ಈತ ಶೀಘ್ರದಲ್ಲೇ ಟೀಮ್‌ ಇಂಡಿಯಾ ಉಪನಾಯಕ ಆಗ್ತಾನೆ, ಆಕಾಶ್‌ ಚೋಪ್ರಾ ಬೋಲ್ಡ್‌ ಪ್ರೆಡಿಕ್ಷನ್‌

Published : Oct 02, 2026, 05:19 PM IST
Aakash Chopra on Ishan Kishan

ಸಾರಾಂಶ

ಏಷ್ಯನ್ ಗೇಮ್ಸ್ ಫೈನಲ್ ಪಂದ್ಯದ ಬೆನ್ನಲ್ಲೇ ಇಶಾನ್ ಕಿಶನ್ ಶೀಘ್ರದಲ್ಲೇ ಭಾರತ ಟಿ20 ತಂಡದ ಉಪನಾಯಕನಾಗಲಿದ್ದಾರೆ ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿನ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನವೇ ಈ ಭರವಸೆಗೆ ಕಾರಣವಾಗಿದೆ.

ಬೆಂಗಳೂರು (ಅ.2): ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಭಾರತದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಕುರಿತು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಭಾರಿ ಭವಿಷ್ಯ ನುಡಿದಿದ್ದಾರೆ. ಶೀಘ್ರದಲ್ಲೇ ಇಶಾನ್ ಕಿಶನ್ ಭಾರತ ಟಿ20 ತಂಡದ ಉಪನಾಯಕ (Vice-Captain) ಪಟ್ಟಕ್ಕೇರಲಿದ್ದಾರೆ ಎಂದು ಚೋಪ್ರಾ ಭವಿಷ್ಯ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 46 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 80 ರನ್ ಸಿಡಿಸಿ ಭಾರತದ ಟಾಪ್ ಸ್ಕೋರರ್ ಎನಿಸಿಕೊಂಡಿದ್ದರು. ಕಿಶನ್ ಅವರ ಈ ಆಕರ್ಷಕ ಬ್ಯಾಟಿಂಗ್ ನೆರವಿನಿಂದಲೇ ಭಾರತ ತಂಡ 169 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಗಿತ್ತು.

6 ತಿಂಗಳಲ್ಲಿ ಇದು ಸಂಭವಿಸಲಿದೆ: ಆಕಾಶ್ ಚೋಪ್ರಾ

ಈ ಕುರಿತು ಮಾತನಾಡಿದ ಆಕಾಶ್ ಚೋಪ್ರಾ, "ಸೆಮಿಫೈನಲ್ ಪಂದ್ಯದಲ್ಲಿ ನಮ್ಮ ಮಧ್ಯಮ ಬ್ಯಾಟಿಂಗ್ ಕ್ರಮಾಂಕ ಕುಸಿದಾಗ ಕ್ರೀಸ್‌ಗೆ ಬಂದ ಇಶಾನ್ ಕಿಶನ್ ಜವಾಬ್ದಾರಿಯುತವಾಗಿ ಆಡಿ 80 ರನ್ ಕಲೆಹಾಕಿದರು. ಪ್ರತಿಯೊಂದು ಪಂದ್ಯದಿಂದ ಪಂದ್ಯಕ್ಕೆ ತಂಡದಲ್ಲಿ ಅವರ ಸ್ಥಾನ ಅತ್ಯಂತ ಗಟ್ಟಿಯಾಗುತ್ತಿದೆ. ಶೀಘ್ರದಲ್ಲೇ ಅವರು ಟೀಮ್ ಇಂಡಿಯಾದ ಉಪನಾಯಕನಾಗಲಿದ್ದಾರೆ ಎಂಬ ಸಂಪೂರ್ಣ ಭರವಸೆ ನನಗಿದೆ. ಈಗ ತಕ್ಷಣಕ್ಕೆ ನಡೆಯದಿದ್ದರೂ ಮುಂಬರುವ 6 ತಿಂಗಳ ಒಳಗಾಗಿ ಇದು ಖಂಡಿತ ಸಂಭವಿಸಲಿದೆ. ಈ ಯುವ ಆಟಗಾರನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಅವರು ಸತತವಾಗಿ ರನ್ ಬೆಟ್ಟ ಕಟ್ಟುತ್ತಿದ್ದಾರೆ" ಎಂದು ಬಣ್ಣಿಸಿದ್ದಾರೆ.

2026ರ ಟಿ20 ಕ್ರಿಕೆಟ್‌ನ ರನ್ ಸರದಾರ!

ಪ್ರಸಕ್ತ 2026ರ ಸಾಲಿನಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪ್ರಸ್ತುತ ಇಶಾನ್ ಕಿಶನ್ ಹೆಸರಿನಲ್ಲಿದೆ. ಈ ವರ್ಷ ಆಡಿದ 28 ಇನ್ನಿಂಗ್ಸ್‌ಗಳಿಂದ 37.88 ಸರಾಸರಿ ಹಾಗೂ 171.30 ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬರೋಬ್ಬರಿ 985 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 7 ಅರ್ಧಶತಕಗಳು ಸೇರಿವೆ. ಈ ವರ್ಷ ಭಾರತ ಜಯಿಸಿದ ಟಿ20 ವಿಶ್ವಕಪ್‌ನಲ್ಲೂ ಇಶಾನ್ ಅತ್ಯಂತ ನಿರ್ಣಾಯಕ ಪ್ರದರ್ಶನ ನೀಡಿದ್ದರು.

ಇದುವರೆಗೆ ಭಾರತದ ಪರ 60 ಟಿ20 ಪಂದ್ಯಗಳನ್ನು ಆಡಿರುವ ಇಶಾನ್ ಕಿಶನ್ ಒಟ್ಟು 1,781 ರನ್ ಕಲೆಹಾಕಿದ್ದಾರೆ. ಇತ್ತೀಚಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 40 ಎಸೆತಗಳಲ್ಲಿ 77 ರನ್ ಬಾರಿಸಿ ಪಂದ್ಯಾವಳಿಯ ಶ್ರೇಷ್ಠ ಪ್ರದರ್ಶನ ನೀಡಿದ್ದರು. ನಾಳೆ ನಡೆಯಲಿರುವ ಏಷ್ಯನ್ ಗೇಮ್ಸ್ ಮಹಾಸಮರದಲ್ಲೂ ಅಭಿಮಾನಿಗಳು ಇಶಾನ್ ಕಿಶನ್ ಅವರಿಂದ ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ನಿರೀಕ್ಷೆಯಲ್ಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮತ್ತೆ ಮೈದಾನಕ್ಕಿಳಿಯುತ್ತಿದ್ದಾರೆ ಯುವರಾಜ್, ಡಿವಿಲಿಯರ್ಸ್, ಗೇಲ್, ನಾಳೆಯಿಂದ ಟೂರ್ನಿ
ವೈಯಕ್ತಿಕ ಜೀವನದ ಭಾರೀ ಹಿನ್ನಡೆ ನಡುವೆಯೇ ಮಹತ್ತರ ನಿರ್ಧಾರ ಮಾಡಿದ ಯಜುವೇಂದ್ರ ಚಾಹಲ್‌, ಕನಸಾಗಿಯೇ ಉಳಿದ ಡ್ರೀಮ್‌