ಸೋಲಿನ ಬೆನ್ನಲ್ಲೇ ICC ಟೆಸ್ಟ್ ‌ರ‍್ಯಾಂಕ್‌ನಲ್ಲಿ ಭಾರಿ ಬದಲಾವಣೆ; ಕುಸಿತ ಕಂಡ ಕೊಹ್ಲಿ!

By Suvarna News  |  First Published Feb 10, 2021, 3:17 PM IST

ಇಂಗ್ಲೆಂಡ್ ವಿರುದ್ಧದ ಭಾರತ ತಂಡದ ಸೋಲು, ಸೌತ್ ಆಫ್ರಿಕಾ ವಿರುದ್ಧ ಪಾಕಿಸ್ತಾನದ ಗೆಲುವು ಐಸಿಸಿ ಟೆಸ್ಟ್ ರ‍್ಯಾಂಕ್‌‌ನಲ್ಲಿ ಭಾರಿ ಬದಲಾವಣೆಯಾಗಿದೆ. ನಾಯಕ ವಿರಾಟ್ ಕೊಹ್ಲಿ ರ‍್ಯಾಂಕ್‌ ಕುಸಿತ ಕಂಡಿದ್ದರೆ, ಇಂಗ್ಲೆಂಡ್ ನಾಯಕ ಜೋ ರೂಟ್ ಭರ್ಜರಿ ಬಡ್ತಿ ಪಡೆದಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.


ದುಬೈ(ಫೆ.10): ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ‍್ಯಾಂಕ್‌‌ನಲ್ಲಿ ಕುಸಿತ ಕಂಡಿದ್ದಾರೆ. 2 ಸ್ಥಾನ ಕುಸಿತ ಕಂಡಿರುವ ವಿರಾಟ್ ಕೊಹ್ಲಿ ಸದ್ಯ 5ನೇ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಇತ್ತ ದ್ವಿಶತಕ ಸಿಡಿಸಿ ಅಬ್ಬರಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್ ಬಡ್ತಿ ಪಡೆದಿದ್ದಾರೆ.

ಕೊಹ್ಲಿ ಕೆಳಗಿಳಿಸಿ, ರಹಾನೆಗೆ ನಾಯಕತ್ವ ಪಟ್ಟ ಕಟ್ಟಿ; ನೆಟ್ಟಿಗರ ಆಗ್ರಹ

Latest Videos

undefined

ಜೋ ರೂಟ್ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮೊದಲ ಸ್ಥಾನವನ್ನು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್  ಅಲಂಕರಿಸಿದ್ದಾರೆ. 2ನೇ ಸ್ಥಾನ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಪಡೆದುಕೊಂಡಿದ್ದಾರೆ.

ಟಾಪ್ 10 ಪಟ್ಟಿಯಲ್ಲಿರುವ ಮತ್ತೊರ್ವ ಟೀಂ ಇಂಡಿಯಾ ಕ್ರಿಕೆಟಿಗ ಚೇತೇಶ್ಪರ್ ಪೂಜಾರ. ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ 7ನೇ ಸ್ಥಾನದಲ್ಲಿದ್ದಾರೆ. ಐಸಿಸಿ ಟೆಸ್ಟ್ ಬೌಲಿಂಗ್ ಟಾಪ್ 10 ರ‍್ಯಾಂಕ್‌ ಪಟ್ಟಿಯಲ್ಲಿ ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರು ಕಾಣಿಸಿಕೊಂಡಿದ್ದಾರೆ. ಆರ್ ಅಶ್ವಿನ್ 7ನೇ ಸ್ಥಾನದಲ್ಲಿದ್ದರೆ, ಜಸ್ಪ್ರೀತ್ ಬುಮ್ರಾ 8ನೇ ಸ್ಥಾನದಲ್ಲಿದ್ದಾರೆ. 

ಚೆನ್ನೈ ಟೆಸ್ಟ್‌: ಭಾರತಕ್ಕೆ ಆಘಾತಕಾರಿ ಸೋಲು, ಇಂಗ್ಲೆಂಡ್‌ ಶುಭಾರಂಭ

ಐಸಿಸಿ ಟೆಸ್ಟ್ ಆಲ್ರೌಂಡರ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ರವೀಂದ್ರ ಜಡೇಜಾ 3ನೇ ಸ್ಥಾನದಲ್ಲಿದ್ದರೆ, ಆರ್ ಅಶ್ವಿನ್ 6ನೇ ಸ್ಥಾನದಲ್ಲಿದ್ದಾರೆ.

click me!