ಟೀಮ್‌ ಇಂಡಿಯಾ ಕೋಚ್‌ ಆಗುವ ತಪ್ಪು ನಿರ್ಧಾರ ಮಾಡ್ಬೇಡಿ, ಲ್ಯಾಂಗರ್‌ಗೆ ಕೆಎಲ್‌ ರಾಹುಲ್‌ ಈ ಸಲಹೆ ಕೊಟ್ಟಿದ್ಯಾಕೆ?

By Santosh Naik  |  First Published May 24, 2024, 5:02 PM IST


ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ಕೆಎಲ್‌ ರಾಹುಲ್‌ ಎಚ್ಚರಿಕೆ ನೀಡಿದ ಬೆನ್ನಲ್ಲಿಯೇ ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಮಾಜಿ ಕೋಚ್‌ ಜಸ್ಟೀನ್‌ ಲ್ಯಾಂಗರ್‌ ಟೀಮ್‌ ಇಂಡಿಯಾದ ಹೆಡ್‌ ಕೋಚ್‌ ಆಗುವ ಯೋಜನೆಯನ್ನು ರದ್ದು ಮಾಡಿದ್ದಾರೆ.
 


ನವದೆಹಲಿ (ಮೇ.24): ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್ ಅವರು ಭಾರತದ ಮುಖ್ಯ ಕೋಚ್ ಆಗುವ ನಿರೀಕ್ಷೆಯಿಂದ ಸಾಕಷ್ಟು ಆಕರ್ಷಿತರಾಗಿದ್ದರು. ಆದರೆ, ಈ ಕೆಲದ ಜೊತೆಗೆ ಇರುವ ಒತ್ತಡ ಹಾಗೂ ರಾಜಕೀಯದ ಬಗ್ಗೆ ಕೆಎಲ್‌ ರಾಹುಲ್‌ ಅವರು ನೀಡಿದ ಎಚ್ಚರಿಕೆಯ ಮಾತು ಈ ಅದ್ಭುತ ಅವಕಾಶವನ್ನು ಒಪ್ಪಿಕೊಳ್ಳದಂತೆ ಮಾಡಿತು ಎಂದು ಹೇಳಿದ್ದಾರೆ. ಈ ಐಪಿಎಲ್ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮುಖ್ಯ ಕೋಚ್‌ ಆಗಿ ಸೇವೆ ಸಲ್ಲಿಸಿದ ಲ್ಯಾಂಗರ್, ಫ್ರಾಂಚೈಸಿ ನಾಯಕ ಮತ್ತು ಭಾರತೀಯ ತಂಡದ ಹಿರಿಯ ಸದಸ್ಯ ರಾಹುಲ್ ಜೊತೆಗಿನ ಚಾಟ್ ಅನ್ನು ನೆನಪಿಸಿಕೊಂಡರು. 'ಇದಕ್ಕೆ ನೀವು ಇಲ್ಲ ಎಂದೇ ಹೇಳಬೇಕು. ಭಾರತದಲ್ಲಿ ಕೋಚ್‌ ಆಗುವ ಒತ್ತಡ ಉಂಟಲ್ಲ ಅದು ನಿರೀಕ್ಷೆಗೂ ಮೀರಿದ್ದು, ನಾನು ಕೆಎಲ್‌ ರಾಹುಲ್‌ ಅವರೊಂದಿಗೆ ಈ ವಿಚಾರವಾಗಿ ಮಾತನಾಡುತ್ತಿದ್ದೆ ಎಂದು ಅವರು ಹೇಳಿದ್ದಾರೆ.  ನಿಮಗೆ ಸಿಂಪಲ್‌ ಆಗಿ ಒಂದು ಉದಾಹರಣೆ ನೀಡುತ್ತೇನೆ. ಐಪಿಎಲ್‌ ತಂಡದಲ್ಲಿ ಎಷ್ಟು ಒತ್ತಡ ಹಾಗೂ ರಾಜಕೀಯ ಎಂದು ಭಾವಿಸುತ್ತೀರಲ್ಲ. ಅದನ್ನು ಸಾವಿರದಿಂದ ಗುಣಿಸಬೇಕು. ಇಷ್ಟು ಪ್ರಮಾಣದ ಒತ್ತಡಡ ಹಾಗೂ ರಾಜಕೀಯವನ್ನು ಟೀಮ್‌ ಇಂಡಿಯಾ ಕೋಚ್‌ ಎದುರಿಸುತ್ತಾರೆ ಎಂದು ಜಸ್ಟೀನ್‌ ಲ್ಯಾಂಗರ್‌ ಬಿಬಿಸಿ ಸ್ಟಂಪ್ಟ್‌ ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದು ನನಗೆ ಬಂದ ಒಂದು ಸಲಹೆ. ನನ್ನ ಪ್ರಕಾರ, ಇದೊಂದು ಅಮೇಜಿಂಗ್‌ ಜಾಬ್‌. ಆದರೆ, ನನ್ನ ಮೇಲೆ ಅತಿಯಾದ ಒತ್ತಡವನ್ನು ಹೇರಿಕೊಳ್ಳೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಬಿಸಿಸಿಐ ಮುಖ್ಯ ಕೋಚ್ ಸ್ಥಾನಕ್ಕೆ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಿದೆ, ರಾಹುಲ್ ದ್ರಾವಿಡ್ T20 ವಿಶ್ವಕಪ್ ನಂತರ ನಿರ್ಗಮಿಸಲಿರುವ ಕಾರಣ ಮೇ 27 ಕ್ಕೆ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಈ ವರ್ಷ ಲಕ್ನೋ ಸೂಪರ್‌ ಜೈಂಟ್ಸ್‌ ಕೋಚ್‌ ಹುದ್ದೆ ವಹಿಸಿಕೊಳ್ಳುವ ಮುನ್ನ, ಜಸ್ಟೀನ್ ಲ್ಯಾಂಗರ್‌ ಮೇ 2018 ರಿಂದ ಫೆಬ್ರವರಿ 2022ರವರೆಗೆ ನಾಲ್ಕು ವರ್ಷಗಳ ಕಾಲ ಆಸ್ಟ್ರೇಲಿಯಾ ತಂಡದ ಕೋಚ್‌ ಆಗಿದ್ದರು. ಆಸೀಸ್‌ ತಂಡದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದ ಬಾಲ್‌ ಟ್ಯಾಂಪರಿಂಗ್‌ ಹಗರಣದ ನಂತರ ತಂಡವು ಕಷ್ಟಕರದ ಅವಧಿಯನ್ನು ದಾಟಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದರು. ಲ್ಯಾಂಗರ್ ಅವರ ಮಾರ್ಗದರ್ಶನದಲ್ಲಿ, ಆಸ್ಟ್ರೇಲಿಯಾ ತನ್ನ ಮೊದಲ T20 ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿದಿದ್ದಲ್ಲದೆ, ಆಶಸ್ ಕೂಡ ಗೆದ್ದುಕೊಂಡಿತು.

Tap to resize

Latest Videos

ಭಾರತೀಯ ಕ್ರಿಕೆಟಿಗರು ಎಲ್ಲೆಲ್ಲಿ ತಮ್ಮ ಹಣ ಹೂಡಿಕೆ ಮಾಡಿದ್ದಾರೆ ನೋಡಿ!

"ಇದು ಎಲ್ಲವನ್ನೂ ಒಳಗೊಳ್ಳುವ ಪಾತ್ರ ಎಂದು ನನಗೆ ತಿಳಿದಿದೆ ಮತ್ತು ಆಸ್ಟ್ರೇಲಿಯಾ ತಂಡದೊಂದಿಗೆ ನಾಲ್ಕು ವರ್ಷಗಳ ಕಾಲ ಅದನ್ನು ಮಾಡಿದ್ದೇನೆ, ಪ್ರಾಮಾಣಿಕವಾಗಿ, ನಾನು ದಣಿದಿದ್ದೇನೆ ಮತ್ತು ಅದು ಆಸ್ಟ್ರೇಲಿಯನ್ ಕೆಲಸ!," 53 ವರ್ಷ ವಯಸ್ಸಿನ ಮಾಜಿ ಆಟಗಾರ ಹೇಳಿದ್ದಾರೆ.

ತನ್ನ ತಾಯಿಗೆ ಇರೋ ಕೊರಗು ಇದೊಂದೇ, ಕೆಎಲ್‌ ರಾಹುಲ್‌ ಹೀಗಂದಿದ್ದೇಕೆ!

click me!