ದುಲೀಪ್ ಟ್ರೋಫಿಯಲ್ಲಿ ರಿಷಭ್ ಪಂತ್ ಕಳ್ಳಾಟ: ಪಂತ್ ರಣತಂತ್ರಕ್ಕೆ ಶುಭಮನ್ ಗಿಲ್ ಪಡೆ ಶಾಕ್!

ಟೀಂ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್, ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕಳ್ಳಾಟವಾಡಿದ್ದಾರೆ. ಹಾಗಂತ ಇದು ಸೀರಿಯಸ್ ವಿಚಾರ ಅಲ್ಲ..!

India B Team Rishabh Pant hilariously joins India A huddle in Duleep Trophy video goes viral kvn

ಬೆಂಗಳೂರು: ಎದುರಾಳಿ ತಂಡದ ಗೇಮ್‌ಪ್ಲಾನ್ ತಿಳಿಯದೇ, ಹಲವು ನಾಯಕರು ತಲೆಕೆಡಿಸಿಕೊಂಡಿರ್ತಾರೆ. ಅವ್ರು ಬೀಸಿದ ಬಲೆಗೆ ಈಸಿಯಾಗಿ ಬಿದ್ದು ಬಿಡ್ತಾರೆ. ಆದ್ರೆ, ಈ ಆಟಗಾರ ಮಾತ್ರ ಸೀದಾ ಅಪೋಜಿಷನ್ ತಂಡದ ಮೀಟಿಂಗ್ ಎಂಟ್ರಿ ನೀಡಿದ್ದಾರೆ. ಮ್ಯಾಚ್ ಗೆಲ್ಲೋದಕ್ಕೆ ಅವ್ರ ಗೇಮ್‌ಪ್ಲಾನ್ ಏನು ಅಂತ ತಿಳಿದುಕೊಂಡಿದ್ದಾರೆ. 

ಪಂದ್ಯ ಗೆಲ್ಲಲು ಡೆಲ್ಲಿ ಡ್ಯಾಶರ್ ಮಾಡಿದ್ದೇನು ಗೊತ್ತಾ..? 

ರಿಷಭ್ ಪಂತ್..! ಟೀಂ ಇಂಡಿಯಾದ ಡ್ಯಾಶಿಂಗ್ ಆ್ಯಂಡ್ ಡೇರಿಂಗ್ ಬ್ಯಾಟ್ಸ್‌ಮನ್. ಈ ಯಂಗ್‌ಸ್ಟರ್ ಸಿಡಿದು ನಿಂತ್ರೆ, ಮ್ಯಾಚ್ ಒನ್ಸೈಡೇ. 2021ರ ಆಸ್ಟ್ರೇಲಿಯಾ ವಿರುದ್ಧದ ಗಾಬಾ ಟೆಸ್ಟ್ ಮ್ಯಾಚ್ ಅದಕ್ಕೆ ಬೆಸ್ಟ್ ಎಕ್ಸಾಂಪಲ್. ಅವ್ರ ನೆಲದಲ್ಲೇ ಪಂತ್, ಆಸೀಸ್ ಬೌಲರ್‌ಗಳನ್ನ  ಅಟ್ಟಾಡಿಸಿ ಹೊಡೆದಿದ್ರು. ಆ ಮೂಲಕ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ರು.  

ಕಾರ್ ಆ್ಯಕ್ಸಿಡೆಂಟ್‌ನಲ್ಲಿ ಪವಾಡ ರೀತಿಯಲ್ಲಿ ಬದುಕುಳಿದಿದ್ದ ಪಂತ್, ಒಂದೂವರೆ ವರ್ಷ ಕ್ರಿಕೆಟ್ನಿಂದ ದೂರ ಉಳಿದಿದ್ರು. ಈ ಬಾರಿಯ ಐಪಿಎಲ್‌ ಮೂಲಕ ಮತ್ತೆ ಕ್ರಿಕೆಟ್ಫೀಗೆ  ಸ್ಟ್ರಾಂಗ್‌ ಕಮ್ಬ್ಯಾಕ್ ಮಾಡಿದ್ರು. ಟಿ20 ವಿಶ್ವಕಪ್ನಲ್ಲೂ ಮಿಂಚಿದ್ರು. ಇನ್ನು ಪಂತ್ ಬ್ಯಾಟಿಂಗ್ ಮೂಲಕ ಅಷ್ಟೇ ಅಲ್ಲ, ತಮ್ಮ ನಡೆ ನುಡಿಗಳ ಮೂಲಕವೂ ಫ್ಯಾನ್ಸ್‌ಗೆ ಮಸ್ತ್ ಮನರಂಜನೆ ನೀಡ್ತಾರೆ. 

ರನ್‌ ಮಷಿನ್ ವಿರಾಟ್ ಕೊಹ್ಲಿ ಹಾದಿಯಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ..!

ಮೈದಾನದಲ್ಲಿ ಸದಾ ಕೂಲ್ ಆಗಿರೋ ಪಂತ್, ಎದುರಾಳಿ ಆಟಗಾರರ ಕಾಲೆಳೆಯೋದ್ರಲ್ಲಿ. ವಿಕೆಟ್ ಹಿಂದೆ ನಿಂತು ತಮ್ಮ ಮಾತುಗಳಿಂದಲೇ ಬ್ಯಾಟ್ಸ್‌ಮನ್‌ಗಳಿಗೆ ಕಾಟ ಕೊಡೋದ್ರಲ್ಲಿ ಪಂಟರ್. ಆದ್ರೀಗ ಒಂದು ಸ್ಪೆಪ್ ಮುಂದೆ ಹೋಗಿ, ಅಪೋಜಿಷನ್ ಟೀಮ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಆ ಮೂಲಕ ಅವ್ರ ಗೇಮ್‌ಪ್ಲಾನ್ ತಿಳಿದುಕೊಂಡಿದ್ದಾರೆ. 

ಯೆಸ್, ದುಲೀಪ್ ಟ್ರೋಫಿಯ ಭಾಗವಾಗಿ ಬೆಂಗಳೂರಿನಲ್ಲಿ ಇಂಡಿಯಾ A ಮತ್ತು ಇಂಡಿಯಾ B ತಂಡ ನಡುವೆ ಮ್ಯಾಚ್ ನಡೆದಿತ್ತು. ಮ್ಯಾಚ್ನ ನಾಲ್ಕನೇ ದಿನವಾದ ನಿನ್ನೆ, ಇಂಡಿಯಾ A, ಟೀಂ ಹಡಲ್ ನಡೆಸಿತ್ತು. ಪಂದ್ಯದ ಗೇಮ್ಪ್ಲ್ಯಾನ್ ಬಗ್ಗೆ ನಾಯಕ ಶುಭ್ಮನ್ ಗಿಲ್ ಆಟಗಾರರಿಗೆ ತಿಳಿಸುತ್ತಿದ್ರು. ಈ ವೇಳೆ ಪಂತ್ ಕೂಡ ಎಂಟ್ರಿ ನೀಡಿದ್ರು. ಪಂತ್ ಇದ್ದರೂ ಲೆಕ್ಕಿಸದೇ ಗಿಲ್ ತಮ್ಮ ಮಾತು ಮುಂದುವರಿಸಿದ್ರು.  ಈ ವೀಡಿಯೋವನ್ನ ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ.

ಕುಲ್ದೀಪ್ ಯಾದವ್‌ಗೆ  ಪಂತ್ ಫುಲ್ ಕಾಟ..! 

ಇನ್ನು ಇದೇ ಪಂದ್ಯದಲ್ಲಿ ಪಂತ್, ಕುಲ್ದೀಪ್ ಬ್ಯಾಟಿಂಗ್ ಮಾಡುವಾಗ ಸುಮ್ಮನಿರದ ಪಂತ್, ಎಲ್ಲರೂ ಮುಂದೆ ಬನ್ನಿ ಈಗ ಸಿಂಗಲ್ ತಗೋತಾನೆ ಅಂತ ಛೇಡಿಸಿದ್ರು. ಆಗ ಕುಲ್ದೀಪ್ ಇಲ್ಲ ನಾನು ತಗೊಳ್ಳಲ್ಲ ಅಂದ್ರು. ಅಷ್ಟಕ್ಕೆ ಸುಮ್ಮನಾಗದ ಪಂತ್, ನೀನು ನಿನ್ ಅಮ್ಮನ ಮೇಲೆ ಆಣೆ ಮಾಡಿ ಹೇಳು ತಗೋಳಲ್ಲ ಅಂತ ಕೇಳಿದ್ರು. ಇವರಿಬ್ಬರ ಈ ಸಂಭಾಷಣೆ ಮ್ಯಾಚ್ ವೀಕ್ಷಿಸುತ್ತಿದ್ದವರಿಗೆ ಸಖತ್ ಮಜಾ ನೀಡ್ತು.  

ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ: ಎರಡು ಯುವ ವೇಗಿಗಳಿಗೆ ಸ್ಥಾನ

ವಿರಾಟ್ ಕೊಹ್ಲಿ, ಪಾಂಟಿಂಗ್‌ರನ್ನೂ ಬಿಟ್ಟಿಲ್ಲ..!

ಯೆಸ್, ಪಂತ್ ಆಸೀಸ್ ಲೆಜೆಂಡ್ ರಿಕಿ ಪಾಟಿಂಗ್ರನ್ನೂ ಬಿಟ್ಟಿಲ್ಲ. 2020ರ IPL ವೇಳೆ, ಡೆಲ್ಲಿ ಕ್ಯಾಪಿಟಲ್ಸ್  ಕೋಚ್ ಆಗಿದ್ದ ಪಾಂಟಿಂಗ್, ಟಿವಿ ಕಾಮೆಂಟೇಟರ್ಸ್ಗೆ ಆನ್ಫೀಲ್ಡ್ನಿಂದಲೇ ಸಂದರ್ಶನ ನೀಡ್ತಿದ್ರು. ಈ ವೇಳೆ ಪಂತ್ ಹಿಂದಿನಿಂದ ಬಂದು ಕ್ಯಾಮೆರಾಗೆ ಪೋಸ್ ನೀಡಿದ್ರು.

ವಿಕೆಟ್ ಕೀಪಿಂಗ್ ಮಾಡುವಾಗಲಂತೂ ಪಂತ್ರಿಂದ ಬ್ಯಾಟ್ಸ್ಮನ್ಗಳಿಗೆ ಕಾಟ ತಪ್ಪಿದ್ದಲ್ಲ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಮ್ಯಾಚ್ ವೇಳೆ ಟಿಮ್ ಪೇನ್ ಅವ್ರನ್ನ ಟೆಂಪರೆರಿ ಕ್ಯಾಪ್ಟನ್ ಅಂತ ಕರೆದಿದ್ರು. ಒಟ್ಟಿನಲ್ಲಿ ಪಂತ್ ಒಬ್ಬ ಟ್ರೂ ಎಂಟ್ರಟೇನರ್, ಪಂತ್ರಂತ ಆಟಗಾರ ತಂಡದಲ್ಲಿದ್ರೆ ತಂಡದಲ್ಲಿ ನಗುವಿಗೆ ಬರವೇ ಇರೋದಿಲ್ಲ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Latest Videos
Follow Us:
Download App:
  • android
  • ios