
ಮುಂಬೈ(ನ.02): ಟೀಂ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ರಾಜ್ಯ ನಾಯಕ ಮನೀಶ್ ಪಾಂಡೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ, ನಟಿ ಆಶ್ರಿತಾ ಶೆಟ್ಟಿ ಕೈ ಹಿಡಿದಿದ್ದಾರೆ. ಆಶ್ರಿತಾ ಶೆಟ್ಟಿ ಮಂಗಳೂರು ಮೂಲದವರಾಗಿದ್ದು, ಮುಂಬೈನಲ್ಲಿ ನೆಲೆಸಿದ್ದಾರೆ. ಹೀಗಾಗಿ ಪಾಂಡೆ-ಆಶ್ರಿತಾ ಶೆಟ್ಟಿ ವಿವಾಹಹ ಮುಂಬೈನಲ್ಲಿ ನಡೆದಿದೆ.
ಇದನ್ನೂ ಓದಿ: ಸತತ 2 ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮೊದಲ ತಂಡ ಕರ್ನಾಟಕ!
ಭಾನುವಾರ(ಡಿ.01) ಸಯ್ಯದ್ ಮುಷ್ತಾಕ್ ಆಲಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಿದ್ದರು. ತಮಿಳುನಾಡು ವಿರುದ್ಧ 1 ರನ್ ರೋಚಕ ಗೆಲುವು ಸಾಧಿಸಿದ ಪಾಂಡೆ, ಪಂದ್ಯದ ಸಮಾರೋಪ ಸಮಾರಂಭದ ಬಳಿಕ ನೇರವಾಗಿ ಸೂರತ್‌ನಿಂದ ಮುಂಬೈ ವಿಮಾನ ಹತ್ತಿದ್ದರು. ಮದುವೆಗೆ ಕೆಲವೇ ಗಂಟೆಗಳ ಮುಂಚೆ ಪಾಂಡೆ ಮುಂಬೈ ತಲುಪಿದ್ದಾರೆ.
ಇದನ್ನೂ ಓದಿ: ಮನೀಶ್ ಪಾಂಡೆ ಭರ್ಜರಿ ಶತಕ, ಕರ್ನಾಟಕಕ್ಕೆ ಬೃಹತ್ ಗೆಲುವು!
ಫೈನಲ್ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದ ಮನೀಶ್ ಪಾಂಡೆ ಕರ್ನಾಟಕದ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದಾದ ಮರುದಿನವೇ ಅಂದರೆ ಡಿಸೆಂಬರ್ 2 ರಂದು ಪಾಂಡೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತುಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಆಶ್ರಿತಾ ಶೆಟ್ಟಿ, ನೇರವಾಗಿ ತಮಿಳು ಚಿತ್ರದಲ್ಲಿ ನಾಯಕಿಯಾಗಿ ಅವಕಾಶ ಗಿಟ್ಟಿಸಿಕೊಂಡರು. ಮೂರು ತಮಿಳು ಚಿತ್ರಗಳಲ್ಲಿ ನಟಿಸಿರುವ ಆಶ್ರಿತಾ, ಮನೀಶ್ ಪಾಂಡೆ ಜೊತೆಗಿನ ಪರಿಚಯ ಆತ್ಮೀಯವಾಗಿ ಪ್ರೀತಿಯ ಅರ್ಥ ಪಡೆದಿತ್ತು. ಇದೀಗ ಇವರಿಬ್ಬರು ಮದುವೆಯಾಗೋ ಮೂಲಕ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
ಸಯ್ಯದ್ ಮುಷ್ತಾಕ್ ಆಲಿ ಟೂರ್ನಿ ಗೆಲುವಿನ ಬಳಿಕ ಪಾಂಡೆ ಮುದುವೆಗಾಗಿ ಮುಂಬೈ ವಿಮಾನ ಹತ್ತಿದ್ದರೆ, ಕರ್ನಾಟಕದ ತಂಡದ ಆಟಗಾರರು ತವರಿಗೆ ವಾಪಾಸ್ಸಾಗಿದ್ದಾರೆ. ಪಾಂಡೆ ಮದುವೆಯಲ್ಲಿ ಕರ್ನಾಟಕ ತಂಡದ ಕ್ರಿಕೆಟಿಗರು ಪಾಲ್ಗೊಂಡಿಲ್ಲ.
ಡಿಸೆಂಬರ್ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.