
ಗೋವಾ(ಮಾ.16): ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದವೆ ದಿನದ ವರೆಗೂ ಬುಮ್ರಾ ಮದುವೆ ಕುರಿತು ಖಚಿತ ಮಾಹಿತಿ ಯಾರಿಂದಲೂ ಬಂದಿರಲಿಲ್ಲ. ಮದುವೆ ಬಳಿಕ ಸ್ವತ ಬುಮ್ರಾ ಹಾಗೂ ಸಂಜನಾ ಸಾಮಾಜಿಕ ಜಾಲತಾಣ ಮೂಲಕ ಸಂತಸ ಹಂಚಿಕೊಂಡಿದ್ದರು.
ಸಂಜನಾ ವರಿಸಿದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ; ಹೊಸ ಇನ್ನಿಂಗ್ಸ್‌ಗೆ ಕ್ರಿಕೆಟಿಗರ ಶುಭಾಶಯ!.
ಮದುವೆ ಸಮಾರಂಭಕ್ಕೂ ಕೆಲವೇ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮೊಬೈಲ್ ಫೋನ್ ನಿರ್ಬಂಧಿಸಲಾಗಿತ್ತು ಅನ್ನೋ ಮಾಹಿತಿಯೂ ಹೊರಬಿದ್ದಿತ್ತು. ಇದೀಗ ಬುಮ್ರಾ ಹಾಗೂ ಸಂಜನಾ ಮದುವೆ ಕುರಿತ ವಿಡಿಯೋ ವೈರಲ್ ಆಗಿದೆ. ಬುಮ್ರಾ ಹಾಗೂ ಸಂಜನಾ ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದಾಗಿದ್ದು, ಅಭಿಮಾನಿಗಲು ಬುಮ್ರಾ ಡ್ಯಾನ್ಸ್‌ಗೆ ಫಿದಾ ಆಗಿದ್ದಾರೆ.
ಬುಮ್ರಾ ಡ್ಯಾನ್ಸ್‌ನಲ್ಲೂ ಬೌಲಿಂಗ್ ಶೈಲಿ ಕಾಣುತ್ತಿದೆ. ಫೂಟ್ ವರ್ಕ್ ಅದೆ ರೀತಿ ಇದೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಜಸ್ಪ್ರೀತ್ ಬುಮ್ರಾ, ಮಾಡೆಲ್ ಹಾಗೂ ಸ್ಟಾರ್ ಸ್ಪೋರ್ಟ್ಸ್ ನಿರೂಪಕಿ ಸಂಜನಾ ಗಣೇಶನ್ ವಿವಾಹವಾಗಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಬುಮ್ರಾ ಹಾಗೂ ಸಂಜನಾ ಡೇಟ್ ಮಾಡುತ್ತಿದ್ದರು ಅನ್ನೋ ಮಾತುಗಳು ಕೇಳಿ ಬಂದಿದೆ. ಆದರೆ ಈ ಕುರಿತು ಬುಮ್ರಾ ಹಾಗೂ ಸಂಜನಾ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.