧಾರ?

By Suvarna News  |  First Published Sep 9, 2024, 3:31 PM IST

ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಇಬ್ಬರು ಸ್ಟಾರ್ ಆಟಗಾರರನ್ನು ಕೈಬಿಡಲು ಮುಂದಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು: ಐಪಿಎಲ್‌ನಲ್ಲಿ ಈ  ತಂಡದ ಮೇನ್ ಅಟ್ರ್ಯಾಕ್ಷನ್ ಈ ತ್ರಿಮೂರ್ತಿ ಆಟಗಾರರ ಜೋಡಿ. ಇವರ ಹೆಸರು ಕೇಳಿದ್ರೇನೆ, ಎದುರಾಳಿ ಪಡೆಗೆ ನಡುಕ ಶುರುವಾಗುತ್ತೆ. ಆದ್ರೆ, ಇನ್ಮುಂದೆ ಥ್ರಿಬಲ್ ಸ್ಟಾರ್‌ಗಳಲ್ಲಿ ಎರಡು ಸ್ಟಾರ್‌ಗಳು ಇರಲ್ಲ. ಅಷ್ಟಕ್ಕೂ ಇವ್ರೇನು ಹೇಳ್ತಿದ್ದಾರೆ. ಯಾವ ತಂಡ? ಯಾವ ಜೋಡಿ? ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ಕೆಜಿಎಫ್. ಕನ್ನಡ ಚಿತ್ರರಂಗವನ್ನ ಜಗತ್ತಿಗೆ ಪರಿಚಯಿಸಿದ ಸಿನಿಮಾ. ರಾಕಿಂಗ್  ಯಶ್ ಸ್ಟಾರ್ ಅಭಿನಯದ ಈ ಸಿನಿಮಾ, ಚಾಪ್ಟರ್  ಒನ್  ಮತ್ತು ಚಾಪ್ಟರ್ ಟುಗಳಲ್ಲಿ ರಿಲೀಸ್ ಆಗಿತ್ತು. ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ಕೊಳ್ಳೆ ಹೊಡೆದು ದಾಖಲೆ ಬರೆದಿತ್ತು. ಇನ್ನು ಎರಡು ಚಾಪ್ಟರ್‌ಗಳಿಗೆ ಕೆಜಿಎಫ್‌ ಅಧ್ಯಾಯ ಮುಗಿದಿಲ್ಲ. ಭವಿಷ್ಯದಲ್ಲಿ ಪಾರ್ಟ್ ಥ್ರೀ ಕೂಡ ಬರಲಿದೆ. ಆದ್ರೆ, ಐಪಿಎಲ್‌ನಲ್ಲಿ ಮಾತ್ರ ಕೆಜಿಎಫ್‌ ಚಾಪ್ಟರ್ ಮುಗಿಯುವ ಹಂತಕ್ಕೆ ಬಂದಿದೆ. 

Latest Videos

undefined

ದುಲೀಪ್ ಟ್ರೋಫಿಯಲ್ಲಿ ರಿಷಭ್ ಪಂತ್ ಕಳ್ಳಾಟ: ಪಂತ್ ರಣತಂತ್ರಕ್ಕೆ ಶುಭಮನ್ ಗಿಲ್ ಪಡೆ ಶಾಕ್!

IPLನಲ್ಲಿ KGF ಚಾಪ್ಟರ್ ಕ್ಲೋಸ್..? 

ಯೆಸ್, IPLನಲ್ಲಿ KGF ಅಂದ್ರೆ, ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಫಾಫ್ ಡು ಪ್ಲೆಸಿಸ್. ಈ ಮೂವರು ಸ್ಟಾರ್ ಆಟಗಾರರು, ಆರ್‌ಸಿಬಿ ತಂಡದ ಪರ ಆಡ್ತಿದ್ದಾರೆ. ಈ ತ್ರಿಮೂರ್ತಿಗಳು ಸಿಡಿದು ನಿಂತ್ರೆ ಎದುರಾಳಿ ಬೌಲರ್ಸ್‌ಗೆ ನರಕ ದರ್ಶನ ಮಿಸ್ಸೇ ಇಲ್ಲ. ಆದ್ರೆ, ಮುಂದಿನ ಸೀಸನ್ನಲ್ಲಿ ಇವ್ರು ಬೇರೆ ಬೇರೆಯಾಗಲಿದ್ದಾರೆ. KGFನಲ್ಲಿ K ಮಾತ್ರ ಉಳಿಯಲಿದೆ. 

ಹೌದು, IPL ಸೀಸನ್ 18ಕ್ಕೂ ಮುನ್ನ ಡಿಸೆಂಬರ್‌ನಲ್ಲಿ ಮೆಗಾ ಆಕ್ಷನ್ ನಡೆಯಲಿದೆ. ಇದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ಸಿದ್ಧತೆ ನಡೆಸಿವೆ. ಯಾರನ್ನ ರಿಲೀಸ್ ಮಾಡೋದು, ಯಾರನ್ನ ಉಳಿಸಿಕೊಳ್ಳೋದು ಅನ್ನೋ ಲೆಕ್ಕಾಚಾರದಲ್ಲಿ ತೊಡಿಗಿವೆ. ಈ ನಡುವೆ RCB ತಂಡದಿಂದ ಮ್ಯಾಕ್ಸ್‌ವೆಲ್ ಮತ್ತು ಫಾಫ್ ಡುಪ್ಲೆಸಿಸ್‌ಗೆ ಗೇಟ್‌ಪಾಸ್ ಸಿಗಲಿದೆ ಅನ್ನೋ ಮಾತುಗಳು ಕೇಳಿಬರ್ತಿವೆ. 

ಸಚಿನ್, ಕೊಹ್ಲಿ ಕ್ಲಬ್‌ಗೆ ಸೇರಲು ರೋಹಿತ್ ಶರ್ಮಾ ರೆಡಿ; ಬಾಂಗ್ಲಾ ಎದುರು ಅಬ್ಬರಿಸ್ತಾರಾ ಹಿಟ್‌ಮ್ಯಾನ್..?

RCBಯಿಂದ ಮ್ಯಾಕ್ಸ್‌ವೆಲ್ ಔಟ್..!

ಆರ್‌ಸಿಬಿ ತಂಡದಿಂದ ಗ್ಲೆನ್ ಮ್ಯಾಕ್ಸ್‌ವೆಲ್ ರಿಲೀಸ್ ಆಗೋದು ಫಿಕ್ಸ್.  ಈ ಬಾರಿಯ ಐಪಿಎಲ್‌ ಸಮರದಲ್ಲಿ ಮ್ಯಾಕ್ಸ್‌ವೆಲ್ ಕಳಪೆ ಆಟದ  ಮೂಲಕ  ಆರ್‌ಸಿಬಿ ಪಾಲಿಗೆ ವಿಲನ್ ಆಗಿದ್ರು.  ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿ, ಕೇವಲ 52 ರನ್‌ಗಳಿಸಿದ್ರು.  2021ರ IPLಗು ಮುನ್ನ ನಡೆದ ಆಕ್ಷನ್ನಲ್ಲಿ ಆರ್‌ಸಿಬಿ  14.25 ಕೋಟಿ ನೀಡಿ ಖರೀದಿಸಿತ್ತು. ರೆಡ್ ಆರ್ಮಿ ಪರ ಮೊದಲ ಸೀಸನ್ನಲ್ಲಿ ಅಬ್ಬರಿಸಿದ್ದ ಮ್ಯಾಕ್ಸಿ, 513 ರನ್ ಕಲೆಹಾಕಿದ್ರು. ನಂತರದ ಎರಡು ಸೀಸನ್ಗಳಲ್ಲಿ 301 ಮತ್ತು 400 ರನ್ಗಳಿಸಿ, ಪರ್ವಾಗಿಲ್ಲ ಎನ್ನಿಸಿದ್ರು. ಆದ್ರೆ, ಈ ಸಲ ಅಟ್ಟರ್ ಫ್ಲಾಪ್ ಶೋ ನೀಡಿದ್ರು. ಮ್ಯಾಕ್ಸ್‌ವೆಲ್ನ ಕೈ ಬಿಟ್ಟು ಅವ್ರ ಬದಲು ಇಂಗ್ಲೆಂಡ್ ಆಲ್ರೌಂಡರ್ ವಿಲ್ ಜ್ಯಾಕ್ಸ್ರನ್ನ ಉಳಿಸಿಕೊಳ್ಳೋದು RCB ಪ್ಲ್ಯಾನ್ ಆಗಿದೆ. 

ಡುಪ್ಲೆಸಿಗೆ RCB ಗುಡ್‌ಬೈ ಹೇಳೋದು ಪಕ್ಕಾ..!

RCB ತಂಡದಿಂದ  ರಿಲೀಸ್ ಆಗಲಿರೋ ಮೊದಲ ಆಟಗಾರ ನಾಯಕ ಫಾಫ್ ಡುಪ್ಲೆಸಿ. 2022ರ IPLಗು ಮುನ್ನ RCBಗೆ ಬಂದ ಡುಪ್ಲೆಸಿ, ಕಳೆದ ಮೂರು ಸೀಸ್ಗಳಲ್ಲಿ ತಂಡವನ್ನ ಮುನ್ನಡೆಸಿದ್ರು. ಆರಂಭಿಕರಾಗಿ ಬ್ಯಾಟ್ ಬೀಸಿದ್ರು. ಆದ್ರೆ, ಸದ್ಯ ಡುಪ್ಲೆಸಿಗೆ 39 ವರ್ಷ ವಯಸ್ಸಾಗಿದೆ. ಇದ್ರಿಂದ ಡುಪ್ಲೆಸಿಯನ್ನ ಡ್ರಾಪ್ ಮಾಡಿ, ಅವ್ರ ಸ್ಥಾನದಲ್ಲಿ ಯಂಗ್‌ಸ್ಟರ್‌ಗೆ ಚಾನ್ಸ್ ನೀಡಲು ಫ್ರಾಂಚೈಸಿ ಮುಂದಾಗಿದೆ. 

ಒಟ್ಟಿನಲ್ಲಿ  RCBಯ KGF ಬಳಗದಿಂದ G ಮತ್ತು F ಔಟ್ ಆಗೋದು ಹೊರಬೀಳುವುದು ಬಹುತೇಕ ಖಚಿತವಾಗಿದೆ. ಇವರಿಬ್ಬರ ಬದಲಿಗೆ ರೆಡ್ ಅರ್ಮಿ ತಂಡಕ್ಕೆ ಯಾರು ಎಂಟ್ರಿ ಕೊಡಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!