ಕಸ ನಿರ್ವಹಣೆಗೆ ಕೆಎಸ್‌ಸಿಎ ಹೊಸ ತಂತ್ರ!

By Web DeskFirst Published Mar 1, 2019, 9:09 AM IST
Highlights

ಕಸ ನಿರ್ವಹಣೆ ಮಾಡಲು KSCA ಹೊಸ ತಂತ್ರ ಅನುಸರಿಸೋ ಮೂಲಕ ದೇಶಕ್ಕೆ ಮಾದರಿಯಾಗಿದೆ.  ಪ್ಲಾಸಿಕ್ಟ್ ತಡೆಗೆ ದಿಟ್ಟ ಕ್ರಮ ಕೈಗೊಂಡಿರುವ ರಾಜ್ಯ ಕ್ರಿಕೆಟ್ ಸಂಸ್ಥೆ ಇದೀಗ ಅಡಕೆ ಎಲೆಗಳ ಪ್ಲೇಟ್ ಬಳಕೆ ಮಾಡಿದೆ. ಇಷ್ಟೇ ಅಲ್ಲ ಇವುಗಳ ನಿರ್ವಹಣೆಗೂ ಎಲ್ಲಾ ಕ್ರಮ ಕೈಗೊಂಡಿದೆ. 

ಬೆಂಗಳೂರು(ಮಾ.01): ಹಲವು ಹೊಸತನಗಳಿಗೆ ಸಾಕ್ಷಿಯಾಗಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಮತ್ತೊಂದು ಅಂತಹದ್ದೆ ಕಾರ‍್ಯಕ್ರಮ ನಡೆಸಿ ಸುದ್ದಿಯಾಗಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆ. 27 ರಂದು ನಡೆದ ಭಾರತ-ಆಸ್ಪ್ರೇಲಿಯಾ 2ನೇ ಟಿ20 ಪಂದ್ಯದ ವೇಳೆ ಕಸ ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ), ಸಾಹಸ್‌ ಜಿರೋ ವೇಸ್ಟ್‌ (ಎಸ್‌ಜೆಡ್‌ಡಬ್ಲ್ಯೂ) ಸಂಸ್ಥೆಯೊಂದಿಗೆ ಜಂಟಿ ಕಾರ‍್ಯಚರಣೆ ನಡೆಸಿದೆ. 

ಇದನ್ನೂ ಓದಿ: ಇಂಡೋ-ಪಾಕ್ ಟೆನ್ಶನ್: ಭಾರತ-ಆಸೀಸ್‌ ಏಕದಿನ ಬೆಂಗಳೂರಿಗೆ ಶಿಫ್ಟ್‌?

ಬುಧವಾರ ನಡೆದ ಪಂದ್ಯವನ್ನು 32 ಸಾವಿರ ಪ್ರೇಕ್ಷರು ವೀಕ್ಷಿಸಿದರು. ಎಲ್ಲೆಂದರಲ್ಲಿ ಕಸ ಹರಡಬಾರದು ಎನ್ನುವ ಉದ್ದೇಶಕ್ಕಾಗಿ ವಿವಿಧ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅಲ್ಲಲ್ಲಿ ಕಸದ ಬುಟ್ಟಿಗಳನ್ನು ಇರಿಸಲಾಗಿತ್ತು. ಪ್ಲಾಸ್ಟಿಕ್‌ ಬಳಕೆಗೆ ಕತ್ತರಿ ಹಾಕಲು ಅಡಕೆ ಎಲೆಗಳ ಪ್ಲೇಟ್‌, ಮರದ ಚಮಚಗಳನ್ನು ಉಪಯೋಗಿಸಲಾಯಿತು. 

ಇದನ್ನೂ ಓದಿ: ವಿಶ್ವಕಪ್ ಭದ್ರತೆ ಕುರಿತು ಬಿಸಿಸಿಐಗೆ ಐಸಿಸಿ ಭರವಸೆ

ಪ್ಲಾಸ್ಟಿಕ್‌ ಬಾವುಟಗಳಿಗೆ ನಿರ್ಬಂಧ, ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಎಂಬ ಒಕ್ಕಣೆ ಹಾಕಲಾಗಿತ್ತು. ಇದರಿಂದಾಗಿ ಪಂದ್ಯ ಮುಕ್ತಾಯದ ಬಳಿಕ ಕ್ರೀಡಾಂಗಣದಲ್ಲಿ 1 ಟನ್‌ ಹಸಿ ಕಸ, 3.3 ಟನ್‌ ಒಣ ಕಸವನ್ನು ಸಂಗ್ರಹಿಸಲಾಗಿದೆ ಎಂದು ಕೆಎಸ್‌ಸಿಎ ವಕ್ತಾರ ವಿನಯ್‌ ಮೃತ್ಯಂಜಯ ತಿಳಿಸಿದ್ದಾರೆ. ರಾಜ್ಯ ಕ್ರಿಕೆಟ್‌ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

click me!