ರಾಜಸ್ಥಾನ ಬ್ಯಾಟರ್‌ಗಳು ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ಟರೂ, ಬಟ್ಲರ್ ಹೊರತುಪಡಿಸಿ ಯಾರೊಬ್ಬರೂ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಯಶಸ್ವಿ ಜೈಸ್ವಾಲ್(19), ಸಂಜು ಸ್ಯಾಮ್ಸನ್(12) ಬೇಗನೇ ಔಟಾದರು. ಈ ನಡುವೆ ರಿಯಾನ್ ಪರಾಗ್ 14 ಎಸೆತಗಳಲ್ಲಿ 34 ರನ್ ಸಿಡಿಸಿದ್ದರಿಂದ ತಂಡದ ಸ್ಕೋರ್ 8 ಓವರಲ್ಲೇ 98 ಆಗಿತ್ತು.
ಕೋಲ್ಕತಾ: ರಾಜಸ್ಥಾನ ರಾಯಲ್ಸ್‌ನ ಅಬ್ಬರಕ್ಕೆ ಬ್ರೇಕ್ ಬೀಳುವ ಯಾವ ಲಕ್ಷಣವೂ ಈ ಬಾರಿ ಐಪಿಎಲ್‌ನಲ್ಲಿ ಕಂಡುಬರುತ್ತಿಲ್ಲ. ಬೌಲರ್‌ಗಳು ಚಚ್ಚಿಸಿಕೊಂಡರೂ ಜೋಸ್ ಬಟ್ಲರ್‌ರ ಹೋರಾಟದ ಶತಕ ಮಂಗಳವಾರ ಈಡನ್ ಗಾರ್ಡನ್ಸ್‌ನ ರನ್ ಹೊಳೆಯಲ್ಲಿ ರಾಜಸ್ಥಾನಕ್ಕೆ ಕೋಲ್ಕತಾ ವಿರುದ್ಧ 2 ವಿಕೆಟ್ ಗೆಲುವು ತಂದುಕೊಟ್ಟಿದೆ. ತವರಿನ ಅಂಗಳದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಕೆಆರ್ ಟೂರ್ನಿಯ 2ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಬಾಕಿಯಾದರೆ, ರಾಜಸ್ಥಾನ 6ನೇ ಜಯದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಕೋಲ್ಕತಾ, ಸುನಿಲ್ ನರೈನ್‌ರ ಸಿಡಿಲಬ್ಬರದ ಶತಕದಿಂದಾಗಿ 20 ಓವರಲ್ಲಿ 6 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು 223 ರನ್. ಈಡನ್ ಗಾರ್ಡನ್ಸ್‌ನಲ್ಲಿ ಈ ಮೊತ್ತ ರಾಜಸ್ಥಾನ ಪಾಲಿಗೆ ದೊಡ್ಡದಾಗಿ ಕಂಡುಬಂದರೂ ಜೋಸ್ ಬಟ್ಲರ್‌ರ ಸ್ಫೋಟಕ ಆಟದ ಮುಂದೆ ಕೋಲ್ಕತಾ ನಿರುತ್ತರವಾಯಿತು. ಒಂದು ಹಂತದಲ್ಲಿ ತಂಡ ಸೋಲಿನ ಸುಳಿಗೆ ಸಿಲುಕಿದ್ದರೂ ಕೊನೆಯಲ್ಲಿ ಅಬ್ಬರಿಸಿದ ತಂಡ ಕೊನೆ ಎಸೆತದಲ್ಲಿ ಗೆಲುವಿನ ದಡ ಸೇರಿತು.
Another Last Over Thriller 🤩
A Jos Buttler special guides over the line and further extends their lead at the 🔝 🙌 🙌
Scorecard ▶️ https://t.co/13s3GZLlAZ | pic.twitter.com/d3FECR81X1
IPL 2024 ಸುನಿಲ್ ನರೈನ್ ಸ್ಪೋಟಕ ಶತಕ, ರಾಜಸ್ಥಾನಕ್ಕೆ ಕೆಕೆಆರ್ ಕಠಿಣ ಗುರಿ
ರಾಜಸ್ಥಾನ ಬ್ಯಾಟರ್‌ಗಳು ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ಟರೂ, ಬಟ್ಲರ್ ಹೊರತುಪಡಿಸಿ ಯಾರೊಬ್ಬರೂ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಯಶಸ್ವಿ ಜೈಸ್ವಾಲ್(19), ಸಂಜು ಸ್ಯಾಮ್ಸನ್(12) ಬೇಗನೇ ಔಟಾದರು. ಈ ನಡುವೆ ರಿಯಾನ್ ಪರಾಗ್ 14 ಎಸೆತಗಳಲ್ಲಿ 34 ರನ್ ಸಿಡಿಸಿದ್ದರಿಂದ ತಂಡದ ಸ್ಕೋರ್ 8 ಓವರಲ್ಲೇ 98 ಆಗಿತ್ತು. ಆದರೆ ಧ್ರುವ್ ಜುರೆಲ್(02), ಅಶ್ವಿನ್(08), ಹೆಟ್ಮೇಯರ್(00) ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ಮರಳಿದ್ದು ತಂಡಕ್ಕೆ ಮುಳುವಾಯಿತು. ಕೊನೆ 6 ಓವರಲ್ಲಿ 96 ರನ್ ಬೇಕಿದ್ದಾಗ ಬಟ್ಲರ್(60 ಎಸೆತಗಳಲ್ಲಿ 107) ಸ್ಫೋಟಕ ಆಟವಾಡಿ ತಂಡವನ್ನು ಗೆಲ್ಲಿಸಿದರು. ಪೋವೆಲ್ 26 ರನ್ ಸಿಡಿಸಿದ್ದು ಗೆಲುವಿನ ಪ್ರಮುಖ ಪಾತ್ರವಹಿಸಿತು.
Relive the The Buttler Show 😍
A 107*(60) from Jos Buttler stirred to another victory this season
ನರೈನ್ ಸೆಂಚುರಿ: ರಾಜಸ್ಥಾನದ ಬೌಲರ್‌ಗಳನ್ನು ಈ ಪಂದ್ಯದಲ್ಲಿ ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದ್ದು ನರೈನ್‌ಗೆ ಮಾತ್ರ. ಆರಂಭದಲ್ಲೇ ಅಬ್ಬರಿಸಲು ಶುರುವಿಟ್ಟ ನರೈನ್ 56 ಎಸೆತಗಳಲ್ಲಿ 13 ಬೌಂಡರಿ, 6 ಸಿಕ್ಸರ್‌ನೊಂದಿಗೆ 109 ರನ್ ಚಚ್ಚಿದರು. ಉಳಿದಂತೆ ಅಂಗ್‌ಕೃಷ್ ರಘುವಂಶಿ 18 ಎಸೆತಗಳಲ್ಲಿ 30, ರಿಂಕು ಸಿಂಗ್ 9 ಎಸೆತಗಳಲ್ಲಿ 20 ರನ್ ಸಿಡಿಸಿ ತಂಡವನ್ನು 220ರ ಗಡಿ ದಾಟಿಸಿದರು. ಆವೇಶ್ ಖಾನ್, ಕುಲ್ದೀಪ್ ಸೆನ್ ತಲಾ 2 ವಿಕೆಟ್ ಕಿತ್ತರು.
ಸ್ಕೋರ್:
ಕೋಲ್ಕತಾ 20 ಓವರಲ್ಲಿ 223/6 (ನರೈನ್ 109, ರಘುವಂಶಿ 30, ಆವೇಶ್ 2-35),
ರಾಜಸ್ಥಾನ 20 ಓವರಲ್ಲಿ 224/8 (ಬಟ್ಲರ್ 107, ರಿಯಾನ್ 34, ನರೈನ್ 2-30)