Latest Videos

ಕೋಟ್ಯಾಂತರ ಫ್ಯಾನ್ಸ್ ನಂಬಿಕೆ ಕ್ಷಣಾರ್ಧದಲ್ಲಿ ನುಚ್ಚುನೂರು ಮಾಡಿದ ಆರ್‌ಸಿಬಿ ಈ ಆಟಗಾರ..!

By Suvarna NewsFirst Published May 24, 2024, 3:08 PM IST
Highlights

ಎಲಿಮಿನೇಟರ್ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಆಡಿದ್ದು ನಿಜಕ್ಕೂ ಬೇಜವಬ್ದಾರಿ ಆಟ. ಡು ಆರ್ ಡೈ ಮ್ಯಾಚ್‌ನಲ್ಲಿ RCB 100 ರನ್ ಒಳಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊಹ್ಲಿ, ಡುಪ್ಲೆಸಿ, ಗ್ರೀನ್ ಪೆವಿಲಿಯನ್ ಸೇರಿದ್ರು. ಈ ವೇಳೆ RCB ಟೀಮ್ ಮತ್ತು ಫ್ಯಾನ್ಸ್ ಮ್ಯಾಕ್ಸ್‌ವೆಲ್ ಇದ್ದಾನೆ, ತಂಡವನ್ನ ಕಾಪಾಡ್ತಾನೆ ಅಂತ ಅಂದುಕೊಂಡಿದ್ರು. 

ಬೆಂಗಳೂರು: ಜೀವನದಲ್ಲಿ ನಿಯತ್ತು, ಜವಬ್ದಾರಿ ಅನ್ನೋದು ತುಂಬಾನೇ ಮುಖ್ಯ. ಎಷ್ಟೇ ದೊಡ್ಡವರಾದ್ರು ನಿಯತ್ತಿಲ್ಲ ಅಂದ್ರೆ ವೇಸ್ಟ್. ಸದ್ಯ ಕ್ರಿಕೆಟ್ ದುನಿಯಾದಲ್ಲಿ ಈ ಆಸೀಸ್ ಆಟಗಾರನ ಕಥೆಯು ಅದೇ ಆಗಿದೆ. ಯಾರು ಆ ಆಟಗಾರ ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ. 

ಬೇಜವಾಬ್ದಾರಿ ಪದಕ್ಕೆ ಮತ್ತೊಂದು ಹೆಸರೇ ಮ್ಯಾಕ್ಸ್‌ವೆಲ್..! 

ಈ ಬಾರಿಯ IPL ಸಮರದಲ್ಲಿ RCB ತಮ್ಮ ಫ್ಯಾನ್ಸ್‌ಗೆ ಕಪ್ ಗೆಲುವಿನ ಆಸೆ ಹುಟ್ಟಿಸಿ, ಎಲಿಮಿನೇಟರ್ ಫೈಟ್‌ನಲ್ಲಿ ಕೈಎತ್ತಿ ಬಿಟ್ಟಿತ್ತು. ಆದ್ರೆ, ಈ ಸೋಲಿಗೆ ತಂಡದ ಬ್ಯಾಟಿಂಗ್ ಫೇಲ್ಯೂರ್ ಪ್ರಮುಖ ಕಾರಣ. ಅದರಲ್ಲೂ ಗ್ಲೇನ್ ಮ್ಯಾಕ್ಸ್‌ವೆಲ್ ಬೇಜವಬ್ದಾರಿ ಬ್ಯಾಟಿಂಗ್ RCBಗೆ ಮುಳ್ಳಾಯ್ತು. ಈ ಆಸೀಸ್ ಬ್ಯಾಟರ್‌ ಜವಾಬ್ದಾರಿ ಅರಿತು ಆಡಿದ್ರೆ, ಪಂದ್ಯದ ಕಥೆಯೆ ಬೇರೆ ಇರ್ತಿತ್ತು. 

ಯೆಸ್, ಎಲಿಮಿನೇಟರ್ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಆಡಿದ್ದು ನಿಜಕ್ಕೂ ಬೇಜವಬ್ದಾರಿ ಆಟ. ಡು ಆರ್ ಡೈ ಮ್ಯಾಚ್‌ನಲ್ಲಿ RCB 100 ರನ್ ಒಳಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊಹ್ಲಿ, ಡುಪ್ಲೆಸಿ, ಗ್ರೀನ್ ಪೆವಿಲಿಯನ್ ಸೇರಿದ್ರು. ಈ ವೇಳೆ RCB ಟೀಮ್ ಮತ್ತು ಫ್ಯಾನ್ಸ್ ಮ್ಯಾಕ್ಸ್‌ವೆಲ್ ಇದ್ದಾನೆ, ತಂಡವನ್ನ ಕಾಪಾಡ್ತಾನೆ ಅಂತ ಅಂದುಕೊಂಡಿದ್ರು. 

17 ವರ್ಷದ ಐಪಿಎಲ್‌ನಲ್ಲಿ ಕಾರ್ತಿಕ್‌ ತಪ್ಪಿಸಿಕೊಂಡಿದ್ದು ಕೇವಲ ಎರಡೇ ಪಂದ್ಯ!

ಆದ್ರೆ, ಎಲ್ಲರ ಆಸೆಗಳನ್ನೆಲ್ಲಾ ಮ್ಯಾಕ್ಸ್‌ವೆಲ್ ಕ್ಷಣಾರ್ಧದಲ್ಲಿ ನುಚ್ಚುನೂರು ಮಾಡಿಬಿಟ್ಟ. ಎದುರಿಸಿದ ಮೊದಲ ಬಾಲ್‌ನಲ್ಲೇ ಬಿಗ್ ಶಾಟ್ ಬಾರಿಸಲು ಹೋಗಿ ಪೆವಿಲಿಯನ್ ಸೇರಿಬಿಟ್ಟ. ಒಂದು ವೇಳೆ ಮ್ಯಾಕ್ಸ್‌ವೆಲ್‌ನಿಂದ ಒಂದು 30 ರನ್ ಬಂದಿದ್ರೆ,  ಡು ಪ್ಲೆಸಿಸ್ ಪಡೆ ಬಿಗ್‌ಸ್ಕೋರ್ ಕಲೆಹಾಕಲು ಸಾಧ್ಯವಾಗ್ತಿತ್ತು. ರಾಜಸ್ಥಾನ ರಾಯಲ್ಸ್‌ ಮೇಲೆ ಪ್ರೆಶರ್ ಹಾಕಲು ಸಾಧ್ಯವಾಗ್ತಿತ್ತು. 

ಇದೊಂದು ಪಂದ್ಯ ಮಾತ್ರ ಅಲ್ಲ, ಟೂರ್ನಿಯದ್ಧಕ್ಕೂ ಸೇಮ್ ಕಥೆ. ಲೀಗ್‌ನಲ್ಲಿ 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ ಈ ಫ್ಲಾಪ್ ಸ್ಟಾರ್, ಗಳಿಸಿದ್ದು ಕೇವಲ 52 ರನ್. ಇದ್ರಲ್ಲಿ ನಾಲ್ಕು ಪಂದ್ಯಗಳಲ್ಲಿ ಡಕೌಟ್ ಆಗಿದ್ದಾರೆ. ಹೈಯೆಸ್ ಸ್ಕೋರ್ 28 ರನ್. 

ದೇಶದ ಪರ ಸೂಪರ್ ಶೋ, RCB ಪರ ಫ್ಲಾಪ್ ಶೋ..!

IPLನಲ್ಲಿ ಫ್ರಾಂಚೈಸಿ ಪರ ಮಕಾಡೆ ಮಲಗೋ ಮ್ಯಾಕ್ಸ್‌ವೆಲ್, ಆಸ್ಟ್ರೇಲಿಯಾ ಪರ ಮಾತ್ರ ಅಬ್ಬರಿಸ್ತಾರೆ. ಕಳೆದ ವರ್ಷ ನಡೆದ ವಿಶ್ವಕಪ್ ಟೂರ್ನಿಯ ಅಪ್ಘಾನಿಸ್ತಾನ ವಿರುದ್ಧದದ ಪಂದ್ಯವೇ ಅದಕ್ಕೆ ಸಾಕ್ಷಿ.  ಸೆಮಿಫೈನಲ್‌ಗೆ ಎಂಟ್ರಿ ನೀಡಬೇಕಂದ್ರೆ ಅಪ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಗೆಲ್ಲಲೇಬೇಕಿತ್ತು. ಆದ್ರೆ,  ಬಿಗ್‌ಮ್ಯಾಚಲ್ಲಿ ಆಸೀಸ್ ಪಡೆಯ ಬೇರೆ ಬ್ಯಾಟರ್ಸ್, ಅಟ್ಟರ್ ಫ್ಲಾಪ್ ಆಗಿದ್ರು. ಮ್ಯಾಕ್ಸ್‌ವೆಲ್ ಇಂಜುರಿ ನಡುವೆಯೂ ಅದ್ಭುತವಾಗಿ  ಬ್ಯಾಟ್ ಬೀಸಿದ್ರು. ದ್ವಿಶತಕ ಸಿಡಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ರು. ಆವತ್ತು ಅವ್ರ ಅಸಾಮಾನ್ಯ ಆಟಕ್ಕೆ, ಇಡೀ  ಕ್ರಿಕೆಟ್ ಜಗತ್ತು ಸಲಾಂ ಹೊಡೆದಿತ್ತು.  

ಮದುವೆಗೆ ಮೊದಲೇ ತಂದೆಯಾಗಿದ್ದ ಹಾರ್ದಿಕ್ ಪಾಂಡ್ಯಗೆ ಕೈಕೊಟ್ರಾ ನತಾಶಾ..? ಮುಂಬೈ ನಾಯಕನಿಗೆ ಬಿಗ್ ಶಾಕ್

ದೇಶದ ಪರ ನೋವಿನಲ್ಲೋ ಹೋರಾಡೋ ಮ್ಯಾಕ್ಸ್‌ವೆಲ್, IPLನಲ್ಲಿ ಕಳಪೆ ಆಟ ಆಡುತ್ತಿರೋದು RCB ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ತಗೊಳ್ಳೋ ದುಡ್ಡಿಗಾದ್ರೂ ನಿಯತ್ತಾಗಿ ಆಡೋದನ್ನ ಕಲಿ ಅಂತ ಕಿಡಿಕಾರ್ತಿದ್ದಾರೆ. ಮತ್ತೊಂದೆಡೆ RCB ತಂಡದಿಂದ ಮ್ಯಾಕ್ಸ್‌ವೆಲ್‌ನ ರಿಲೀಸ್ ಮಾಡಬೇಕು ಅನ್ನೋ ಕೂಗು ಎದ್ದಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್  
 

click me!