IPL 2022 ಆರ್‌ಸಿಬಿ ತಂಡದಲ್ಲಿದ್ದಾನೆ ಅದೃಷ್ಠವಂತ, ಟ್ರೋಫಿ ಖಚಿತ ಎಂದ ಫ್ಯಾನ್ಸ್!

Published : Mar 25, 2022, 07:25 PM IST
IPL 2022 ಆರ್‌ಸಿಬಿ ತಂಡದಲ್ಲಿದ್ದಾನೆ ಅದೃಷ್ಠವಂತ, ಟ್ರೋಫಿ ಖಚಿತ ಎಂದ ಫ್ಯಾನ್ಸ್!

ಸಾರಾಂಶ

ಹೈದ್ರಾಬಾದ್​-ಮುಂಬೈ ಚಾಂಪಿಯನ್ ಮಾಡಿದ ಲೆಗ್ ಸ್ಪಿನ್ನರ್ ಈ ಕ್ರಿಕೆಟಿಗ ತಂಡದಲ್ಲಿರುವಾಗ ಸಿಎಸ್‌ಕೆ 2 ಬಾರಿ ಚಾಂಪಿಯನ್ 2022ರಲ್ಲಿ ಆರ್‌ಸಿಬಿ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಎಂದ ಫ್ಯಾನ್ಸ್

ಬೆಂಗಳೂರು(ಮಾ.25) : ಐಪಿಎಲ್ ಟೂರ್ನಿಯಲ್ಲಿ(IPL 2022) ಒಂದೂ ಕಪ್ ಗೆಲ್ಲದ ತಂಡಗಳಲ್ಲಿ ನಮ್ಮ ಬೆಂಗಳೂರು(RCB) ಟೀಮ್ ಸಹ ಒಂದು. 14 ವರ್ಷಗಳಿಂದ ಐಪಿಎಲ್ ಟ್ರೋಫಿ(IPL Trophy) ಬರ ಎದುರಿಸುತ್ತಿದೆ. ನಾಲ್ಕೈದು ಕ್ಯಾಪ್ಟನ್ ಬದಲಾದ್ರು. ನೂರಾರು ಆಟಗಾರರು ಬಂದು ಹೋದ್ರು. ಆದ್ರೂ ಆರ್​ಸಿಬಿಗೆ ಐಪಿಎಲ್ ಕಪ್ ಮರೀಚೆಕೆಯಾಗಿಯೇ ಇದೆ. ಈ ಸಲ ಕಪ್ ನಮ್ದೆ ಅಂತ ನಾಲ್ಕೈದು ವರ್ಷಗಳಿಂದ ಹೇಳಿದ್ದೇ ಹೇಳಿದ್ದು. ಕಪ್ ಗೆಲ್ಲೋದಿರಲಿ, ಈ ಅಭಿಯಾನ ಸ್ಟಾರ್ಟ್​ ಆದ್ಮೇಲೆ ಆರ್​ಸಿಬಿ ಟೀಮ್ ಫೈನಲ್ ಸಹ ಪ್ರವೇಶಿಸಿಲ್ಲ. ಆದರೆ ಈ ಬಾರಿ ತಂಡದಲ್ಲೊಬ್ಬ ಅದೃಷ್ಠವಂತ ಸೇರಿಕೊಂಡಿದ್ದಾನೆ. ಹೀಗಾಗಿ ಪ್ರಶಸ್ತಿ ಖಚಿತ ಎನ್ನುತ್ತಿದ್ದಾರೆ ಅಭಿಮಾನಿಗಳು.

ಸ್ಪಿನ್ನರ್ ಕರಣ್ ಶರ್ಮಾ(Karan Sharma) ಯಾವ ತಂಡದಲ್ಲಿದ್ದಾರೋ ಆ ತಂಡ ಪ್ರಶಸ್ತಿ ಗೆದ್ದುಕೊಂಡ ಊದಾಹರಣೆಗಳೇ ಹೆಚ್ಚು. 14 ವರ್ಷದ್ದು ಒಂದು ಲೆಕ್ಕ. ಈ ವರ್ಷದ್ದು ಒಂದು ಲೆಕ್ಕ ಅಂತಿದ್ದಾರೆ ಆರ್‌ಸಿಬಿ ಅಭಿಮಾನಿಗಳು. ಯಾಕಂದರೆ ಈ ಸಲ ಟೀಮ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕ್ಯಾಪ್ಟನ್ ಸಹ ಬದಲಾಗಿದ್ದಾರೆ. ಜೊತೆಗೆ ಟೀಮ್‌ಗೆ ಒಬ್ಬ ಅದೃಷ್ಟವಂತ ಬಂದಿದ್ದಾನೆ. ಆತ ಆಡಿದ ಐಪಿಎಲ್ ತಂಡಗಳೆಲ್ಲಾ ಚಾಂಪಿಯನ್ ಆಗಿವೆ. ಮೂರು ತಂಡಗಳನ್ನ ಚಾಂಪಿಯನ್ ಮಾಡಿ ಈಗ ನಾಲ್ಕನೇ ತಂಡ ಆರ್‌ಸಿಬಿ ಸೇರಿಕೊಂಡಿದ್ದಾನೆ. ಒಟ್ಟು 4 ಟ್ರೋಫಿ ಹಿಡಿದಿದ್ದಾನೆ. 

ಐಪಿಎಲ್ ವೇಳೆ ಭಯೋತ್ಪಾದಕ ಕೃತ್ಯಕ್ಕೆ ಪ್ಲಾನ್, ಮುಂಬೈನಲ್ಲಿ ಬಿಗಿ ಭದ್ರತೆ!

ಹೈದ್ರಾಬಾದ್​-ಮುಂಬೈ ಚಾಂಪಿಯನ್ ಮಾಡಿದ ಲೆಗ್ ಸ್ಪಿನ್ನರ್:
2013ರಲ್ಲಿ ಐಪಿಎಲ್​​ಗೆ ಎಂಟ್ರಿಕೊಟ್ಟ ಕರಣ್ ಶರ್ಮಾ ಇದುವರೆಗೂ 67 ಪಂದ್ಯಗಳಿಂದ 59 ವಿಕೆಟ್ ಪಡೆದಿದ್ದಾರೆ. 316 ರನ್ ಸಹ ಹೊಡೆದಿದ್ದಾರೆ. 4 ವರ್ಷಗಳ ಕಾಲ ಹೈದ್ರಾಬಾದ್ ಪರ ಆಡಿದ ಕರಣ್, 2016ರಲ್ಲಿ ಚಾಂಪಿಯನ್ ಆದ ಸನ್ ರೈಸರ್ಸ್ ಹೈದ್ರಾಬಾದ್​ ಟೀಮ್​ ಮೆಂಬರ್ ಸಹ ಆಗಿದ್ದರು. ತಮ್ಮ ಲೆಗ್ ಸ್ಪಿನ್ ಜೊತೆ ಬ್ಯಾಟಿಂಗ್‌ನಲ್ಲೂ ಮಿಂಚಿ, ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದ್ದರು.

ಹೈದ್ರಾಬಾದ್​ನಿಂದ ಕರಣ್ ಬಂದಿದ್ದು ಮುಂಬೈ ಇಂಡಿಯನ್ಸ್​​ ತಂಡಕ್ಕೆ. 2017ರ ಸೀಸನ್​ನಲ್ಲಿ ಮುಂಬೈ ಪರ ಆಡಿದ ಕರಣ್, ಅಲ್ಲೂ ತಮ್ಮ ಸ್ಪಿನ್ ಜಾದೂ ತೋರಿಸಿದ್ರು. 2017ರಲ್ಲಿ ಮುಂಬೈ ಚಾಂಪಿಯನ್ ಆಯಿತು. ಆಗಲೂ ಕಪ್ ಹಿಡಿದು ಸಂಭ್ರಮಿಸಿದ್ದರು.

IPL 2022 ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ರವೀಂದ್ರ ಜಡೇಜಾಗೆ ನೀಡಿದ ಎಂಎಸ್ ಧೋನಿ!

ಸಿಎಸ್‌ಕೆ ಪರ ಎರಡು ಸಲ ಕಪ್ ಹಿಡಿದಿರುವ ಕರಣ್:
ಹೈದ್ರಾಬಾದ್ ಮತ್ತು ಮುಂಬೈ ಪರ ಉತ್ತಮ ಪ್ರದರ್ಶನ ನೀಡಿದ್ರೂ, ಆ ತಂಡಗಳು ಚಾಂಪಿಯನ್ ಆದ್ರೂ ಕರಣ್​​ ಅವರನ್ನ ಡ್ರಾಪ್ ಮಾಡಿದ್ವು. ಹಾಗಾಗಿ 2018ರಲ್ಲಿ ಕರಣ್ ಶರ್ಮಾ ಸಿಎಸ್​ಕೆ ಸೇರಿಕೊಂಡರು. ಧೋನಿ ಬಳಗದಲ್ಲೂ ತಮ್ಮ ಚಮತ್ಕಾರ ತೋರಿಸಿದ ಕರಣ್, ಅಲ್ಲೂ ಮಿಂಚಿದ್ರು. 2018 ಮತ್ತು 2021ರಲ್ಲಿ ಚಾಂಪಿಯನ್ ಆದ ಸಿಎಸ್​ಕೆ ತಂಡದಲ್ಲೂ ಕರಣ್ ಶರ್ಮಾ ಇದ್ದರು. ಸತತ ಮೂರು ಐಪಿಎಲ್ ಟ್ರೋಫಿ ಗೆದ್ದ ಏಕೈಕ ಆಟಗಾರ ಅನ್ನೋ ಸಾಧನೆಯನ್ನೂ ಮಾಡಿದ್ದಾರೆ.

ಕರಣ್ ಶರ್ಮಾ ಲೆಗ್ ಸ್ಪಿನ್ ಜೊತೆ ಬ್ಯಾಟಿಂಗ್ ಸಹ ಮಾಡ್ತಾರೆ. ಹಾಗಂತ ಗ್ರೇಟ್ ಪ್ಲೇಯರ್ ಏನು ಅಲ್ಲ. ಆದರೆ ಅದೃಷ್ಟವಂತ. ಅವರು ಯಾವ ತಂಡದ ಪರ ಆಡ್ತಾರೋ ಆ ತಂಡ ಚಾಂಪಿಯನ್ ಆಗುತ್ತೆ. ಮೂರು ತಂಡಗಳನ್ನ ಚಾಂಪಿಯನ್ ಮಾಡಿದ ಕೀರ್ತಿ ಕರಣ್​ಗೆ ಸಲ್ಲುತ್ತೆ. ಈ ಸಲ ಆರ್​ಸಿಬಿ ತಂಡ ಸೇರಿಕೊಂಡಿದ್ದಾರೆ. ಆ ಮೂರು ತಂಡಗಳನ್ನ ಚಾಂಪಿಯನ್ ಮಾಡಿದ ಹಾಗೆ ಆರ್​ಸಿಬಿ ತಂಡವನ್ನ ಚಾಂಪಿಯನ್ ಮಾಡ್ತಾರಾ..? ಈ ಅದೃಷ್ಟವಂತನ ರೂಪದಲ್ಲಾದ್ರು ಆರ್​ಸಿಬಿ ಐಪಿಎಲ್ ಕಪ್ ಗೆಲ್ಲುತ್ತಾ..? ಈ ಎಲ್ಲದಕ್ಕೂ ಇನ್ನೆರಡು ತಿಂಗಳಲ್ಲಿ ಉತ್ತರ ಸಿಗಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?