
ಪರ್ತ್(ಮೇ.29): ಲಖನೌ ಸೂಪರ್‌ಜೈಂಟ್ಸ್‌ನ ಪ್ರಧಾನ ಕೋಚ್ ಜಸ್ಟಿನ್ ಲ್ಯಾಂಗರ್, ಐಪಿಎಲ್ ವೇಳೆ ತಾವು ತಂಡದ ಮಸಾಜ್ ಥೆರಾಪಿಸ್ಟ್ ರಾಜೇಶ್ ಚಂದ್ರಶೇಖರ್‌ರ ಮನೆಗೆ ಭೇಟಿ ನೀಡಿದಾಗ ಆದ ಅನುಭವವನ್ನು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.
ಲಖನೌ ಸೂಪರ್ ಜೈಂಟ್ಸ್ ತಂಡದ ಮಸಾಜ್ ಥೆರಾಪಿಸ್ಟ್ ರಾಜೇಶ್ ಚಂದ್ರಶೇಖರ್ ತಂಡದ ಹೆಡ್ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನು ತಮ್ಮ ಮನೆಗೆ ಡಿನ್ನರ್‌ಗೆ ಆಹ್ವಾನಿಸಿದ್ದರು. ಅವರ ಭೇಟಿ ನೀಡಿದ ಬಳಿಕ ಲ್ಯಾಂಗರ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
‘ಮುಂಬೈನ ಧಾರಾವಿ ಸ್ಲಂನಲ್ಲಿರುವ ರಾಜೇಶ್‌ರ ಮನೆಗೆ ಹೋದಾಗ ಜೀವನದಲ್ಲಿ ನಮಗೆ ಸಿಕ್ಕಿರುವ ಸೌಲಭ್ಯಗಳು ಎಂತದ್ದು ಎನ್ನುವುದರ ಬಗ್ಗೆ ನನಗೆ ಅನುಭವವಾಯಿತು. ಜನ ದೈನಂದಿನ ಜೀವನ ನಡೆಸಲು ಏನೆಲ್ಲಾ ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಂಡೆ. ರಾಜೇಶ್‌ರ ಕುಟುಂಬ ತಮ್ಮ ಬಳಿ ಏನೂ ಇಲ್ಲ ಎಂದುಕೊಂಡಿದೆ, ಆದರೆ ಜೀವನದಲ್ಲಿ ಖುಷಿಯಾಗಿರಲು ಏನೆಲ್ಲಾ ಬೇಕೋ ಅದೆಲ್ಲವೂ ಅವರಲ್ಲಿ ಇದೆ’ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬರೆದುಕೊಂಡಿದ್ದಾರೆ.
ಅಪಘಾತ ಬಳಿಕ ಎರಡು ತಿಂಗಳು ಹಲ್ಲು ಉಜ್ಜಲು ಆಗಿರಲಿಲ್ಲ: ರಿಷಭ್ ಪಂತ್
ನವದೆಹಲಿ: 2022ರ ಡಿಸೆಂಬರ್‌ನಲ್ಲಿ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್, ತಮ್ಮ ಕಷ್ಟದ ದಿನಗಳನ್ನು ನೆನೆದಿದ್ದಾರೆ. ತಾವು ಅಪಘಾತದಲ್ಲಿ ಗಾಯಗೊಂಡ ಬಳಿಕ 2 ತಿಂಗಳುಗಳ ಕಾಲ ಹಲ್ಲು ಉಜ್ಜಲು ಸಹ ಆಗಿರಲಿಲ್ಲ ಎಂದು ಪಂತ್ ಖಾಸಗಿ ಟೀವಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ‘ಏರ್‌ಪೋರ್ಟ್‌ಗೆ ಹೋಗಲು ಹಿಂಜರಿಕೆ ಪಡುತ್ತಿದೆ. ವೀಲ್ಹ್‌ಚೇರ್ ಮೇಲೆ ಕೂತು ಜನರನ್ನು ಎದುರಿಸಲು ನನಗೆ ಕಷ್ಟವಾಗುತ್ತಿತ್ತು’ ಎಂದು ಪಂತ್ ಹೇಳಿಕೊಂಡಿದ್ದಾರೆ.
ಕೋಚ್ ಹುದ್ದೆಗೆ ಅರ್ಜಿ ಡೆಡ್‌ಲೈನ್ ಮುಕ್ತಾಯ: ಕಪ್ ಗೆಲ್ಲುವ ಮುಂಚೆ ಬಿಸಿಸಿಐಗೆ ಕಂಡೀಷನ್ ಹಾಕಿದ್ದ ಗಂಭೀರ್!
ಇಟಲಿ ಪರ ಆಡಲಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜೋ ಬರ್ನ್ಸ್!
ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಜೋ ಬರ್ನ್ಸ್ ಇಟಲಿ ಕ್ರಿಕೆಟ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. 34 ವರ್ಷದ ಬರ್ನ್ಸ್ ಕೊನೆಯ ಬಾರಿಗೆ ಆಸ್ಟ್ರೇಲಿಯಾ ತಂಡದಲ್ಲಿ ಆಡಿದ್ದು 2020ರಲ್ಲಿ. ಬರ್ನ್ಸ್‌ರ ತಾಯಿ ಇಟಲಿ ಮೂಲದವರಾಗಿರುವ ಕಾರಣ, ಅವರಿಗೆ ಆ ದೇಶದ ಪರ ಆಡಲು ಅರ್ಹತೆ ದೊರೆತಿದೆ.
2024ನೇ ಸಾಲಿನ ಬಲಿಷ್ಠ ಐಪಿಎಲ್ ತಂಡ ಕಟ್ಟಿದ ಹರ್ಷಾ ಬೋಗ್ಲೆ..! ಇಬ್ಬರು ಆರ್‌ಸಿಬಿ ಆಟಗಾರರಿಗೆ ಸ್ಥಾನ
ತಮ್ಮ ಮೃತ ಸೋದರನಿಗೆ ಗೌರವ ಅರ್ಪಿಸುವ ಉದ್ದೇಶದಿಂದ ಇಟಲಿಗೆ ಸ್ಥಳಾಂತರಗೊಂಡಿದ್ದಾಗಿ ಬರ್ನ್ಸ್ ಹೇಳಿದ್ದಾರೆ. ಜೂ.9ರಿಂದ 16ರ ವರೆಗೂ ರೋಮ್‌ನಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ನ ಉಪ ಪ್ರಾದೇಶಿಕ ಅರ್ಹತಾ ಟೂರ್ನಿಯಲ್ಲಿ ಇಟಲಿ ತಂಡ ಆಡಲಿದ್ದು, ಬರ್ನ್ಸ್ ಕಣಕ್ಕಿಳಿಯಲಿದ್ದಾರೆ. ಬರ್ನ್ಸ್ ಆಸ್ಟ್ರೇಲಿಯಾ ಪರ 23 ಟೆಸ್ಟ್, 6 ಏಕದಿನ ಪಂದ್ಯಗಳನ್ನಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.