ವಿಜಯ್‌ ಹಜಾರೆ ಟ್ರೋಫಿ ದಾಖಲೆ, ಜಾರ್ಖಂಡ್‌ ವಿರುದ್ಧ 413 ರನ್‌ ಬೆನ್ನಟ್ಟಿ ಗೆದ್ದ ಕರ್ನಾಟಕ!

Published : Dec 24, 2025, 08:15 PM IST
Devdutt Padikkal 100

ಸಾರಾಂಶ

ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ, ಇಶಾನ್ ಕಿಶನ್ ಅವರ ಶತಕದ ನೆರವಿನಿಂದ ಜಾರ್ಖಂಡ್ 412 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ, ದೇವದತ್ ಪಡಿಕ್ಕಲ್ ಅವರ ಅಬ್ಬರದ 147 ರನ್‌ಗಳ ನೆರವಿನಿಂದ ಕರ್ನಾಟಕ ತಂಡವು ಐತಿಹಾಸಿಕವಾಗಿ ಈ ಗುರಿಯನ್ನು ಬೆನ್ನಟ್ಟಿ, 5 ವಿಕೆಟ್‌ಗಳ ಜಯ ಸಾಧಿಸಿತು.

ಅಹಮದಾಬಾದ್ (ಡಿ.24): ದೇವದತ್‌ ಪಡಿಕ್ಕಲ್‌ ಅವರ ಮೆಗಾ ಸೆಂಚುರಿ ಸಾಹಸದಿಂದ ಕರ್ನಾಟಕ ತಂಡ ಬುಧವಾರ ನಡೆದ ವಿಜಯ್‌ ಹಜಾರೆ ಟ್ರೋಫಿ ಪಂದ್ಯದಲ್ಲಿ ಜಾರ್ಖಂಡ್‌ನೀಡಿದ 413 ರನ್‌ಗಳ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಬೃಹತ್‌ ಗುರಿ ಬೆನ್ನಟ್ಟುವ ಹಾದಿಯಲ್ಲಿ ಕರ್ನಾಟಕ ತಂಡ ಐದು ವಿಕೆಟ್‌ ಕಳೆದುಕೊಂಡಿತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಬಿ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಮಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ಕಳೆದ ಸಯ್ಯದ ಮುಷ್ತಾಕ್‌ ಅಲಿ ಟಿ20 ಟ್ರೊಫಿಯಲ್ಲಿ ಭರ್ಜರಿ ನಿರ್ವಹಣೆ ತೋರಿ ಚಾಂಪಿಯನ್‌ ಆಗಿದ್ದ ಜಾರ್ಖಂಡ್‌ ತಂಡ ವಿಜಯ್‌ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲೂ ಅದೇ ಆಟವನ್ನು ಮುಂದುವರಿಸಿತು. ನಾಯಕ ಇಶಾನ್‌ ಕಿಶನ್‌ ಕರ್ನಾಟಕದ ಬೌಲರ್‌ಗಳನ್ನು ದಯನೀಯವಾಗಿ ಬೆಂಡೆತ್ತಿದರು. ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ ಇಶಾನ್‌ ಕಿಶನ್‌, ಕೇವಲ 39 ಎಸೆತಗಳಲ್ಲಿ ಬರೋಬ್ಬರಿ 14 ಸಿಕ್ಸರ್‌ ಹಾಗೂ 7 ಬೌಂಡರಿಗಳಿದ್ದ 125 ರನ್‌ ಬಾರಿಸಿದರು. ಇವರ ಉತ್ತಮ ಬ್ಯಾಟಿಂಗ್‌ ನೆರವಿನಿಂದ ಜಾರ್ಖಂಡ್‌ ತಂಡ 9 ವಿಕೆಟ್‌ ನಷ್ಟಕ್ಕೆ 412 ರನ್ ಬಾರಿಸಲು ಯಶ ಕಂಡಿತು.

ದೇವದತ್‌ ಪಡಿಕ್ಕಲ್‌ ಶತಕದ ಆಸರೆ

413 ರನ್‌ಗಳ ಬೃಹತ್‌ ಮೊತ್ತದ ಚೇಸಿಂಗ್‌ ನಡೆಸಿದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರ ದೇವದತ್‌ ಪಡಿಕ್ಕಲ್‌ ಆಸರೆಯಾದರು. 118 ಎಸೆತಗಳಲ್ಲಿ ಪಡಿಕ್ಕಲ್‌ 10 ಬೌಂಡರಿ, 7 ಸಿಕ್ಸರ್‌ ಇದ್ದ 147 ರನ್‌ ಬಾರಿಸಿ ಮಿಂಚಿದರು. ಇದರಿಂದಾಗಿ ಕರ್ನಾಟಕ ತಂಡ ಕೇವಲ 5 ವಿಕೆಟ್‌ ನಷ್ಟಕ್ಕೆ 413 ರನ್‌ಗಳ ಗುರಿ ತಲುಪಿತು. ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಕರ್ನಾಟಕ ಗುರಿ ತಲುಪಿದ್ದು ವಿಶೇಷವಾಗಿತ್ತು. ಇದು ವಿಜಯ್‌ ಹಜಾರೆ ಟ್ರೋಫಿಯ ಅತ್ಯಂತ ಯಶಸ್ವಿ ಚೇಸಿಂಗ್‌ ಎನಿಸಿಕೊಂಡಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಜಯ್ ಹಜಾರೆ ಟ್ರೋಫಿ ಕಮ್‌ಬ್ಯಾಕ್‌ ಪಂದ್ಯದಲ್ಲಿ ಶತಕ ಚಚ್ಚಿದ ಕಿಂಗ್ ಕೊಹ್ಲಿ! ವಿರಾಟ್‌ಗಿದು ಕಳೆದ 4 ಪಂದ್ಯಗಳಲ್ಲಿ 3ನೇ ಶತಕ
ಒಂದು ಗಂಟೆಯೂ ಉಳಿಯಲಿಲ್ಲ ಇಶಾನ್ ಕಿಶನ್ ಅತಿವೇಗದ ಶತಕದ ರೆಕಾರ್ಡ್; ವೈಭವ್ ಸೂರ್ಯವಂಶಿ ಕ್ಯಾಪ್ಟನ್ ಪಾಲಾದ ಹೊಸ ದಾಖಲೆ