ವಿರಾಟ್ ಕೊಹ್ಲಿ ರೆಸ್ಟ್ ಮೇಲೆ ರೆಸ್ಟ್..! ಸೆಂಚುರಿ ರೇಸ್‌ನಲ್ಲಿ ಹಿಂದೆ ಬಿದ್ದ ಕಿಂಗ್ ಕೊಹ್ಲಿ

Published : Feb 07, 2024, 04:02 PM IST
ವಿರಾಟ್ ಕೊಹ್ಲಿ ರೆಸ್ಟ್ ಮೇಲೆ ರೆಸ್ಟ್..! ಸೆಂಚುರಿ ರೇಸ್‌ನಲ್ಲಿ ಹಿಂದೆ ಬಿದ್ದ ಕಿಂಗ್ ಕೊಹ್ಲಿ

ಸಾರಾಂಶ

ವಿರಾಟ್ ಕೊಹ್ಲಿ, ಸ್ಟೀವನ್ ಸ್ಮಿತ್, ಕೇನ್ ವಿಲಿಯಮ್ಸನ್, ಜೋ ರೂಟ್. ಈ ನಾಲ್ವರನ್ನ ವಿಶ್ವ ಕ್ರಿಕೆಟ್ನಲ್ಲಿ ಫ್ಯಾಬ್-4 ಎಂದು ಕರೆಯಲಾಗುತ್ತೆ. ಈ ನಾಲ್ವರು ಹೆಸ್ರು ಬಂದ್ರೆ ಫಾಬ್-4 ಎಂದೇ ಗುರುತಿಸಲಾಗುತ್ತೆ. ಫ್ಯಾಬ್-4ರಲ್ಲಿ ಕಿಂಗ್ ಕೊಹ್ಲಿ ಟಾಪ್ನಲ್ಲಿದ್ದರು. ರನ್ ಗಳಿಕೆಯಲ್ಲಿ. ಸೆಂಚುರಿ ಹೊಡೆಯೋದ್ರಲ್ಲಿ. ಎಲ್ಲದರಲ್ಲೂ ಮುಂದಿದ್ದರು. ಆದ್ರೀಗ ವಿರಾಟ್‌ರನ್ನೇ ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾರೆ ಉಳಿದ ಮೂವರು.

ಬೆಂಗಳೂರು(ಫೆ.07): ವಿರಾಟ್ ಕೊಹ್ಲಿ ಯಾಕೋ ರನ್ ಗಳಿಕೆಯಲ್ಲಿ, ಶತಕ ಹೊಡೆಯೋದ್ರಲ್ಲಿ ಹಿಂದೆ ಬಿದ್ದಿದ್ದಾರೆ. ಅವರಿಗಿಂತ ಶತಕ ದಾಖಲಿಸಿರೋದ್ರಲ್ಲಿ ತುಂಬಾನೇ ಹಿಂದಿದ್ದ ಆಟಗಾರರೆಲ್ಲಾ ಈಗ ಕೊಹ್ಲಿಗಿಂತ ಹೆಚ್ಚು ಸೆಂಚುರಿಗಳನ್ನ ಹೊಡೆದಿದ್ದಾರೆ. ದಕ್ಷಿಣ ಆಫ್ರಿಕಾ ಎದುರು ಎರಡು ಇನ್ನಿಂಗ್ಸ್‌ನಲ್ಲೂ ಕೇನ್ ವಿಲಿಯಮ್ಸನ್ ಸೆಂಚುರಿ ಬಾರಿಸಿ ಇಬ್ಬರ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ, ಸ್ಟೀವನ್ ಸ್ಮಿತ್, ಕೇನ್ ವಿಲಿಯಮ್ಸನ್, ಜೋ ರೂಟ್. ಈ ನಾಲ್ವರನ್ನ ವಿಶ್ವ ಕ್ರಿಕೆಟ್ನಲ್ಲಿ ಫ್ಯಾಬ್-4 ಎಂದು ಕರೆಯಲಾಗುತ್ತೆ. ಈ ನಾಲ್ವರು ಹೆಸ್ರು ಬಂದ್ರೆ ಫಾಬ್-4 ಎಂದೇ ಗುರುತಿಸಲಾಗುತ್ತೆ. ಫ್ಯಾಬ್-4ರಲ್ಲಿ ಕಿಂಗ್ ಕೊಹ್ಲಿ ಟಾಪ್ನಲ್ಲಿದ್ದರು. ರನ್ ಗಳಿಕೆಯಲ್ಲಿ. ಸೆಂಚುರಿ ಹೊಡೆಯೋದ್ರಲ್ಲಿ. ಎಲ್ಲದರಲ್ಲೂ ಮುಂದಿದ್ದರು. ಆದ್ರೀಗ ವಿರಾಟ್‌ರನ್ನೇ ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾರೆ ಉಳಿದ ಮೂವರು.

ಕೊಹ್ಲಿ-ರೂಟ್ ಹಿಂದಿಕ್ಕಿದ ಕೇನ್

ನ್ಯೂಜಿಲೆಂಡ್‌ನ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಪ್ಲೇಯರ್‌ ಮೈದಾನಕ್ಕೆ ಇಳಿದರೆ ರನ್‌ ಶಿಖರವನ್ನು ಏರುತ್ತಲೇ ಸಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲೂ ವಿಲಿಯಮ್ಸನ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಯಾರು ಈ ಸಫಾ ಬೇಗ್? ಇಲ್ಲಿದೆ ಇರ್ಫಾನ್ ಪಠಾಣ್ ಮುದ್ದಾದ ಮಡದಿಯ ಇಂಟ್ರೆಸ್ಟಿಂಗ್ ಮಾಹಿತಿ

ಟೆಸ್ಟ್ ಕ್ರಿಕೆಟ್‌ನಲ್ಲಿ ವಿಲಿಯಮ್ಸನ್ ಅವರ 31ನೇ ಶತಕವಾಗಿದೆ. ವಿಲಿಯಮ್ಸನ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ವಿಷಯದಲ್ಲಿ ಭಾರತದ ವಿರಾಟ್ ಕೊಹ್ಲಿ ಹಾಗೂ ಇಂಗ್ಲೆಂಡ್‌ನ ಜೋ ರೂಟ್‌ಗಿಂತ ಮುಂದಿದ್ದಾರೆ. ಸಕ್ರಿಯ ಕ್ರಿಕೆಟಿಗರಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮಾತ್ರ ಈಗ ಕೇನ್ ವಿಲಿಯಮ್ಸನ್‌ಗಿಂತ ಮುಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಗಳಿಸಿದ ಶತಕ ಕೇನ್ ವಿಲಿಯಮ್ಸನ್ ಅವರ ಟೆಸ್ಟ್ ವೃತ್ತಿಜೀವನದ 31ನೇ ಶತಕವಾಗಿದೆ. ಫ್ಯಾಬ್-4 ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಲಿಯಮ್ಸನ್ ಈಗ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್ 30 ಶತಕ ಮತ್ತು ಭಾರತದ ವಿರಾಟ್ ಕೊಹ್ಲಿ 29 ಶತಕಗಳನ್ನು ಹೊಂದಿದ್ದಾರೆ. ಆದರೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರ ಹೆಸರಿನಲ್ಲಿ 32 ಶತಕಗಳಿವೆ.

ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಇದೀಗ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 31 ಶತಕ ಸಿಡಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ವಿಲಿಯಮ್ಸನ್ ಟೆಸ್ಟ್ ಕ್ರಿಕೆಟ್‌ನ 170ನೇ ಇನ್ನಿಂಗ್ಸ್‌ನಲ್ಲಿ 31ನೇ ಶತಕ ದಾಖಲಿಸಿದ್ದಾರೆ. 

ಮುಂಬೈ ಇಂಡಿಯನ್ಸ್ ಕೋಚ್‌ ಮಾರ್ಕ್ ಬೌಷರ್‌ ವಿರುದ್ಧ ರೋಹಿತ್ ಶರ್ಮಾ ಪತ್ನಿ ಕೆಂಡ..!

ವಿರಾಟ್ ಕೊಹ್ಲಿ ಈ ಮೂವರಿಗಿಂತ ಹೆಚ್ಚು ಟೆಸ್ಟ್ ಶತಕ ಬಾರಿಸಿದ್ದರು. ಆದ್ರೆ 2019ರಿಂದ ಅವರು ಸೆಂಚುರಿ ಓಟಕ್ಕೆ ಬ್ರೇಕ್ ಬಿದ್ದಿದೆ. ಜೊತೆಗೆ ಪದೇ ಪದೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗೆ ಆದ್ರೆ ಕಿಂಗ್ ಕೊಹ್ಲಿ ಶತಕಗಳ ಶತಕ ಬಾರಿಸೋದು ಕನಸಿನ ಮಾತಾಗಲಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!