ಟೀಂ ಇಂಡಿಯಾಗೆ ಶಾಕ್; 3ನೇ ಟಿ20 ಪಂದ್ಯದಲ್ಲಿ ಮುಗ್ಗರಿಸಿದ ಕೊಹ್ಲಿ ಸೈನ್ಯ!

By Suvarna News  |  First Published Mar 16, 2021, 10:41 PM IST

2ನೇ ಟೀಂ ಪಂದ್ಯದಲ್ಲಿ ಗೆಲವು ಸಾಧಿಸಿದ್ದ ಟೀಂ ಇಂಡಿಯಾಗೆ ಇದೀಗ 3ನೇ ಪಂದ್ಯದಲ್ಲಿ ಸೋಲಿನ ಆಘಾತ ಎದುರಾಗಿದೆ. ಭಾರತ ನೀಡಿದ ಗುರಿಯನ್ನು ಇಂಗ್ಲೆಂಡ್ ಸುಲಭವಾಗಿ ಚೇಸ್ ಮಾಡಿದೆ.


ಅಹಮ್ಮದಾಬಾದ್(ಮಾ.16): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿ ಕುತೂಹಲ ಘಟ್ಟ ತಲುಪಿದೆ. ಜಿದ್ದಾ ಜಿದ್ದಿನ ಹೋರಾಟ ಏರ್ಪಟ್ಟಿದೆ. ಕಾರಣ 2ನೇ ಪಂದ್ಯದಲ್ಲಿ ಗೆಲುವು ಸಾಧಿಸಿದಿದ್ದ ಟೀಂ ಇಂಡಿಯಾ ಇದೀಗ 3ನೇ ಪಂದ್ಯದಲ್ಲಿ ಮುಗ್ಗರಿಸಿದೆ. ಇಂಗ್ಲೆಂಡ್ 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ.

ಇಂಗ್ಲೆಂಡ್‌ ಎದುರಿನ ಏಕದಿನ ಸರಣಿಯಲ್ಲಿ ಕರ್ನಾಟಕದ ವೇಗಿಗೆ ಜಾಕ್‌ಪಾಟ್‌..?

Latest Videos

undefined

157 ರನ್ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲೇ ಜೇಸನ್ ರಾಯ್ ವಿಕೆಟ್ ಕಳೆದುಕೊಂಡಿತು. ಆದರೆ ಯಾವುದೇ ಹಂತದಲ್ಲಿ ಆತಂಕ ಎದುರಿಸಲಿಲ್ಲ. ಕಾರಣ ಜೋಸ್ ಬಟ್ಲರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಡೇವಿಡ್ ಮಿಲನ್ 18 ರನ್ ಸಿಡಿಸಿ ನಿರ್ಗಮಿಸಿದರು.

ಜಾನಿ ಬೈರ್‌ಸ್ಟೋ ಜೊತೆ ಸೇರಿದ ಬಟ್ಲರ್ ಟೀಂ ಇಂಡಿಯಾ ಗೆಲುವನ್ನು ಕಸಿದುಕೊಂಡರು. ಬಟ್ಲರ್ ಅಜೇಯ 82 ರನ್ ಚಚ್ಚಿದರೆ, ಬೈರ್‌ಸ್ಟೋ ಅಜೇಯ 40 ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ 18.2 ಓವರ‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 

ಈ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಜ್ 2-1 ಮುನ್ನಡೆ ಸಾಧಿಸಿದೆ. ಇದೀಗ ನಾಲ್ಕನೇ ಟಿ20 ಪಂದ್ಯದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. 

click me!