ಕಿರಿಯರ ವಿಶ್ವಕಪ್ ತಂಡದಲ್ಲಿ ರಾಯಚೂರಿನ ಹುಡುಗ/ ರಾಯಚೂರಿನ ವಿದ್ಯಾಧರ ಪಾಟೀಲ್ ಆಯ್ಕೆ/ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ/ 2020 ರಲ್ಲಿ ನಡೆಯಲಿರುವ ವಿಶ್ವಕಪ್
ರಾಯಚೂರು (ಡಿ. 02) ಅಂಡರ್ 19 ಕ್ರಿಕೆಟ್ ವಿಶ್ವಕಪ್ ತಂಡ ಪ್ರಕಟವಾಗಿದ್ದು ಕರ್ನಾಟಕದ ಅದರಲ್ಲೂ ರಾಯಚೂರಿನ ಹುಡುಗ ಸ್ಥಾನ ಪಡೆದುಕೊಂಡಿದ್ದಾರೆ. ಹೊಸ ಕ್ರಿಕೆಟ್ ಪ್ರತಿಭೆ ಅರಳಲು ವೇದಿಕೆ ಸಿದ್ಧವಾಗಿದೆ.
ರಾಯಚೂರಿನ ವಿದ್ಯಾಧರ ಪಾಟೀಲ್ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ. BCCI ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
14 ಜನರ ತಂಡದ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿದ್ಯಾಧರ ಪಾಟೀಲ್ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ಈ ಹಿಂದೆ ರಾಯಚೂರಿನ ಯರೇಗೌಡ ಅನ್ನುವವರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು.
ಮುಂದಿನ ವರ್ಷ ಅಂದ್ರೆ 2020ರಲ್ಲಿ ನಡೆಯಲಿರುವ ಕಿರಿಯರ ಕ್ರಿಕೆಟ್ ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.
ಉತ್ತರ ಪ್ರದೇಶದ ಅನುಭವಿ ಆಟಗಾರ ಪ್ರಿಯಂ ಗರ್ಗ್ ನೇತೃತ್ವದಲ್ಲಿ 15 ಆಟಗಾರರ ತಂಡವನ್ನು ಭಾರತೀಯ ಕ್ರಿಕೆಟ್ ಮಂಡಳಿ [ಬಿಸಿಸಿಐ] ಆಯ್ಕೆ ಮಾಡಿ ಇಂದು [ಸೋಮವಾರ] ಪ್ರಕಟಿಸಿತ್ತು.
ಅಂಡರ್ 19 ವಿಶ್ವಕಪ್: ಭಾರತಕ್ಕೆ ಲಂಕಾ ಮೊದಲ ಎದುರಾಳಿ
ಈ ಬಾರಿಯ ಏಕದಿನ ವಿಶ್ವಕಪ್ ಜನವರಿ 17ರಿಂದ ಫೆಬ್ರವರಿ 9ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ವಿಶ್ವಕಪ್ಗೂ ಮುನ್ನ ಅಭ್ಯಾಸಕ್ಕೆಂದು ದಕ್ಷಿಣ ಆಫ್ರಿಕಾದಲ್ಲಿ ಒಂದೆರಡು ಸರಣಿಗಳನ್ನು ಆಡಲಿದೆ.
ಭಾರತ ತಂಡ ಈಗಾಗಲೇ 4 ಬಾರಿ ಚಾಂಪಿಯನ್ಸ್ ಆಗಿದ್ದು, ಈಗ 5ನೇ ಬಾರಿ ಚಾಂಪಿಯನ್ ಆಗಲು ಪ್ರಿಯಂ ಗರ್ಗ್ ನಾಯಕತ್ವದ ಭಾರತ ತಂಡ ಫೇವರಿಟ್ ಎನಿಸಿದೆ.
ನಾಯಕ ಪ್ರಿಯಂ ಗರ್ಗ್ ಅವರು ರಣಜಿ ಟ್ರೋಫಿ ಸೇರಿದಂತೆ ದೇಶೀಯ ಕ್ರಿಕೆಟ್ನಲ್ಲಿ ಆಡಿದ ಅನುಭವ ಹೊಂದಿದ್ಧಾರೆ. 2018ರ ರಣಜಿ ಋತುವಿನಲ್ಲಿ 2ನೇ ಗರಿಷ್ಠ ಮೊತ್ತದ ರನ್ ಗಳಿಸಿದ ದಾಖಲೆ ಇವರ ಹೆಸರಿನಲ್ಲಿದೆ.
ವಿಶ್ವಕಪ್‌ಗೆ ಭಾರತ ಕಿರಿಯರ ತಂಡ ಇಂತಿದೆ:
ಪ್ರಿಯಂ ಗಾರ್ಗ್ (ನಾಯಕ), ಧ್ರುವ್ ಚಂದ್ ಜುರೆಲ್ (ಉಪನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಾಕ್ ವರ್ಮಾ, ದಿವ್ಯಾಂಶ್ ಸಕ್ಸೆನಾ, ಶುಭಾಂಗ್ ಹೆಗ್ಡೆ, ರವಿ ಬಿಶ್ನೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲಕರ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸುಶಾಂತ್ ಮಿಶ್ರಾ ಮತ್ತು ವಿದ್ಯಾಧರ್ ಪಾಟೀಲ್.
ವಿಶ್ವಕಪ್ ಆಡಲಿರುವ ತಂಡಗಳು
‘ಎ’ ಗುಂಪು : ಭಾರತ, ನ್ಯೂಜಿಲೆಂಡ್, ಶ್ರೀಲಂಕಾ, ಜಪಾನ್
‘ಬಿ’ ಗುಂಪು : ಆಸ್ಪ್ರೇಲಿಯಾ, ವೆಸ್ಟ್‌ಇಂಡೀಸ್, ಇಂಗ್ಲೆಂಡ್, ನೈಜೀರಿಯಾ
‘ಸಿ’ ಗುಂಪು : ಪಾಕಿಸ್ತಾನ, ಬಾಂಗ್ಲಾದೇಶ, ಜಿಂಬಾಬ್ವೆ, ಸ್ಕಾಟ್ಲೆಂಡ್
‘ಡಿ’ ಗುಂಪು : ದಕ್ಷಿಣ ಆಫ್ರಿಕಾ, ಆಫ್ಘಾನಿಸ್ತಾನ, ಯುಎಇ, ಕೆನಡಾ
ಬರುವ ಜನವರಿಯಲ್ಲಿ ಪ್ರಯಾಣ ಬೆಳಸಲಿರುವ ಭಾರತ ತಂಡಕ್ಕೆ ಶುಭ ಹಾರೈಸಿ.