Latest Videos

ಈ ಸಲವೂ ಕೊಹ್ಲಿಗೆ ಸಿಗಲಿಲ್ಲ IPL ಕಪ್..! ಕೊಹ್ಲಿಯ ಕಷ್ಟಕ್ಕೆ ಫಲ ಸಿಗೋದ್ಯಾವಾಗ..?

By Suvarna NewsFirst Published May 24, 2024, 4:26 PM IST
Highlights

ಕೊಹ್ಲಿ ಪಾಲಿಗೆ IPL ಟ್ರೋಫಿ ಮರೀಚಿಕೆಯಾಗಿದೆ. ಈ ಬಾರಿಯ IPLಗೂ ಮುನ್ನ ಕೊಹ್ಲಿ ಇದು RCBಯ ಹೊಸ ಅಧ್ಯಾಯ ಅಂತ ಹೇಳಿದ್ರು. ಇದ್ರಿಂದ ಫ್ಯಾನ್ಸ್ ಈ ಸಲ ಪಕ್ಕಾ ಕಪ್ ನಮ್ದೇ ಅಂತ ಕನಸು ಕಂಡಿದ್ರು. ಆದ್ರೆ, ಕನಸು ಕನಸಾಗೇ ಉಳಿದಿದೆ. ಎಲಿಮಿನೇಟರ್ ಪಂದ್ಯದಲ್ಲಿ ಸೋತು, ಆರ್‌ಸಿಬಿ ಟೂರ್ನಿಯಿಂದ ಎಲಿಮಿನೇಟ್ ಆಗಿದೆ. 

ಬೆಂಗಳೂರು(ಮೇ.24): ಯಾವುದೇ ವ್ಯಕ್ತಿ ತನ್ನ ಶಕ್ತಿ ಮೀರಿ ಪ್ರಯತ್ನ ಪಟ್ಟರೂ, ಯಶಸ್ಸು ಸಿಗಲಿಲ್ಲ ಅಂದ್ರೆ ಆಗೋ ನೋವು ಯಾರಿಗೂ ಬೇಡ. ಇದಕ್ಕೆ ಕ್ರಿಕೆಟ್‌ನಲ್ಲಿ ಬೆಸ್ಟ್ ಎಕ್ಸಾಂಪಲ್ ಅಂದ್ರೆ ವಿರಾಟ್ ಕೊಹ್ಲಿ. ಈ ಬಾರಿಯ IPLನಲ್ಲಿ ಕೊಹ್ಲಿ ಒಬ್ಬ ಆಟಗಾರನಾಗಿ RCBಗೆ ಎಲ್ಲವನ್ನೂ ಮಾಡಿದ್ರು. ಆದ್ರೆ, ಅದೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಯ್ತು.

ಈ ಸಲವೂ ಕೊಹ್ಲಿಗೆ ಸಿಗಲಿಲ್ಲ IPL ಕಪ್..! ಕೊಹ್ಲಿಯ ಕಷ್ಟಕ್ಕೆ ಫಲ ಸಿಗೋದ್ಯಾವಾಗ..? 

ವಿರಾಟ್ ಕೊಹ್ಲಿ.! ಆಧುನಿಕ ಕ್ರಿಕೆಟ್ ಜಗತ್ತಿನ ಕ್ರಿಕೆಟ್ ಗ್ರೇಟೆಸ್ಟ್ ಬ್ಯಾಟ್ಸ್‌ಮನ್. ರನ್, ಸೆಂಚುರೀಸ್, ರೆಕಾರ್ಡ್ಸ್ ಎಲ್ಲದರಲ್ಲೂ ಕೊಹ್ಲಿಯೇ ಕಿಂಗ್. ಕೊಹ್ಲಿ ಆಡಿರೋ ಮ್ಯಾಚ್ ವಿನ್ನಿಂಗ್ಸ್ ಇನ್ನಿಂಗ್ಸ್‌ಗಳು ಒಂದೆರಡಲ್ಲ. ಕೊಹ್ಲಿ ಆಟ, ಕಮಿಟ್ಮೆಂಟ್, ಫಿಟ್ನೆಸ್ ಹೇಳೋಕೆ ನಿಂತ್ರೆ ಪದಗಳೇ ಸಾಲಲ್ಲ. ಆದ್ರೆ, ಇಷ್ಟೆಲ್ಲಾ ಸಾಧನೆ ಮಾಡಿರೋ ಕೊಹ್ಲಿಗೆ ಐಪಿಎಲ್‌ ಕಪ್ ಎತ್ತೋಕೆ ಸಾಧ್ಯವಾಗಿಲ್ಲ. ಅದೊಂದು ಕೊರಗು ಮಾತ್ರ 17 ವರ್ಷಗಳಿಂದ ಕೊಹ್ಲಿಗೆ ಕಾಡುತ್ತಲೇ ಇದೆ. 

ಕೋಟ್ಯಾಂತರ ಫ್ಯಾನ್ಸ್ ನಂಬಿಕೆ ಕ್ಷಣಾರ್ಧದಲ್ಲಿ ನುಚ್ಚುನೂರು ಮಾಡಿದ ಆರ್‌ಸಿಬಿ ಈ ಆಟಗಾರ..!

ಯೆಸ್, ಕೊಹ್ಲಿ ಪಾಲಿಗೆ IPL ಟ್ರೋಫಿ ಮರೀಚಿಕೆಯಾಗಿದೆ. ಈ ಬಾರಿಯ IPLಗೂ ಮುನ್ನ ಕೊಹ್ಲಿ ಇದು RCBಯ ಹೊಸ ಅಧ್ಯಾಯ ಅಂತ ಹೇಳಿದ್ರು. ಇದ್ರಿಂದ ಫ್ಯಾನ್ಸ್ ಈ ಸಲ ಪಕ್ಕಾ ಕಪ್ ನಮ್ದೇ ಅಂತ ಕನಸು ಕಂಡಿದ್ರು. ಆದ್ರೆ, ಕನಸು ಕನಸಾಗೇ ಉಳಿದಿದೆ. ಎಲಿಮಿನೇಟರ್ ಪಂದ್ಯದಲ್ಲಿ ಸೋತು, ಆರ್‌ಸಿಬಿ ಟೂರ್ನಿಯಿಂದ ಎಲಿಮಿನೇಟ್ ಆಗಿದೆ. 

ಒಬ್ಬ ಆಟಗಾರನಾಗಿ ತಮ್ಮ ತಂಡಕ್ಕೆ ಏನು ಮಾಡಬೇಕಿತ್ತೋ ಅದೆಲ್ಲವನ್ನ ಕೊಹ್ಲಿ ಮಾಡಿದ್ದಾರೆ. ಇನ್‌ಫ್ಯಾಕ್ಟ್ ಪ್ರತಿ ಸೀಸನ್ನಲ್ಲೂ ಅದನ್ನೇ ಮಾಡ್ತಿದ್ದಾರೆ. ಈ ಬಾರಿಯ IPLನಲ್ಲಿ ಕೊಹ್ಲಿ 15 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, 61.75ರ ಸರಾಸರಿ ಮತ್ತು 154.69ರ ಸ್ಟ್ರೈಕ್ರೇಟ್ನಲ್ಲಿ 741 ರನ್ ಕಲೆಹಾಕಿದ್ದಾರೆ. ಆ ಮೂಲಕ ಆರೇಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. 

ಸೆಕೆಂಡ್ ಹಾಫ್ನಲ್ಲಿ ವಿರಾಟ್ ವಿರಾಟರೂಪ.! 

ಫಸ್ಟ್ ಹಾಫ್ನಲ್ಲಿ ಸೈಲಂಟಾಗಿದ್ದ ವಿರಾಟ್, ಸೆಕೆಂಡ್ ಹಾಫ್ನಲ್ಲಿ ಅಕ್ಷರಶ: ಆರ್ಭಟಿಸಿದ್ರು. ಆಲ್ಮೋಸ್ಟ್ 160ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ರು. ಆ ಮೂಲಕ ತಮ್ಮ ಸ್ಟ್ರೈಕ್ರೇಟ್ ಬಗ್ಗೆ ಪ್ರಶ್ನೆ ಎತ್ತಿದ್ದವರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ರು. ಟೂರ್ನಿಯಲ್ಲಿ ಒಟ್ಟಾರೆ 38 ಸಿಕ್ಸ್ ಸಿಡಿಸಿ, ತಮ್ಮ ಸಿಕ್ಸ್ ಹಿಟ್ಟಿಂಗ್ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ರು.

RCB ಸ್ಟ್ರಾಂಗ್ ಕಮ್‌ಬ್ಯಾಕ್‌ಗೆ ಕೊಹ್ಲಿಯೇ ಕಾರಣ..!

ಸೋಲಿನ ಸುಳಿಯಿಂದ ಸಿಲುಕಿದ್ದ RCB, ಸೆಕೆಂಡ್ ಹಾಫ್ನಲ್ಲಿ ಫೀನಿಕ್ಸ್‌ನಂತೆ ಎದ್ದು ಬಂದಿತ್ತು. ಸತತ 6 ಪಂದ್ಯ ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ನೀಡಿತ್ತು. RCBಯ ಈ ಸ್ಟ್ರಾಂಗ್‌ ಕಮ್‌ಬ್ಯಾಕ್‌ಗೆ ಕೊಹ್ಲಿಯೇ ಪ್ರಮುಖ ಕಾರಣ ಅಂದ್ರೆ ತಪ್ಪಿಲ್ಲ. ಬ್ಯಾಕ್ ಟು ಬ್ಯಾಕ್ ಸೋಲುಗಳ ನಂತರ ಆಟಗಾರರು ಕಾನ್ಫಿಡೆನ್ಸ್ ಲೆವೆಲ್ ಕಡಿಮೆಯಾಗಿತ್ತು. ಮಾನಸಿಕವಾಗಿ ಕುಗ್ಗಿಹೋಗಿದ್ರು. ಆದ್ರೆ, ಕೊಹ್ಲಿ ಮಾತ್ರ ಕುಗ್ಗಲಿಲ್ಲ. ಪ್ರತಿ ಪಂದ್ಯದಲ್ಲೂ ಕೊಹ್ಲಿ ತಮ್ಮ ಅಗ್ರೆಸಿವ್ ಅಪ್ರೋಚ್ ಮೂಲಕ ಆಟಗಾರರಲ್ಲಿ ಜೋಶ್ ತುಂಬಿದ್ರು. ನಾಯಕತ್ವದಲ್ಲಿ ಡು ಪ್ಲೆಸಿಸ್‌ಗೆ ನೆರವಾದ್ರು. ಅಲ್ಲದೇ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದ್ರು.

ಮದುವೆಗೆ ಮೊದಲೇ ತಂದೆಯಾಗಿದ್ದ ಹಾರ್ದಿಕ್ ಪಾಂಡ್ಯಗೆ ಕೈಕೊಟ್ರಾ ನತಾಶಾ..? ಮುಂಬೈ ನಾಯಕನಿಗೆ ಬಿಗ್ ಶಾಕ್

RCB ಬಿಟ್ಟು ಬೇರೆ ತಂಡ ಸೇರ್ತಾರಾ ಕೊಹ್ಲಿ..? 

ಯೆಸ್, RCB ಕಪ್ ಗೆಲ್ಲದ್ದಕ್ಕೆ, ಕೊಹ್ಲಿಯ ಡೈ ಹಾರ್ಡ್ ಫ್ಯಾನ್ಸ್, ಕೊಹ್ಲಿಗೆ  RCB ಬಿಟ್ಟು ಬೇರೆ ತಂಡ ಸೇರಿಕೊಳ್ಳಿ ಅಂತ ಮನವಿ ಮಾಡ್ತಿದ್ದಾರೆ. ಇದ್ರಿಂದ ವಿರಾಟ್ RCB ಬಿಡ್ತಾರಾ.? ಅನ್ನೋ ಪ್ರಶ್ನೆ ಮೂಡಿದೆ. ಆದ್ರೆ, ಕೊಹ್ಲಿ ಈ ಹಿಂದೆಯೆ ನನಗೆ ಆರ್‌ಸಿಬಿ ಬಿಟ್ಟು ಬೇರೆ ತಂಡದಲ್ಲಿ ಇಷ್ಟವಿಲ್ಲ ಅಂತ ಹೇಳಿದ್ದಾರೆ. ಇನ್ನು ಐಪಿಎಲ್‌ನಲ್ಲಿ RCB ಅಂದ್ರೇನೆ ಕೊಹ್ಲಿ, ಕೊಹ್ಲಿ ಅಂದ್ರೇನೆ RCB. ಕೊಹ್ಲಿ ಇಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಊಹಿಸಲು ಸಾಧ್ಯವಿಲ್ಲ.

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!