ಟೀಮ್‌ ಇಂಡಿಯಾ ಪ್ಲೇಯರ್‌ಗಳ ಹೆಸರಲ್ಲೂ ಜಾತಿ ಕಂಡ ಚಿದಂಬರಂ ಪುತ್ರ, ಬಿಸಿಸಿಐಗೆ ಮಾಡಿದ್ರು ಈ ರಿಕ್ವೆಸ್ಟ್‌!

Published : Nov 06, 2023, 08:29 PM ISTUpdated : Nov 06, 2023, 08:31 PM IST
ಟೀಮ್‌ ಇಂಡಿಯಾ ಪ್ಲೇಯರ್‌ಗಳ ಹೆಸರಲ್ಲೂ ಜಾತಿ ಕಂಡ ಚಿದಂಬರಂ ಪುತ್ರ, ಬಿಸಿಸಿಐಗೆ ಮಾಡಿದ್ರು ಈ ರಿಕ್ವೆಸ್ಟ್‌!

ಸಾರಾಂಶ

Congress MP Karti P Chidambaram BCCI must advise players to drop their caste names: ಮಾಜಿ ಕೇಂದ್ರ ಸಚಿವ ಕಾರ್ತಿ ಚಿದಂಬರಂ, ಬಿಸಿಸಿಐಗೆ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಈ ಕುರಿತಾಗಿ ಅವರು ತಮ್ಮ ಟ್ವಿಟರ್‌ನಲ್ಲಿ ಸ್ವತಃ ಬಿಸಿಸಿಐಗೆ ರಿಕ್ವೆಸ್ಟ್‌ ಮಾಡಿದ್ದಾರೆ.

ಚೆನ್ನೈ (ನ.6): ಕಾಂಗ್ರೆಸ್‌ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಪುತ್ರ ಟೀಮ್‌ ಇಂಡಿಯಾ ಕ್ರಿಕೆಟಿಗರನ್ನು ಜಾತಿ ಕಂಡಿದ್ದಾರೆ. ಟೀಮ್‌ ಇಂಡಿಯಾ ಪ್ಲೇಯರ್‌ಗಳು ರಾಷ್ಟ್ರೀಯ ತಂಡದ ಜೆರ್ಸಿ ಧರಿಸಿದ್ದಾಗ ಅವರು ತಮ್ಮ ಜಾತಿಯ ಹೆಸರುಗಳನ್ನು ಹೊಂದಿರಬಾರದು. ಈ ಕುರಿತಾಗಿ ಸ್ವತಃ ಬಿಸಿಸಿಐ ತಮ್ಮ ಅಟಗಾರರಿಗೆ ಸೂಚನೆ ನೀಡಬೇಕು. ಅವರು ತಮ್ಮ ಜಾತಿಯ ಹೆಸರು ಹಾಕಿಕೊಳ್ಳದಂತೆ ಒತ್ತಾಯಸಬೇಕು ಎಂದು ಮನವಿ ಮಾಡಿದ್ದಾರೆ.ಭಾರತದಲ್ಲಿ ಕ್ರಿಕೆಟ್ ಪಂದ್ಯಗಳು ಜಾತಿ, ಧರ್ಮ ಮತ್ತು ವರ್ಗವನ್ನು ಲೆಕ್ಕಿಸದೆ ಸಮಾಜದ ಎಲ್ಲಾ ವರ್ಗದ ಜನರು ಆನಂದಿಸುವ ಆಟವಾಗಿದೆ. ಇತರ ದೇಶಗಳಿಗಿಂತ ಭಾರತದಲ್ಲಿ ಕ್ರಿಕೆಟ್‌ಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಆದರೆ, ಕ್ರಿಕೆಟ್‌ನಲ್ಲಿಯೂ ಜಾತಿ ಸಂಬಂಧಿತ ಚರ್ಚೆಗಳು ಕಾಲಕಾಲಕ್ಕೆ ಉದ್ಭವಿಸುತ್ತವೆ. ಈ ಹಿಂದೆ ಕ್ರಿಕೆಟ್‌ ತಂಡದಲ್ಲೂ ಮೀಸಲಾತಿ ಇರಬೇಕು ಎನ್ನುವ ವಾದಗಳು ಬಂದಿದ್ದವು. ಈಗ ಇಡೀ ದೇಶದಲ್ಲಿ ಜಾತಿ ಗಣತಿ ಆಗಬೇಕು ಎಂದು ಒತ್ತಾಯ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷದ ಸಂಸದರೇ, ಟೀಮ್‌ ಇಂಡಿಯಾ ಆಟಗಾರರು ತಮ್ಮ ಜೆರ್ಸಿಯಲ್ಲಿ ಜಾತಿ ಹೆಸರನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದಲ್ಲಿ ಕೆಲವು ಜಾತಿಗಳು ಹಿಂದಿನಿಂದಲೂ ಪ್ರಾಬಲ್ಯ ಸಾಧಿಸುತ್ತಿವೆ ಎಂಬ ಆರೋಪವೂ ಇದೆ. ಅಲ್ಲದೆ, ಜಾತಿಯ ಆಧಾರದ ಮೇಲೆ ಆನಂದಿಸುತ್ತಿರುವ ಕ್ರಿಕೆಟ್, ಆಟಗಾರರು ತಮ್ಮ ಹೆಸರಿನೊಂದಿಗೆ ಜಾತಿ ಪ್ರತ್ಯಯಗಳನ್ನು ಸೇರಿಸುವ ಟೀಕೆಗೆ ಮೊದಲಿನಿಂದಲೂ ಗುರಿಯಾಗುತ್ತಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ ಆಡುತ್ತಿರುವ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಸೂರ್ಯ ಕುಮಾರ್ ಯಾದವ್, ಕುಲದೀಪ್ ಯಾದವ್ ಸೇರಿದಂತೆ ಹಲವು ಪ್ರಮುಖ ಆಟಗಾರರು ತಮ್ಮ ಹೆಸರಿನ ಹಿಂದೆ ಜಾತಿಯ ಹೆಸರನ್ನು ಹೊಂದಿದ್ದಾರೆ. ಇನ್ನು ವಿರಾಟ್‌ ಕೊಹ್ಲಿಯ ಹೆಸರಲ್ಲಿ ಕೊಹ್ಲಿ ಎನ್ನುವುದು ಕೂಡ ಜಾತಿ ಸೂಚಕವಾಗಿದೆ.

ಕ್ರಿಕೆಟಿಗರು ತಮ್ಮ ಹೆಸರಿನ ಹಿಂದೆ ಜಾತಿಯ ಹೆಸರನ್ನು ಬಳಸುವುದು ಪ್ರಸ್ತುತ ತಂಡದಲ್ಲಿರುವ ಆಟಗಾರರಲ್ಲದೇ ಬಹಳ ಹಿಂದಿನಿಂದಲೂ ಅಭ್ಯಾಸದಲ್ಲಿದೆ. ಕ್ರಿಕೆಟಿಗರ ಹೆಸರಿನ ಹಿಂದೆ ಇರುವ ಜಾತಿಯ ಗುರುತನ್ನು ತೆಗೆದುಹಾಕಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಬಹಳ ವರ್ಷಗಳಿಂದ ಒತ್ತಾಯ ಮಾಡುತ್ತೊದ್ದಾರೆ.

ಈ ಹಂತದಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಬಿಸಿಸಿಐಗೆ ವಿಶೇಷ ಮನವಿ ಸಲ್ಲಿಸಿದ್ದಾರೆ. ಕಾರ್ತಿ ಚಿದಂಬರಂ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ "ಭಾರತೀಯ ಕ್ರಿಕೆಟ್ ತಂಡಕ್ಕೆ ತಮ್ಮ ಆಟಗಾರರ ಹಿಂದೆ ಜಾತಿಯ ಹೆಸರನ್ನು ಬಿಡುವಂತೆ ಬಿಸಿಸಿಐ ಸೂಚಿಸಬೇಕು" ಎಂದು ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಬಿಸಿಸಿಐಗೂ ಅವರು ಟ್ಯಾಗ್‌ ಮಾಡಿದ್ದಾರೆ.

ಸರ್ಕಾರಿ ಪ್ರಾಯೋಜಿತ ದಾಳಿ ಸಂದೇಶ ವಿವಾದ: ಸಂಸತ್ತಿನ ಐಟಿ ಸಮಿತಿಯಿಂದ ಆ್ಯಪಲ್‌ ಕಂಪನಿಗೆ ಸಮನ್ಸ್‌ ಸಾಧ್ಯತೆ

ಇನ್ನು ಕಾರ್ತಿ ಚಿದಂಬರಂ ಅವರ ಪೋಸ್ಟ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ. 'ಒಂದು ಕಡೆ ನಿಮ್ಮದೇ ಪಕ್ಷ ಜಾತಿ ಗಣತಿ ಮಾಡುವಂತೆ ಹೇಳುತ್ತಿದೆ. ಇನ್ನೊಂದೆಡೆ ನೀವು ಜಾತಿಯ ಹೆಸರನ್ನೇ ತೆಗೆಯಿರಿ ಎನ್ನುತ್ತಿದ್ದೀರಿ. ಬೂಟಾಟಿಕೆ ಅನ್ನೋದಿದ್ದರೆ ಅದು ಕಾಂಗ್ರೆಸ್‌ ಮಾತ್ರ' ಎಂದು ಸ್ವಾತಿ ಬೆಲ್ಲಮ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

Money Laundering case ಕಾರ್ತಿ ಚಿದಂಬರಂ ನಿರೀಕ್ಷಣಾ ಜಾಮೀನು ಅರ್ಜಿ ವಜಾ!

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana